ಕಡಬ ತಾಲೂಕು, ಇಚಿಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬ

ಶೇರ್ ಮಾಡಿ

ನೇಸರ ಮೇ :05 ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರ ಹಾಗೂ ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ದೇವಾಲಯದ ವಾರ್ಷಿಕ ಹಬ್ಬ ಮೇ 1ರಂದು ಧ್ವಜಾರೋಹಣಗೊಂಡು 7ರ ತನಕ ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ.ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾ ಹಾಗೂ ರೆ.ಫಾ.ಡಾ| ಜೋನ್ಸ್ ಅಬ್ರಹಾಂ ಕೋನಾಟ್‌ರವರ ನೇತೃತ್ವದಲ್ಲಿ ಮತ್ತು ಅನೇಕ ಧರ್ಮಗುರುಗಳ ಸಹಕಾರದೊಂದಿಗೆ ನಡೆಯಲಿದೆ.
ಮೇ 1ರಂದು ಬೆಳಿಗ್ಗೆ 9.30ಕ್ಕೆ ಹಬ್ಬದ ಧ್ವಜಾರೋಹಣ ನಡೆಯಿತು, ಮೇ 6ರಂದು ಕಾಸರಗೋಡು ಸೈಂಟ್ ಮೇರೀಸ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಗೀವರ್ಗೀಸ್ ಮಾಥ್ಯು, ಮೇ 7ರಂದು ಮಲಂಕರ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ಪರಮಾಧ್ಯಕ್ಷರ ಪ್ರಿನ್ಸಿಪಲ್ ಸೆಕ್ರೆಟರಿ ರೆ.ಫಾ.ಡಾ.ಜೋನ್ಸ್ ಅಬ್ರಹಾಂ ಕೋನಾಟ್‌ರವರ ನೇತೃತ್ವದಲ್ಲಿ ಪವಿತ್ರ ದಿವ್ಯ ಬಲಿಪೂಜೆ ನಡೆಯಲಿದೆ.
ಮೇ 6ರಂದು ಸಂಜೆ ಪಾದಯಾತ್ರಿಗರಿಗೆ ಸ್ವಾಗತ, ರಾತ್ರಿ ಹಬ್ಬದ ಸಂದೇಶ, ಕಾಯರ್ತಡ್ಕ ಶಿಲುಬೆಯ ತನಕ ಮೆರವಣಿಗೆ, ಆಶೀರ್ವಾದ, ಅನ್ನಸಂತರ್ಪಣೆ ನಡೆಯಲಿದೆ. ಮೇ 7ರಂದು ಮಧ್ಯಾಹ್ನ ಹಬ್ಬದ ಸಂದೇಶ, ಜೋರ್ಜಿಯನ್ ಪುರಸ್ಕಾರ, ಅನ್ನಸಂತರ್ಪಣೆ, ಏಲಂ. ಹೊಸಂಗಡಿ ಶಿಲುಬೆ ಗೋಪುರದ ತನಕ ಮೆರವಣಿಗೆ, ಆಶೀರ್ವಾದ, ಪ್ರಸಾದ ವಿತರಣೆ, ಸಂಜೆ ಹಬ್ಬದ ಧ್ವಜ ಇಳಿಸುವಿಕೆ, ಹಬ್ಬದ ಸಮಾರೋಪ ಪ್ರಾರ್ಥನೆ ನಡೆಯಲಿದೆ.

ಮೇ 6 ಮತ್ತು 7ರಂದು ಮೆರವಣಿಗೆಗೆ ಮೊದಲು ಉರುಳು ಸೇವೆಗೆ ಅವಕಾಶವಿದೆ. ಉರುಳು ಸೇವೆ ಮಾಡುವವರು ಸಭ್ಯವಾದ ಸಮವಸ್ತ್ರ ಧಾರಣೆ ಮಾಡತಕ್ಕದ್ದು. ಮೇ 7ರಂದು ಇಚ್ಲಂಪಾಡಿಯಿಂದ ನೆಲ್ಯಾಡಿ, ಕಡಬ, ಧರ್ಮಸ್ಥಳ, ಉಪ್ಪಿನಂಗಡಿ ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಸರ್ವೀಸ್ ಇದೆ ಎಂದು ಚರ್ಚ್‌ನ ಧರ್ಮಗುರು ರೆ.ಫಾ.ಪೌಲ್ ಜೇಕಬ್‌ರವರು ತಿಳಿಸಿದ್ದಾರೆ.

