ಮಾಸ್ಕ್ ಕಡ್ಡಾಯ, ಸಿಎಂ ಸಭೆಯಲ್ಲಿ ತೀರ್ಮಾನ: ಸಚಿವ ಡಾ.ಕೆ.ಸುಧಾಕರ್

ಶೇರ್ ಮಾಡಿ

ನೇಸರ ಎ.25: ಕರೊನಾ ನಾಲ್ಕನೇ ಅಲೆ ಪ್ರವೇಶ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದ್ದು, ಜನನಿಬಿಡ ಹಾಗೂ ಒಳಾಂಗಣ ಸಭೆಗಳಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ ಇಂದು( ಎ.25) ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ನಂತರ ಸುದ್ದಿಗಾರರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಈ ವಿಷಯ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ಸಭೆಯಲ್ಲಿ ನೀಡಲಿರುವ ನಿರ್ದೇಶನ ನೋಡಿಕೊಂಡು ಮತ್ತೊಂದು ಸುತ್ತಿನ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಾವುದು. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಉಪಕ್ರಮ ಸದ್ಯಕ್ಕಿಲ್ಲ. ಬೆಳವಣಿಗೆಯನ್ನು ಕಾದು ನೋಡಲು ಸಿಎಂ ಬೊಮ್ಮಾಯಿ‌ ನಿರ್ಧರಿಸಿದ್ದಾರೆ.
ಈ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಮಾರ್ಗಸೂಚಿ ಹೊರಡಿಸಿ, ವ್ಯಾಪಕ ಜನ ಜಾಗೃತಿಗೆ ಸಿಎಂ ಬೊಮ್ಮಾಯಿ‌ ಸೂಚಿಸಿದ್ದಾರೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

—ಜಾಹೀರಾತು—

Leave a Reply

error: Content is protected !!