ಕೊಯಿಲ ಕೆ.ಸಿ. ಫಾರ್ಮ್ ಸರಕಾರಿ ಶಾಲೆ ಆವರಣದ ಸುತ್ತ ಅಡಿಕೆ ತೋಟ ನಿರ್ಮಾಣ

ಶೇರ್ ಮಾಡಿ

ನೇಸರ ಎ.26:ಸರಕಾರಿ ಶಾಲೆಯೊಂದರ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಒಟ್ಟಾಗಿ ಶಾಲೆಯ ಅರ್ಥಿಕತೆಯನ್ನು ಪೋಷಿಸುವ ಸಲುವಾಗಿ ಕೊಯಿಲ ಕೆ ಸಿ ಫಾರ್ಮ್ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಆವರಣದ ಸುತ್ತ ಅಡಿಕೆ ತೋಟ ನಿರ್ಮಾಣ ಮಾಡಿದ್ದಾರೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿ ಪುತ್ಯೆ ಮುಂದಾಳತ್ವದಲ್ಲಿ ಈ ಕಾರ್ಯ ನಡೆದಿದೆ. ಶಾಲೆ ಹಿಂಭಾಗದಲ್ಲಿ ಖಾಲಿ ಇರುವ ಜಾಗದಲ್ಲಿ ಸುಮಾರು 450 ಅಡಿಕೆ ಸಸಿ ನಾಟಿ ಮಾಡಲಾಗಿದೆ. ಅಲ್ಲದೆ ಶಾಲಾ ಆವರಣದ ಸುತ್ತ ಸುಮಾರು 30 ತೆಂಗಿನ ಸಸಿ ನೆಡುವ ಸಲುವಾಗಿ ಹೊಂಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೃಷಿ ಕಾರ್ಯಕ್ಕೆಲ್ಲ ಶಾಲೆಯ ಕೊಳವೆ ಬಾವಿಯಿಂದ ನೀರು ಪೂರೈಸಲಾಗುತ್ತದೆ. ನೀರಾವರಿಗಾಗಿ ಪೈಪ್‌ ಗಳನ್ನು ಅಳವಡಿಸಲಾಗಿದೆ. ಅಡಿಕೆ ಕೃಷಿಯ ಆರಂಭದಲ್ಲಿ ನೆಲ ಸಮತಟ್ಟುಗೊಳಿಸಿ ಬಳಿಕ ನರೇಗಾ ಯೋಜನೆಯಡಿ ಹೊಂಡ ನಿರ್ಮಾಣ ಮಾಡಲಾಗಿದೆ. ವಿವಿಧ ದಾನಿಗಳ ನೆರವಿನಲ್ಲಿ ಈ ತೋಟ ನಿರ್ಮಾಣವಾಗಿದೆ.

ವೀಕ್ಷಿಸಿ SUBSCRIBERS ಮಾಡಿ

 

💐 ಜಾಹೀರಾತು 💐

Leave a Reply

error: Content is protected !!