ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಬಲೀಂದ್ರ ಪೂಜೆ ಗುರುವಾರ ನಡೆಯಿತು. ಪೂರ್ವಾಹ್ನ ದೈವಸ್ಥಾನದಲ್ಲಿ ಸಂಪ್ರದಾಯದಂತೆ ಮರ ಹಾಕುವ ಕಾರ್ಯಕ್ರಮ ನಡೆಯಿತು. ರಾತ್ರಿ ಮರ ಆಲೂನ ಕಾರ್ಯಕ್ರಮ ನಡೆದು, ಬಲೀಂದ್ರ ಪೂಜೆ ನಡೆಯಿತು.
ಕ್ಷೇತ್ರದ ಅರ್ಚಕ ಕೃಷ್ಣ ಹೆಬ್ಬಾರ್ ಪೂಜಾ ವಿಧಿ ವಿಧಾನ ನೆರವೇರಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಮೃತ್ಯುಂಜಯ ಬಿಡೆ ಕೆರೆತೋಟ, ಉತ್ಸವ ಸಮಿತಿ ಅಧ್ಯಕ್ಷ ದುಗ್ಗಣ್ಣ ಗೌಡ ಹೊಸಮನೆ, ಆಡಳಿತ ಹಾಗೂ ಉತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪರಿಚಾರಕ ವರ್ಗದರು, ಪ್ರಮುಖರು, ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರ ಪರಿಚಯ
ದಕ್ಷಿಣ ಕನ್ನಡ ಜಿಲ್ಲೆಯ (ತುಳುನಾಡಿನ ) ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿಬೈಲು
(ಧರ್ಮಸ್ಥಳ -ಪೆರಿಯಶಾಂತಿ -ಮರ್ದಾಳ -ಸುಬ್ರಮಣ್ಯ ರಾಜ್ಯ ರಸ್ತೆಯಲ್ಲಿ ಗೋಳಿಯಡ್ಕದಿಂದ ಮೂರು ಕಿಲೋಮೀಟರು ದೂರ ) ಎಂಬ ಪ್ರಕೃತಿ ದತ್ತವಾದ ಪ್ರದೇಶದಲ್ಲಿ ನೆಲೆಯಾಗಿರುವ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದು ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ
ನಂಬಿದ ಭಕ್ತರನ್ನು ಕೈಬೀಸಿ ಕರೆದುಕೊಂಡು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದಲ್ಲಿ ನಂಬಿದ ಭಕ್ತರ ಮನೋಇಷ್ಟಾರ್ಥ ಈಡೇರುತ್ತದೆ .
ಭಕ್ತರ ಇಷ್ಟಾರ್ಥಗಳಾದ ಅರೋಗ್ಯ ,ಸುಖ ದಾಂಪತ್ಯ ಜೀವನ ,ಕಂಕಣ ಭಾಗ್ಯ ,ಸಂತಾನ ವೃದ್ಧಿ ,ಉದ್ಯೋಗ ,ವ್ಯಾಪಾರ ವ್ಯವಹಾರಗಳ ವೃದ್ಧಿಗೆ ಉಳ್ಳಾಲ್ತಿ ಅಮ್ಮನವರನ್ನು ಪ್ರಾರ್ಥಿಸಿದಲ್ಲಿ ಅತೀ ಶೀಘ್ರ ಸಂಕಷ್ಟ್ರ ಪರಿಹಾರವಾಗುತ್ತದೆ .ಶ್ರೀ ಕ್ಷೇತ್ರದ ನಾಗಬನವು ಪ್ರಕೃತಿದತ್ತವಾದ ನಾಗರ ಬೆತ್ತಗಳಿಂದ ಕಂಗೊಳಿಸುತ್ತಿದೆ .ಕ್ಷೇತ್ರದಲ್ಲಿ ಪ್ರತಿ ವರ್ಷದ ಸುಗ್ಗಿ ಹುಣ್ಣಮೆಗೆ ವಾರ್ಷಿಕ ಜಾತ್ರೆ ಸಂಪನ್ನಗೊಳ್ಳುತ್ತದೆ
[foogallery id=”639″]