ಪವಾಡ ಪುರುಷ ಸೈಂಟ್ ಜೋರ್ಜ್

ಕ್ರಿಸ್ತ ಯೇಸುವಿನ ಉತ್ತಮ ಭಟನಾಗಿ ನೀನು ನನ್ನೊಂದಿಗೆ ಕಷ್ಠವನ್ನು ಸಹಿಸು (2 ತಿಮೋತಿ 2:3) ಎನ್ನುವ ಅ ಸಂತ ಪೌಲರು ತಿಮೋಥಿಗೆ ನೀಡಿದ ಆಹ್ವಾನವು ಅಕ್ಷರಾರ್ಥದಲ್ಲಿ ಎಲ್ಲಾ ವಿಧದಲ್ಲೂ ಜೀವನದ ಶೈಲಿಯನ್ನಾಗಿಸಿದ ಸಂತ ಜೋರ್ಜರು ಮೂರನೇ ಶತಮಾನದ ಉತ್ತರಾರ್ಧದಲ್ಲಿ ಕ್ರಿ.ಶ 275 ರಲ್ಲಿ ಕಪದೋಕಿಯಾದ ಕ್ರೈಸ್ತವ ಕುಟುಂಬದಲ್ಲಿ ಜನಿಸಿದರು. ತಂದೆ ಜೆರೊಂಟಿಯಾಸರಂತೆ ರೋಮನ್ ಸೇನೆಯಲ್ಲಿ ಸಮರ್ಥರಾದ ಸೈನಿಕರಾಗಿದ್ದರು. ಡಯೋಕ್ಲೀಶಿಯನ್ ಚಕ್ರವರ್ಥಿಯ ಅಧಿಕಾರವಧಿಯಲ್ಲಿ ಕ್ರಿಶ್ಚಿಯನ್ನರಿಗೆ ಲಭಿಸಿದ ಪೀಡೆಗಳ ಫಲವಾಗಿ ಪಾಲೇಸ್ತೇನಿನ ಡಯಾಸ್ ಪೋಲಿಸ್ ಎಂಬಲ್ಲಿನ ಲಿಡ್ಡಾ ಎನ್ನುವ ಸ್ಥಳದಲ್ಲಿ ಕ್ರಿ.ಶ 303 ರಲ್ಲಿ ರಕ್ತ ಸಾಕ್ಷಿ ಮರಣವನ್ನು ಹೋದಿದರು

