ನೇಸರ ಎ.25: ಶಿಬಾಜೆ ಗ್ರಾಮದ ಗುಡ್ಡಗಾಡು ಪ್ರದೇಶವಾದ ಪೊಸೋಡಿ -ಬಂಗೇರಡ್ಕದ ಜನರು ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸೇತುವೆಯ ಭಾಗ್ಯ ಕಂಡಿರಲಿಲ್ಲ. ಸರಿಯಾದ ರಸ್ತೆಯೂ ಇರಲಿಲ್ಲ. ಕಾಲ್ನಡಿಗೆಯಲ್ಲೇ ತೆರಳಿ ತಲೆಹೊರೆಯಲ್ಲೇ ಜನರು ಸರಕು, ಸಾಮಗ್ರಿಗಳನ್ನು ಹೊತ್ತೊಯುತ್ತಿದ್ದರು. ಇದೀಗ ಶಾಸಕ ಹರೀಶ್ ಪೂಂಜರವರ ಮುತುವರ್ಜಿಯಿಂದ ಸರ್ವ ಋತು ಕಾಂಕ್ರೀಟ್ ರಸ್ತೆ ಮತ್ತು ಸಂಪರ್ಕ ಸೇತುವೆ ನಿರ್ಮಾಣವಾಗಿದ್ದು ಹರೀಶ್ ಪೂಂಜ ರವರು ಏಪ್ರಿಲ್ 24ರಂದು ಲೋಕಾರ್ಪಣೆ ಮಾಡಿದರು.
ಲೋಕಾರ್ಪಣೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಿಬಾಜೆ ಗ್ರಾ.ಪಂ.ಅಧ್ಯಕ್ಷ ರತೀಶ್ ಗೌಡ ಬೇಂಗಳ, ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ವಿನಯಚಂದ್ರ ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಅನಿತಾ ವಸಂತ ಶೆಟ್ಟಿಗಾರ್, ಯಮುನಾ ಕುರುಂಜ, ರತ್ನ ಪತ್ತಿಮಾರ್,ಶಕ್ತಿ ಕೇಂದ್ರ ಪ್ರಮುಖ್ ದಿನಕರ್ ಕುರೂಪ್, ಊರ ಪ್ರಮುಖರಾದ ಪ್ರೇಮಚಂದ್ರ ರಾವ್, ಪುರಂದರ ರಾವ್, ವೃಷಾಂಕ್ ಖಾಡಿಲ್ಕರ್ ಮೊದಲಾದವರು ಉಪಸ್ಥಿತರಿದ್ದರು.
ಸೇತುವೆ ನಿರ್ಮಾಣಕ್ಕಾಗಿ ಸ್ಥಳದಾನ ನೀಡಿದ ಸ್ಥಳೀಯ ನಿವಾಸಿ ಟಿ.ಜಾನ್ ರವರನ್ನು ಹಾಗೂ ಕ್ಲಪ್ತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ ಕಾಂಟ್ರಾಕ್ಟರ್ ಪ್ರಭಾಕರ್, ಸ್ಥಳೀಯರಾದ ರಮೇಶ್ ರವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
💐 ಜಾಹೀರಾತು 💐