ನೇಸರ ಎ.23: ಮನುಷ್ಯ ಯಾವ ರೀತಿ ಜೀವನ ಸಾಗಿಸಬಹುದು ಎಂಬುದನ್ನು ಕೋರೋನದಂತಹ ಸಂಕಷ್ಟ ದಿನಗಳು ನಮಗೆ ತಿಳಿಸಿಕೊಟ್ಟಿದೆ. ವಯಸ್ಸು ಎಂಬುದು ಯಾವುದೇ ಸೇವೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆ ಒಂದು ಉದಾಹರಣೆಯಾಗಿದೆ. ಇಂದಿನ ಯುವಜನಕ್ಕೆ ಹಿರಿಯರ ಮಾರ್ಗದರ್ಶನ ಅತಿ ಅಗತ್ಯವಾಗಿದೆ, ಎಂಬುದಾಗಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕಡಬ ಲೀಜನ್ ಗೆ ನೂತನವಾಗಿ ಆಯ್ಕೆಯಾದ Snr.ದೇವಿಪ್ರಸಾದ್ ಗೌಡ ಮತ್ತು ತಂಡದವರ ಪದಗ್ರಹಣ ಸಮಾರಂಭವು ಎ.22ರಂದು ಒಕ್ಕಲಿಗ ಗೌಡ ಸಮುದಾಯ ಸಭಾಭವನ ಕಡಬದಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಮಾಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸದಸ್ಯರಾದ ಕೃಷ್ಣ ಶೆಟ್ಟಿ ರವರು ಮಾತನಾಡಿದರು.
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ Snr. ಡಾ.ಅರವಿಂದ ರಾವ್ ಕೇದಿಗೆ ಮಾತನಾಡಿ ಪ್ರತಿಯೊಂದು ಸಂಘ ಸಂಸ್ಥೆಯ ಬೆಳವಣಿಗೆಯಲ್ಲಿ ಸವಾಲುಗಳನ್ನು ಕಾಣುತ್ತೇವೆ. ಅಂತಹ ಸವಾಲುಗಳ ನಡುವೆ ಎದ್ದು ನಿಂತು ಕಾರ್ಯಾಚರಿಸುವ ಸಂಸ್ಥೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಆಗಿದೆ, ಪ್ರತಿವರ್ಷ ಅಕ್ಟೋಬರ್ 18 ಅಂತರ್ ರಾಷ್ಟ್ರೀಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ದಿನವನ್ನಾಗಿ ಆಚರಿಸಲಾಗುವುದು ಎಂದು ತಿಳಿಸಿದರು. ಜಲದಾರ ದಂತಹ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಮೂಲಕ ಸಂಸ್ಥೆಯನ್ನು ಗುರುತಿಸುವಂತಾಗಿದೆ ಎಂದರು ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು.
ವೇದಿಕೆಯಲ್ಲಿ ಅಭಿವೃದ್ಧಿ ಹಾಗೂ ಬೆಳವಣಿಗೆಯ ನಿರ್ದೇಶಕರಾದ Snr.ಹರಿಪ್ರಸಾದ್ ರೈ, ಸ್ಥಾಪಕ ಅಧ್ಯಕ್ಷರಾದ Snr.ಟೈಟಸ್ ವರ್ಗೀಸ್
ಅಧ್ಯಕ್ಷರಾದ Snr.PPF.ಚೇರಿಯನ್ ಬೇಬಿ.ಇ.ಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ನಿರೂಪಿಸಿ ಅಧ್ಯಕ್ಷೀಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ Snr.ದೇವಿಪ್ರಸಾದ್ ಗೌಡ ರವರಿಗೆ ಪ್ರಮಾಣವಚನವನ್ನು ಬೋಧಿಸಿ ಅಧಿಕಾರವನ್ನು ಹಸ್ತಾಂತರಿಸಿದರು. ಕಾರ್ಯದರ್ಶಿಗಳಾದ Snr.ಅರುಣ್ ಕುಮಾರ್ ಎಂ.ಎಸ್ ರವರು ಗತಕಾಲದ ವರದಿಯನ್ನು ಸಭೆಗೆ ಮಂಡಿಸಿದರು ಹಾಗೂ ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ Snr.ಜೋಕಿಮ್ ಡಿಸೋಜಾ ರವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಖಜಾಂಚಿ Snr.ದಯಾನಂದ ಗೌಡ ಗತಕಾಲದ ಆಯವ್ಯಯಗಳನ್ನು ಸಭೆಗೆ ಮಂಡಿಸಿದರು ಹಾಗೂ ನೂತನವಾಗಿ ಆಯ್ಕೆಯಾದ ಖಜಾಂಚಿ Snr.ಶಿವರಾಮ ಶೆಟ್ಟಿ ಕೇಪು ರವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ನೂತನ ಅಧ್ಯಕ್ಷರಾದ Snr.ದೇವಿಪ್ರಸಾದ್ ಗೌಡ ಅಧ್ಯಕ್ಷ ಸ್ಥಾನವನ್ನು ವಹಿಸಿ ಎಲ್ಲರ ಸಹಕಾರವನ್ನು ಕೋರಿದರು ಹಾಗೂ ಕಡಬ ಲೀಜನ್ ನ ಶಾಶ್ವತ ಕಾರ್ಯಕ್ರಮವಾದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಶಾಲಾ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಂಚಲಾಯಿತು ಅಲ್ಲದೇ ಒಬ್ಬ ವಿಕಲಚೇತನ ವಿದ್ಯಾರ್ಥಿಯನ್ನು ಗುರುತಿಸಿ ಪ್ರೋತ್ಸಾಹಧನವನ್ನು ನೀಡಲಾಯಿತು.
ಸಭೆಯಲ್ಲಿ ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಅಬ್ರಹಾಂ ವರ್ಗೀಸ್, Snr. ವಿಶ್ವನಾಥ ಶೆಟ್ಟಿ, Snr.ಕಿಶೋರ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು. Snr.ಸೀತಾರಾಮ ಜೇಸಿವಾಣಿ ವಾಚಿಸಿದರು. Snr.ವಿಶ್ವನಾಥ.ಪಿ.ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ Snr.ಜೋಕಿಮ್ ಡಿಸೋಜಾ ಧನ್ಯವಾದ ಸಮರ್ಪಿಸಿ ದರು.
—ಜಾಹೀರಾತು—