ರಾಮಕುಂಜ: ಬೃಹತ್‌ ಶಿಲಾಯುಗ ಗುಹಾ ಸಮಾಧಿ ಪತ್ತೆ

ಶೇರ್ ಮಾಡಿ

ನೇಸರ ಎ.26:ರಾಮಕುಂಜ ಗ್ರಾಮದ ಆತೂರು ಕುಂಡಾಜೆ ಸರಕಾರಿ ಗೇರುಬೀಜ ತೋಪಿನೊಳಗೆ ಕೆಂಪು ಮುರಕಲ್ಲಿನಲ್ಲಿ ಅಗೆದು ನಿರ್ಮಿಸಲಾಗಿರುವ ಅಪರೂಪದ ಪುರಾತನ ಗುಹಾ ಸಮಾಧಿ ಪತ್ತೆಯಾಗಿದೆ.
ಶಿರ್ವದ ಮೂಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಟಿ. ಮುರುಗೇಶಿ ಅವರು ಸ್ಥಳಕ್ಕೆ ಭೇಟಿ ನೀಡಿ ತನ್ನ ವಿದ್ಯಾರ್ಥಿಗಳ ನೆರವಿನೊಂದಿಗೆ ಪುರಾತನ ಗುಹಾ ಸಮಾಧಿ ಕುರಿತು ಅಧ್ಯಯನ ನಡೆಸಿ ಮಾಹಿತಿ ನೀಡಿದ್ದಾರೆ. ಸಮಾಧಿ ಅಧ್ಯಯನದ ಸಂದರ್ಭದಲ್ಲಿ ನಿಶ್ಚಿತ್‌ ಗೋಳಿತ್ತಡಿ, ಯೂಸುಫ್ ಹೈದರ್‌ ನೆರವು ನೀಡಿದ್ದು, ವಿದ್ಯಾರ್ಥಿಗಳಾದ ಶ್ರೇಯಸ್‌, ಗೌತಮ್‌, ಶಾರೀಕ್‌, ಕಾರ್ತಿಕ್‌, ವಿಶಾಲ್‌ ರೈ ಮತ್ತು ದಿಶಾಂತ್‌ ಸಹಕರಿಸಿದ್ದಾರೆ.
ದೊಡ್ಡ ವೃತ್ತವನ್ನು ಕೆಂಪು ಮುರಕಲ್ಲಿನ ಮೇಲೆ ರಚಿಸಿ ಸಮಾಧಿ ಇರುವನ್ನು ಗುರುತಿಸಿರುವುದು ಕಡಬದ ಗುಹಾ ಸಮಾಧಿಯ ವಿಶೇಷ ವಾಗಿದೆ. ಆ ವೃತ್ತದ ಕೆಳಭಾಗದಲ್ಲಿ ಆ ವೃತ್ತದ ವಿಸ್ತಾರಕ್ಕೆ ಅನುಗುಣವಾಗಿ ಗುಹೆಯನ್ನು ರಚಿಸಲಾಗಿದೆ. ವೃತ್ತದ ವಿಸ್ತಾರ ಸುಮಾರು 7 ಅಡಿಯಾಗಿದ್ದು, ಕೆಳಗಿನ ಗುಹೆಯೂ ಏಳು ಅಡಿ ವಿಸ್ತಾರವಾಗಿದೆ ಎಂದು ಎಂದು ತಿಳಿದುಬಂದಿದೆ.

ವೀಕ್ಷಿಸಿ SUBSCRIBERS ಮಾಡಿ

 

🔆 ಜಾಹೀರಾತು 🔆

Leave a Reply

error: Content is protected !!