ಸಂತ ಜೋರ್ಜರು ಹಾಗು ಅಗ್ನಿ ಸರ್ಪವು

ಸಂತ ಜೋರ್ಜರ ಅದ್ಬುತಗಳಲ್ಲಿ ಶ್ರೇಷ್ಠವಾದ ಈ ಅದ್ಬುತವು ಲಿಭಿಯ ಪ್ರದೇಶದ ಸಿಲೇನ ಪಟ್ಟಣದಲ್ಲಿ ಒಂದು ದಿನ ಸೈನಿಕ ಮೇಧಾವಿಯಾಗಿದ್ದ ಇವರು ಕುದುರೆಯ ಮೇಲೆ ಯಾತ್ರೆಯಾಗಿ ಬಂದಂತಹ ಸಂದರ್ಭದಲ್ಲಿ, ಅಲ್ಲಿಯೇ ಸಮೀಪ ಬೆಟ್ಟದ ತಪ್ಪಲಲ್ಲಿ ಪಟ್ಟಣಪೂರ್ತಿ ವಿಷವಾಯು ಉಗುಳುತ್ತಾ ಮಲಿನಗೋಳಿಸುತ್ತಿದ್ದ ಒಂದು ಮಹಾ ಸರ್ಪ ಇತ್ತು. ಕೆಲವು ಪುಸ್ತಕಗಳಲ್ಲಿ ಇದು ಅಗ್ನಿಯನ್ನು ಉಗುಳಲು ಸಾಮಥ್ರ್ಯವಿರುವ ಮಹಾ ವಿಷದ ಸರ್ಪ, ಬೆಂಕಿಯ ರೆಕ್ಕೆಗಳಿರುವ ಮಹಾ ಸರ್ಪ ಎಂದೆಲ್ಲಾ ಈ ಸರ್ಪದ ಬಗ್ಗೆ ಹೇಳಲಾಗುತ್ತಿದೆ
ಪಟ್ಟಣದ ವಾಸಿಗಳೆಲ್ಲಾ ಒಂದಾಗಿ ಈ ವಿಷ ಸರ್ಪವನ್ನು ಕೊಲ್ಲಲು ಹಲವು ಭಾರಿ ಸೈನ್ಯ ಸಮೇತ ಶ್ರಮಿಸಿದರಾದರೂ ಅತಿ ಕಠಿಣವಾದ ವಿಷವನ್ನು ಅದು ಹೊರ ಸೂಸುವದರಿಂದ ಆ ಜನರು ಸ್ವ ರಕ್ಷಣೆಗಾಗಿ ಹಿಂದೆ ಸರಿಯಬೇಕಾಯಿತು. ಈ ಮಹಾಸರ್ಪವನ್ನು ಶಾಂತಗೊಳಿಸಲು ಹಾಗು ಪಟ್ಟಣಕ್ಕೆ ಪ್ರವೇಶಿಸದಿರಲು ಅವರು ದಿನಕ್ಕೆ ಎರಡು ಆಡುಗಳಂತೆ ಎಸೆದು ನೀಡ ತೊಡಗಿದರು.ಆಡುಗಳು ಮುಗಿದಾಗ ಪ್ರತಿ ಕುಟುಂಬದಿಂದ ಒಬ್ಬರಂತೆ ಚೀಟು ಹಾಕಿ ಮನುಷ್ಯರನ್ನು ಸ್ವತಃ ಬಲಿಯಾಗಲು ತೀರ್ಮಾನಿಸುತ್ತಾ ಈ ವಿಷ ಸರ್ಪದ ಭಾದೆಗೆ ತಾತ್ಕಾಲಿಕವಾದ ಪರಿಹಾರವನ್ನು ಕಂಡುಕೊಂಡರು. ಈ ರೀತಿಯ ದುಃಖಭರಿತ ಸನ್ನಿವೇಷದಲ್ಲಿ ಅಂದಿನ ದಿನದ ಸರಧಿ ಲಭಿಸಿದ್ದು ಆ ಪಟ್ಟಣದ ರಾಜನ ಮಗಳಿಗಾಗಿತ್ತು. ಬಹಳ ದೈವಭಕ್ತೆಯು ಸುಂದರಿಯೂ ಆದ ಆ ರಾಜಕುಮಾರಿಯ ಬದಲಿಯಾಗಿ ಹೋಗದಿರಲು ಯಾರು ಒಪ್ಪದ ಕಾರಣ ರಾಜನಿಗೆ ಬಹಳ ದುಃಖವಾಯ್ತು. ಸಂತ ಜೋರ್ಜರು ಆ ದಾರಿಯಾಗಿ ಹಾದು ಹೋಗುವಾಗ ದುಃಖಭರಿತೆಯಾದ ರಾಜಕುಮಾರಿಯನ್ನು ಕಾಣುವಂತಾಯಿತು. ಆ ರಾಜನ ಅವಿವಾಹಿತೆಯಾದ ಮಗಳು ವಿವಾಹದ ತಯಾರಿಯಿಂದ ಮದುಮಗನ ಜೊತೆಯಾಗಲು ವಿವಾಹಕ್ಕಾಗಿ ಹೋಗುವ ಹಾಗೆ ವಿವಾಹದ ವಸ್ತ್ರಗಳನ್ನು ಧರಿಸುತ್ತಾ ಆಭರಣ ಭೂಷಿತೆಯಾಗಿ ಮರಣವನ್ನು ಸ್ವೀಕರಿಸಲು ದುಷ್ಟ ಅಗ್ನಿ ಸರ್ಪದ ಮುಂದೆ ದುಃಖದೊಂದಿಗೆ ಯೇಸುಕ್ರಿಸ್ತರಲ್ಲಿ ಪ್ರಾರ್ಥಿಸುತ್ತಾ ಮುಂದಕ್ಕೆ ನಡೆಯತೊಡಗಿದಳು. ಶೋಖದ ಈ ಸ್ಥಿತಿಯ ತೀವ್ರತೆಯಿಂದ ಮನನೊಂದು ಪ್ರಾರ್ಥಿಸಿಕೊಂಡಿರಲು ಸಂತ ಜೋರ್ಜರು ಸಮಸ್ಯೆಯ ಪರಿಹಾರಕನು ಎನ್ನುವಂತೆ ಕುದುರೆಯ ಮೇಲೇರಿ ತನ್ನ ಕೈಯಲ್ಲಿದ್ದ ಶೂಲದಿಂದ ಆ ಮಹಾ ಸರ್ಪವನ್ನು ತಿವಿದು ಕೊಂದು ಹಾಕಿದರು. ಬಳಿಕ ಆ ಯುವತಿಯು ಹೊಂದಿದ್ದ ವಸ್ತ್ರವನ್ನು ಪಡೆದು ಆ ಮಹಾಸರ್ಪದ ಕೊರಳಿಗೆ ಸುತ್ತಿ ಕಟ್ಟಿ ಆ ಯುವತಿಗೆ ಸಮರ್ಪಿಸಿದರು. ಅವಳು ಯಾವುದೇ ಕಷ್ಠವಿಲ್ಲದೇ ಆ ಸರ್ಪವನ್ನು ಎಳೆಯುತ್ತಾ ಪಟ್ಟಣದ ಮಧ್ಯೆ ಬಂದಳು. ಆ ಮಾರಕ ಸರ್ಪವನ್ನು ಕಂಡ ಜನರು ಭಯಹೊಂದಿ ಓಡಿ ಅವಿತುಕೊಳ್ಳತೊಡಗಿದರು. “ಭಯ ಪಡಬೇಡಿ, ನೀವು ಯೇಸು ಕ್ರಿಸ್ತನಲ್ಲಿ ನಂಬಿ, ದಿವ್ಯ ಸ್ನಾನ ಹೊಂದಲು ತಯಾರಾಗಿರುವದಾದರೆ ನಾನು ಈ ಮಹಾ ಸರ್ಪವನ್ನು ಪೂರ್ಣವಾಗಿ ಸಾಯಿಸಬಲ್ಲೆ”. ಎಂದು ಸಂತ ಜೋರ್ಜರು ಅವರಲ್ಲಿ ಹೇಳಿದರು. ರಾಜನು ಹಾಗು ಜನರು ಬಹಳ ಸಂತೋಷದಿಂದ ಈ ಬೇಡಿಕೆಯನ್ನು ಸ್ವೀಕರಿಸಿದಾಗ ಸಂತ ಜೋರ್ಜರು ಆ ಹಾವನ್ನು ಕೊಂದು ಹಾಕಿದರು. ಆ ಮಹಾ ವಿಷ ಸರ್ಪದ ಶವ ಶರೀರವನ್ನು ದೂರಕ್ಕೆ ಕೊಂಡುಹೋಗಲು ನಾಲ್ಕು ಎತ್ತಿನ ಬಂಡಿಗಳೇ ಬೇಕಾಯ್ತು.
ಸ್ತ್ರೀ ಪುರಷರಲ್ಲದೇ ಹತ್ತು ಸಾವಿರಕ್ಕೂ ಆಧಿಕ ಜನರು ಅಂದು ದೀಕ್ಷಾಸ್ನಾನವನ್ನು ಸ್ವೀಕರಿಸಿದರು. ರಾಜನು ಅನೇಕ ಸಂಪತ್ತುಗಳನ್ನು, ಕಾಣಿಕೆಗಳನ್ನು ಸಂತ ಜೋರ್ಜರಿಗೆ ನೀಡಿದರಾದರೂ ಅವನ್ನೆಲ್ಲ ಬಡವರಿಗೆ ವಿತರಿಸಲು ರಾಜನಿಗೆ ಮರಳಿ ನೀಡುತ್ತಾ, ಮರಳುವ ಸಂದರ್ಭದಲ್ಲಿ ನಾಲ್ಕು ಬೇಡಿಕೆಯನ್ನು ಇಟ್ಟರು. 1. ರಾಜನು ಕ್ರೈಸ್ತ ದೇವಾಲಯವನ್ನು ಸಂರಕ್ಷಿಸಬೇಕು. 2. ಪುರೋಹಿತರಿಗೆ ಆದರಣೆಯನ್ನು ನೀಡಬೇಕು. 3. ರಾಜನು ಪ್ರತಿ ಆರಾಧನಾ ದಿನದಲ್ಲಿ ದೇವಾಲಯದಲ್ಲಿ ಹಾಜರಿರಬೇಕು. 4. ದರಿದ್ರರಲ್ಲಿ ಕರುಣೆ ಹೊಂದಬೇಕು.

