ಕೊಕ್ಕಡ-ಮಹಾವೀರ ಕಾಲೋನಿಯಲ್ಲಿ “ಸಾಮರಸ್ಯ ತುಡರ್” ಕಾರ್ಯಕ್ರಮ

ಶೇರ್ ಮಾಡಿ
ನೇಸರ ನ 6: ಶ್ರೀಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಾಮರಸ್ಯ ವಿಭಾಗದ ಸಹಯೋಗದೊಂದಿಗೆ ಮಹಾವೀರ ಕಾಲೋನಿಯಲ್ಲಿ “ಸಾಮರಸ್ಯ ತುಡರ್” ಕಾರ್ಯಕ್ರಮವನ್ನು ಅತ್ಯಂತ ಪ್ರೇರಣಾದಾಯಿ ಹಮ್ಮಿಕೊಳ್ಳಲಾಯಿತು. ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ನೂರಾರು ಬಂಧುಗಳು ಸಾಮರಸ್ಯ ಜ್ಯೋತಿಯನ್ನು ಹಿಡಿದು ಮಹಾವೀರ ಕಾಲೋನಿಗೆ ಹೋಗಿ ಅಲ್ಲಿ ಭಾರತಮಾತಪೂಜನೆ ಹಾಗೂ ಗೋಪೂಜೆ,ದೀಪಾವಳಿ ಹಬ್ಬದ ಆಚರಣೆಯನ್ನು ಮಾಡಲಾಯಿತು. ಉಪೇಕ್ಷಿತ ಬಂಧುಗಳ ಮನೆಯಲ್ಲಿ ಪೂಜೆಯು ವಿಜೃಂಭಣೆಯಿಂದ ನಡೆಯಿತು.ನಂತರ ಸಂಘದ ಹಿರಿಯರಾದ ಪರ್ಕಳ ಸುರೇಶ್ ಇವರು ಕಾರ್ಯಕ್ರಮದ ಔಚತ್ಯವನ್ನು ವಿವರಿಸುತ್ತಾ ಹಿಂದೂ ಸಮಾಜದ ಅವಶ್ಯಕತೆಗಳನ್ನು,ಅನಿವಾರ್ಯತೆಯನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಸಂಘದ ಹಿರಿಯರಾದ ಕೃಷ್ಣ ಭಟ್ ಕೊಕ್ಕಡ ಹಾಗೂ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ,ಕುಟುಂಬ ಪ್ರಬೋಧನ ಪ್ರಮುಖರಾದ ಮಾಧವ ಕಾರಂತ, ಗ್ರಾಮ ಪಂಚಾಯತ್ ಸದಸ್ಯರು ಸಂಘದ ಸ್ವಯಂಸೇವಕರು ಹಾಗೂ ಊರಿನ ಮಹನೀಯರು ಭಾಗವಹಿಸಿದ್ದರು. ಮಹಾವೀರ ಕಾಲೋನಿಯ ಗಿರೀಶ್ ಹಾಗೂ ಶ್ರೀಮತಿ ಸರೋಜಾ ಸಹಕರಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು, ಗಣೇಶ್ ಹಿತ್ತಿಲು ಸಹೋದರತ್ವ ಸಾರುವ ವೈಯಕ್ತಿಕ ಗೀತೆ ಹಾಡಿದರು.ಅರುಣ್ ಕುಮಾರ್ ಸ್ವಾಗತಿಸಿದರು.ಕೇಶವಕನ್ಯಾಡಿ, ಪ್ರಮೋದ್ ದಿಡುಪೆ,ಪ್ರಸಾದ್ ಬೆಳಾಲು,ಉದಯ,ಸುಬ್ರಹ್ಮಣ್ಯ ಹಾಗೂ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹಪಂಕ್ತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Leave a Reply

error: Content is protected !!