ಕಾಂಚನ: ವಿಷು ಹಬ್ಬ ಮತ್ತು ಕೃಷಿ ಕಾರ್ಮಿಕ ಎಲ್ಯಣ್ಣ ಶಿವಪುರರಿಗೆ ಸನ್ಮಾನ

ಶೇರ್ ಮಾಡಿ

ನೇಸರ ಎ.17: ಜೇಸಿ ಉಪ್ಪಿನಂಗಡಿ ಘಟಕದ ವತಿಯಿಂದ ವಿಷು ಹಬ್ಬದ ಆಚರಣೆ ತೋಟದ ಮನೆ ಪದಕದಲ್ಲಿ ನಡೆಯಿತು. ನೇಮಣ್ಣ ಗೌಡ ತೋಟದ ಮನೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಕೆ.ವಿ ಕುಲಾಲ್, ವಿಷು ಹಬ್ಬದ ಕುರಿತು ಮಾತನಾಡಿ ಒಳ್ಳೆಯ ಉದ್ದೇಶಗಳ ಹಿನ್ನೆಲೆಯಲ್ಲಿ ಆಚರಣೆಯನ್ನು ಹಿರಿಯರು ಆರಂಭ ಮಾಡಿದ್ದಾರೆ. ಇದರ ಮಹತ್ವವನ್ನು ತಿಳಿದು ಭವಿಷ್ಯದ ಪೀಳಿಗೆಗೆ ತಿಳಿಸುವ ಅನಿವಾರ್ಯ ಸಂದರ್ಭ ಒದಗಿ ಬಂದಿದೆ, ಅ ನಿಟ್ಟಿನಲ್ಲಿ ಘಟಕದ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರಾಗಿ ದುಡಿದ ಎಲ್ಯಣ್ಣ ಶಿವಪುರ ಇವರಿಗೆ ಗೌರವಾರ್ಪಣೆ ನಡೆಯಿತು. ಜೇಸಿ ಮಹೇಶ್ ಖಂಡಿಗ ಗೌರವ ಪುರಸ್ಕಾರಕ್ಕೆ ಭಾಜನರಾದವರ ಕುರಿತು ಮಾತನಾಡಿ, ತುಳುನಾಡಿನ ವಿಶೇಷ ವಿಷು ಹಬ್ಬದ ದಿನದಂದು ತೆಂಗು, ಅಡಿಕೆ ಕೃಷಿಯಲ್ಲಿನ ಕಠಿನ ಕೆಲಸಗಳಾದ ಔಷಧಿ ಸಿಂಪಡಿಸುವುದು, ಫಸಲು ಕಟಾವು, ಸಿಪ್ಪೆ ಸುಲಿಯುವ ಕೆಲಸ‌ ಸೇರಿದಂತೆ ಕೃಷಿ ಕುಟುಂಬದ ನೂರಾರು ಮನೆಯ ತೋಟದಲ್ಲಿ ದುಡಿದು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ಎಲ್ಯಣ್ಣ ಶಿವಪುರ ಇವರ ಸಾಮಾಜಿಕ ಜವಾಬ್ದಾರಿಯನ್ನು ಸ್ಮರಿಸಿ ಅಭಿನಂದಿಸಿದರು.

ಸೀನರ್ ಜೇಸಿ ಘಟಕದ ಉಪಾಧ್ಯಕ್ಷರಾದ ಜೇಸಿ ಪ್ರಶಾಂತ್ ಕುಮಾರ್ ರೈ ಸಾಧಕರಿಗೆ ಘಟಕ ನೀಡುವ “ಸೆಲ್ಯೂಟ್ ಟು ದಿ ಸೈಲೆಂಟ್ ವರ್ಕರ್” ಪುರಸ್ಕಾರ ನೀಡಿ ಗೌರವಿಸಿದರು. ಅಧ್ಯಕ್ಷತೆಯನ್ನು ಘಟಕ ಅಧ್ಯಕ್ಷರಾದ ಜೇಸಿ ಮೋಹನ್ ಚಂದ್ರ ತೋಟದ ಮನೆ ವಹಿಸಿದ್ದರು. ಕೊರಗಪ್ಪ, ಪದ್ಮನಾಭ, ಭರತ್ ಶಿವಪುರ ಉಪಸ್ಥಿತರಿದ್ದರು. ಜೇಸಿ ಪ್ರವೀಣ್ ಪಿಂಟೊ ಪುಯಿಲ ವಂದಿಸಿದರು. ಜೇ‌ಸಿ ಪುರುಷೋತ್ತಮ ತೋಟದ ಮನೆ ಸಹಕರಿಸಿದರು.

—ಜಾಹೀರಾತು—

Leave a Reply

error: Content is protected !!