ಸಂತ ಜೋರ್ಜರ ರಕ್ತ ಸಾಕ್ಷಿ ಮರಣ

ಡಯೋಕ್ಲೀಷಿಯನ್ ಮಾಕ್ಸಿಮಸ್ ಎಂಬ ರೋಮನ್ ಚಕ್ರವರ್ತಿಯ ಕಾಲದಲ್ಲಿ ಕ್ರೈಸ್ತರು ಅನೇಕ ಪೀಡೆಗಳನ್ನು ಸಹಿಸಬೇಕಾಯ್ತು. ಹಲವರು ಸ್ವ ರಕ್ಷಣೆಗಾಗಿ ಕರ್ಥನ ಮೇಲಿನ ವಿಶ್ವಾಸವನ್ನು ತ್ಯಜಿಸಬೇಕಾಯ್ತು. ರಾಜನ ಅನ್ಯ ದೇವರ ಆರಾಧನೆಯನ್ನು ನಡೆಸಬೇಕು ಎನ್ನುವ ರಾಜನ ಆಜ್ಞೆಯನ್ನು ಸಾರ್ವಜನಿಕವಾಗಿ ಸಂತ ಜೋರ್ಜರು ಹರಿದು ಹಾಕಿ ಕರ್ಥನಲ್ಲಿನ ವಿಶ್ವಾಸವನ್ನು ಜೋರಾಗಿ ಪ್ರಖ್ಯಾಪಿಸಿದರು. ಹೊರಜಾತಿ ದೇವರ ಜನರ ನೇತಾರ ದೇದ್ಯಾನೋಸನು ಇವರನ್ನು ಬಂದಿಸುತ್ತಾ ಮುಂದಕ್ಕೆ ಹೋಗಲು ಸಮ್ಮತಿಸದೆ, ಸಂತ ಜೋರ್ಜರನ್ನು ಹಗ್ಗದಿಂದ ಕಟ್ಟಿ ಹಾಕಿ, ತೂಗಿ ಹೊಡೆದರು. ತದನಂತರ ಕಬ್ಬಿಣವನ್ನು ಬಿಸಿಮಾಡಿ ಶರೀರವನ್ನು ಸುಡತೊಡಗಿದರು. ಆದರೆ ಯೇಸು ಕ್ರಿಸ್ತರ ಶಕ್ತಿಯಿಂದ ಅವರು ಪೂರ್ಣ ಆರೋಗ್ಯವಾಗಿಯೇ ಇದ್ದರು. ತದನಂತರ ಮಾರಕವಾದ ವಿಷವನ್ನು ಅವರಿಗೆ ನೀಡಿದರು. ವಿಷದಿಂದ ಯಾವುದೇ ಜೀವಹಾನಿ ಸಂಭವಿಸದಿರಲು ವಿಷವನ್ನು ತಂದ ವ್ಯಕ್ತಿ ಮಾನಸಾಂತರ ಹೊಂದಿ ಕ್ರೈಸ್ತವನಾಗಿ ರಕ್ತಸಾಕ್ಷಿ ಮರಣವನ್ನು ಹೊಂದಿದರು. ಇನ್ನು ಅನೇಕ ಶಿಕ್ಷೆಗಳನ್ನು ಸಂತ ಜೋರ್ಜರಿಗೆ ನೀಡಿದರು. ಎರಡು ರಥಗಳ ಚಕ್ರಗಳಿಗೆ ಸಂತ ಜೋರ್ಜರ ಒಂದೊಂದು ಕಾಲುಗಳನ್ನು ಕಟ್ಟಿ ರಥಗಳನ್ನು ವಿಪರೀತ ದಿಕ್ಕುಗಳಿಗೆ ಓಡಿಸಲು ಶ್ರಮಿಸಿದರಾದರು ರಥವು ಚಲಿಸದೆ ತಟಸ್ಥವಾಗಿ ಹೋಯಿತು. ಕೋಪಗೊಂಡ ದೇದ್ಯಾನೋಸನು ಸಂತ ಜೋರ್ಜರನ್ನು ಕುದಿಯುವ ಲೋಹದ ದ್ರಾವಕದಲ್ಲಿ ಹಾಕಿಸಿದನು. ಇದರಿಂದಲೂ ಸಂತ ಜೋರ್ಜರಿಗೆ ಯಾವುದೇ ದೋಷವು ಸಂಭವಿಸಲಿಲ್ಲ. ಪೀಡೆಗಳು ಯಾವುದೂ ಫಲಿಸುವುದಿಲ್ಲ ಎಂದು ಅರಿತ ದೇದ್ಯಾನೋಸನು, ಸಂತ ಜೋರ್ಜರನ್ನು ಅನ್ಯ ದೇವರ ಮುಂದೆ ನಿಲ್ಲಿಸಿ ಆ ದೇವರನ್ನು