ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ನ ಪದಗ್ರಹಣ

ಶೇರ್ ಮಾಡಿ

ನೇಸರ ಎ.30: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ನ ಪದಗ್ರಹಣ ಸಮಾರಂಭವು ಎ.29ರಂದು ನ್ಯೂ ಮಿಲೇನಿಯಂ ಹಾಲ್ ಸಂತ ಜಾರ್ಜ್ ಎಜುಕೇಶನ್ ಇನ್ಸ್ಟ್ಯೂಟ್ ನೆಲ್ಯಾಡಿಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ MPCS ಕೋಣಾಲು ಆರ್ಲ ದ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ಮಾತನಾಡಿ ಸೀನಿಯರ್ ಚೇಂಬರ್ ಸಂಸ್ಥೆಯು ನಾಯಕತ್ವವನ್ನು ಬೆಳೆಸುವ ಸಂಸ್ಥೆಯಾಗಿದ್ದು, ಇಂತಹ ಸಂಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಉತ್ತಮ ವ್ಯಕ್ತಿಯಾಗಿ ಮೂಡಿಬರಲು ಸಾಧ್ಯ ಎಂದರು ಹಾಗೂ ನೂತನವಾಗಿ ಆಯ್ಕೆಯಾದ ತಂಡಕ್ಕೆ ಶುಭವನ್ನು ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು Snr.PPF.ಡಾ.ಸದಾನಂದ ಕುಂದರ್ ವಹಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ಗತ ಕಾಲದ ವರದಿಯನ್ನು ಸಭೆಗೆ ಮಂಡಿಸಿದರು ಹಾಗೂ ಅಧ್ಯಕ್ಷೀಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡುವುದರೊಂದಿಗೆ ಸಲ್ಲಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ Snr.ವೆಂಕಟ್ರಮಣ ಆರ್ ರವರಿಗೆ ಪ್ರಮಾಣವಚನವನ್ನು ಬೋಧಿಸಿ, ಅಧಿಕಾರವನ್ನು ಹಸ್ತಾಂತರಿಸಿದರು.
Snr.ವೆಂಕಟರಮಣ ರವರು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಮಾತನಾಡಿ ಎಲ್ಲರ ಸಹಕಾರವನ್ನು ಕೋರಿದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಭೋಧಿಸಿದರು.
ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ Snr.ಜಾನ್ ಪಿ.ಎಸ್ ರವರಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಉಪಾಧ್ಯಕ್ಷರಾದ Snr.PPF.ಎಸ್ ಆರ್.ಶಿವಪ್ರಸಾದ್ ರವರು ನೂತನವಾಗಿ ಸೇರ್ಪಡೆಗೊಂಡ ಸದಸ್ಯರುಗಳಿಗೆ ಪ್ರಮಾಣವಚನವನ್ನು ಬೋಧಿಸಿ, ಸಂದರ್ಭೋಚಿತವಾಗಿ ಮಾತನಾಡಿ ಶುಭವನ್ನು ಹಾರೈಸಿದರು. ನೆಲ್ಯಾಡಿ ಲೀಜನ್ ನ ಸ್ಥಾಪಕ ಅಧ್ಯಕ್ಷರಾದ Snr.PPF.ಅಬ್ರಹಾಂ ವರ್ಗೀಸ್ ರವರು ಮಾತನಾಡಿ ಶುಭವನ್ನು ಹಾರೈಸಿದರು.

ಸನ್ಮಾನ
ಸ್ಥಾಪಕ ಅಧ್ಯಕ್ಷರಾದ Snr.PPF.ಅಬ್ರಹಾಂ ವರ್ಗೀಸ್ ರನ್ನು, ಅಧ್ಯಕ್ಷರಾದ Snr.PPF.ಡಾ.ಸದಾನಂದ ಕುಂದರ್ ರನ್ನು, ರಾಷ್ಟ್ರೀಯ ಉಪಾಧ್ಯಕ್ಷರಾದ Snr.PPF.ಎಸ್ ಆರ್.ಶಿವಪ್ರಸಾದರನ್ನು ಹಾಗೂ ಮುಖ್ಯ ಅತಿಥಿಗಳಾದ ಶ್ರೀಮತಿ ಉಷಾ ಅಂಚನ್ ರವರನ್ನು ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಕಡಬ ಸೀನಿಯರ್ ಚೇಂಬರ್ ನ ಸಂಸ್ಥಾಪಕ ಅಧ್ಯಕ್ಷರಾದ Snr.ಟೈಟಸ್, ಪೂರ್ವಾಧ್ಯಕ್ಷರಾದ Snr.PPF.ಚೆರಿಯನ್ ಬೇಬಿ, ಅಧ್ಯಕ್ಷರಾದ Snr.ದೇವಿಪ್ರಸಾದ.ಎ, ನೆಲ್ಯಾಡಿ ಜ್ಯೂನಿಯರ್ ಛೇಂಬರ್ ನ ಪೂರ್ವಾಧ್ಯಕ್ಷರಾದ ಶಿವಪ್ರಸಾದ್, ನೆಲ್ಯಾಡಿ ಠಾಣೆಯ ಪೋಲಿಸ್ ಸಿಬಂದಿಗಳು ಮೊದಲಾದವರು ಉಪಸ್ಥಿತರಿದ್ದರು. Snr.ಜಯಂತಿ ಬಿ ಜೇಸಿವಾಣಿ ವಾಚಿಸಿದರು. Snr.ರವೀಂದ್ರ ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ನೂತನ ಕಾರ್ಯದರ್ಶಿ Snr.ಜಾನ್.ಪಿ ಎಸ್ ರವರು ವಂದಿಸಿದರು.

ವೀಕ್ಷಿಸಿ SUBSCRIBERS ಮಾಡಿ

 

 

🌺 ಜಾಹೀರಾತು 🌺

Leave a Reply

error: Content is protected !!