ನೇಸರ ಎ.27: ಉದನೆ ತೂಗುಸೇತುವೆ ಸಮೀಪ ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತುಬಿದ್ದಿವೆ. ಯಾರೋ ತೋಟ ಹಾಕಿರುವುದರಿಂದಲೇ ಮೀನುಗಳು ಸತ್ತುಹೋಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಉದನೆ ತೂಗುಸೇತುವೆ ಸಮೀಪ ಗುಂಡ್ಯ ಹೊಳೆಯಲ್ಲಿ ದೊಡ್ಡ ಕಯ ಇದ್ದು. ಜನರು ಪೂಜನೀಯ ಭಾವದಿಂದ ಇಲ್ಲಿಗೆ ಹರಕೆ ರೂಪದಲ್ಲಿ ದನದ ಹಾಲು ತಂದು ಹಾಕುತ್ತಿದ್ದಾರೆ. ಇಲ್ಲಿನ ‘ಕಯ’ದ ಬಗ್ಗೆ ಜನರಲ್ಲೂ ಹಲವು ನಂಬಿಕೆಗಳೂ ಇವೆ. ಇಲ್ಲಿ ಪೆರುವೋಲು ಜಾತಿಯ ದೊಡ್ಡ ದೊಡ್ಡ ನೂರಾರು ಮೀನುಗಳು ಇವೆ. ಈ ಜಾಗ ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ ಹಾಗೂ ನಾಮಫಲಕವನ್ನು ಕೂಡ ಹಾಕಲಾಗಿದೆ. ಆದರೂ ಇಲ್ಲಿ ತೋಟೆ ಹಾಕಿ ಮೀನು ಹಿಡಿಯಲು ಯಾರೋ ಮುಂದಾಗಿದ್ದು ಇದರಿಂದಲೇ ನೂರಾರು ಮೀನುಗಳು ಸತ್ತುಬಿದ್ದಿವೆ. ಕೆಲವೊಂದು ಮೀನು ಹೊಳೆ ಬದಿ ದಡದಲ್ಲಿ ಸತ್ತು ಬಿದ್ದಿದ್ದು ಇನ್ನು ಕೆಲವು ನದಿಯಲ್ಲಿ ತೇಲಾಡುತ್ತಿರುವುದು ಕಂಡು ಬಂದಿದೆ.
💢 ಜಾಹೀರಾತು 💢