
ನೇಸರ ಎ.22: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ನಿರ್ದೇಶನದಂತೆ, ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಬಯಲು ಕಸ ಮುಕ್ತ ಗ್ರಾಮವನ್ನಾಗಿಸುವ ಆಶಯದಂತೆ ಇಂದು ಎ.22 ರ ಬೆಳಿಗ್ಗೆ 9.00 ಗಂಟೆಯಿಂದ 12.00 ಗಂಟೆವರೆಗೆ ಸೂರ್ಯತ್ತವುಯಿಂದ ಅನಾರು ದೇವಸ್ಥಾನದ ವರೆಗೆ ಒಂದು ತಂಡ ಹಾಗೂ ಪಟ್ರಮೆ ಗ್ರಾಮಪಂಚಾಯತ್ ಯಿಂದ ಅನಾರು ದೇವಸ್ಥಾನದ ವರೆಗೆ ಇನ್ನೊಂದು ತಂಡವಾಗಿ, ಒಟ್ಟು 2 ತಂಡಗಳ ಮೂಲಕ ನೋಡೆಲ್ ಅಧಿಕಾರಿಯಾದ ಡಾ.ಜಯಕೀರ್ತಿ ಜೈನ್ ಮಾರ್ಗದರ್ಶನದಲ್ಲಿ ರಸ್ತೆ ಬದಿ ಕಸವನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಗ್ರಾಮಸ್ಥರಿಗೆ ಹಾಗೂ ಸ್ಥಳೀಯ ವರ್ತಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಕೆಲಸ ಮಾಡಲಾಯಿತು. ಈ ಕಾರ್ಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ, ಉಪಾಧ್ಯಕ್ಷರಾದ ಯತೀಶ್ ಕುಮಾರ್ ಪಿ, ಪಂ.ಅ.ಅಧಿಕಾರಿ ರಿತೇಶ್ ಎನ್ ಪುತ್ರನ್, ಪಂ.ಸದಸ್ಯರಾದ ಮನೋಜ್, ಗಿರಿಜ, ಮೀನಾ ಕುಮಾರಿ ಕಾರ್ಯದರ್ಶಿ ಅಮ್ಮಿ ಬಿ.ಪಿ, ಪಂಚಾಯತ್ ಸಿಬ್ಬಂದಿ ಪ್ರಸನ್ನ, ಲೋಕೇಶ್ ಎಸ್, ಕುಶಾಲಪ್ಪ ಗೌಡ, ಆರೋಗ್ಯ ಇಲಾಖೆಯ ಆಶಾಲತಾ, ಭುವನೇಶ್ವರಿ, ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೇವಾ ಪ್ರತಿನಿಧಿ ಸದಾಶಿವ, ಸಂಜೀವಿನಿ ಒಕ್ಕೂಟದ LCRP ನಳಿನಿ ಹಾಗೂ ಸದಸ್ಯರು, ಸ್ವಚ್ಚತಾ ಪ್ರೇರಕಿ ವನಿತಾ, ಆಶಾ ಕಾರ್ಯಕರ್ತೆ ಸರಸ್ವತಿ, ಊರ ಮುಖಂಡರಾದ ದೇವಪಾಲ ಅಜ್ರಿ, ಶರತ್, ಡಾಗಯ್ಯ, ರುಕ್ಮಯ್ಯ, ಶೀನ ಎಂ.ಕೆ, ವೀರಮ್ಮ, ವೇದಾವತಿ ಸ್ವಚ್ಚತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಉಪಹಾರ ವ್ಯವಸ್ಥೆ ಮಾಡಿದ ಅನಾರು ದೇವಸ್ತಾನದ ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸಲಾಯಿತು.
—ಜಾಹೀರಾತು—




