ನೇಸರ ನ6: ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ನೆಲ್ಯಾಡಿ-ಹೊಸಮಜಲಿನಲ್ಲಿ ಸುಸಜ್ಜಿತ ಹವಾನಿಯಂತ್ರಿತ ಬಿರ್ವ ಹೋಟೆಲ್ ಮತ್ತು ಲಾಡ್ಜ್ ಹಾಗೂ ಶುಭ ಸಮಾರಂಭಗಳಿಗಾಗಿ ವಿಶಾಲವಾದ ಆಡಿಟೋರಿಯಂ ಆರಂಭಗೊಳ್ಳಲಿದೆ. ನವಂಬರ್ 8 ರ ಸೋಮವಾರ ಗ್ರಾಹಕರ ಸೇವೆಗೆ ಮುಕ್ತವಾಗಲಿದೆ, ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದ ಶ್ರೀಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರು ಉದ್ಘಾಟಿಸಲಿದ್ದಾರೆ.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್,ಮಾಜಿ ಶಾಸಕ ಬಿ.ರಮಾನಾಥ ರೈ, ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ನೆಲ್ಯಾಡಿ ಸಂತ ಆಲ್ಫೋನ್ಸ್ ಚರ್ಚ್‍ನ ಧರ್ಮಗುರು ವಂದನೀಯ ರೆ.ಫಾ. ಬಿನೋಯಿ, ಹೊಸಮಜಲು ಅಲ್ ಮಸ್ಜಿದುಲ್ ಜಲಾಲಿಯದ ಧರ್ಮಗುರು ಬಹು ಅಲ್ ಹಾಜಿ ಉಮರ್ ಕುಂಞ ಮುಸ್ಲಿಯಾರ್, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಪುತ್ತೂರು ಎ.ಪಿ.ಎಂ.ಸಿ ನಿರ್ದೇಶಕ ಬಾಲಕೃಷ್ಣ ಬಾಣಜಾಲು, ಪುತ್ತೂರು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ,ಮಾಜಿ ಜಿಲ್ಲಾ ಪಂಚಾಯಿತ್ ಸದಸ್ಯ ಸರ್ವೋತ್ತಮ ಗೌಡ, ಉಪ್ಪಿನಂಗಡಿ ಉದ್ಯಮಿ ಯು.ರಾಮ,ಮಾಜಿ ತಾ.ಪಂ.ಸದಸ್ಯೆ ವಲ್ಸಮ್ಮ.ಕೆ.ಟಿ ಮತ್ತು ಉಷಾ ಆಂಚನ್,ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ದಿನೇಶ್‍ಪೂಜಾರಿ, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚೇತನಾ ಪಾಲ್ಗೊಳ್ಳಲಿದ್ದಾರೆ ಎಂದು ಹೋಟಲ್ ಬಿರ್ವದ ಮಾಲೀಕರಾದ ಸೌಮ್ಯ ಮತ್ತು ಚಂದ್ರಹಾಸ ಪೂಜಾರಿ ಹಾಗೂ ವಸಂತಿ ಮತ್ತು ಸಂಜೀವ ಪೂಜಾರಿ ತಿಳಿಸಿದ್ದಾರೆ.ಸಂತೋಷ ಕುಮಾರ್ ಮತ್ತು ಸಂದೀಪ್ ಕುಮಾರ್ ಉಪಸ್ಥಿತರಿದ್ದರು.