ಆರಾಧಿಸಲು, ಬಲಿ ನೀಡಲು ಪ್ರೇರೇಪಿಸಿದನು. ಸಂತ ಜೋರ್ಜರು ಸೋಲುವುದನ್ನು ಕಾಣಲು ನಗರದ ಜನಗಳೆಲ್ಲ ಕೂಡಿದ್ದರು. ಸಂತ ಜೋರ್ಜರು ಜೋರಾಗಿ ಕರ್ಥನಲ್ಲಿ ಪ್ರಾರ್ಥನೆಯನ್ನು ಮಾಡಿದರು. ಕೂಡಲೇ ಆಕಾಶದಿಂದ ಬೆಂಕಿ ಬಂದು ಆ ಕ್ಷೇತ್ರದ ಕಟ್ಟಡಗಳು, ವಿಗ್ರಹಗಳು, ಪುರೋಹಿತರು ಬೆಂದು ನಶಿಸಿ ಹೋದರು. ಭೂಮಿ ಬಾಯ್ದೆರೆದು ಅವರನ್ನು ನುಂಗಿತು. ಇದನ್ನು ಕಂಡ ದೇದ್ಯಾನೋಸನ ಮಡದಿ ಅಲೆಕ್ಸಾಂಡ್ರ ಕರ್ಥನಲ್ಲಿ ನಂಬ ತೊಡಗಿದಳು. ಸಂತ ಜೋರ್ಜರನ್ನು ಪೀಡಿಸಿ ಜನರನ್ನು ಭಯಗೊಳಿಸಿ ಕ್ರಿಸ್ತನನ್ನು ನಂಬಿದ ವಿಶ್ವಾಸಿಗಳನ್ನು ತಡೆಯುವದು ಸಾಧ್ಯವಾಗದರಿಂದ ಕೋಪಗೊಂಡ ದೇದ್ಯಾನೋಸನು ಸಂತ ಜೋರ್ಜರನ್ನು ಖಡ್ಗದಿಂದ ಕಡಿದು ಕೊಲ್ಲಿಸಿ ಶಿರಸ್ಸನ್ನು ಛೇಧಿಸಿದನು. ಆದರೂ ಅನೇಕರು ಕ್ರಿಸ್ತನಲ್ಲಿ ನಂಬಿದರು. ಸಂತ ಜೋರ್ಜರನ್ನು ವಧಿಸಿದ ಸ್ಥಳದಿಂದ ನಿರ್ಗಮಿಸಿದಾಗ ದೇದ್ಯಾನೋಸನು ಸಂತ ಜೋರ್ಜರನ್ನು ಪೀಡಿಸಿದ ಅದೇ ಜಾಗದಲ್ಲಿ ಬೆಂಕಿಗಾಹುತಿಯಾದನು.
ಪಾಶ್ಚಾತ್ಯ ಹಾಗು ಪೌರಸ್ತ್ಯ ಸಭೆಗಳು ನಾಲ್ಕನೇ ಶತಮಾನದಿಂದ ಸಂತ ಜೋರ್ಜರ ಸ್ಮರಣೆಯ ಹಬ್ಬವನ್ನು ಎಪ್ರಿಲ್ 23 ನೇ ತಾರೀಖಿನಂದು ಆಘೋಷಿಸತೊಡಗಿದರು.

🖕🖕ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ🖕🖕

ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕೊಕ್ಕಡ | ನೂತನ ಕೊಡಿಮರದ ಸಮರ್ಪಣೆ ಮತ್ತು ಸಭಾಕ್ರಮ – Live Stream

NESARA|| WhatsApp ||GROUPS

                             

 

                                                       

 

🌸 ಜಾಹೀರಾತು 🌸

Leave a Reply

error: Content is protected !!