ನೇಸರ ಮೇ.4: ಅಮೃತ ಗ್ರಾಮ ಪಂಚಾಯತ್ ಕೊಕ್ಕಡದ ಸಂಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೊಕ್ಕಡ ಇದರ ವತಿಯಿಂದ ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸುವ ಸಲುವಾಗಿ ಮೇ.4ರಂದು ಅಂಬೇಡ್ಕರ್ ಭವನದಲ್ಲಿ ಅಣಬೆ ಕೃಷಿ ತರಬೇತಿ ಕಾರ್ಯಾಗಾರ ನಡೆಯಿತು.
ಕೊಕ್ಕಡ ಪಂಚಾಯತ್ ಅಧ್ಯಕ್ಷರಾದ ಯೋಗೀಶ್ ಅಲಂಬಿಲ ರವರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ವೇದಿಕೆಯಲ್ಲಿ ಕೊಕ್ಕಡ ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಪಂಚಾಯತ್ ಉಪಾಧ್ಯಕ್ಷೆ ಪವಿತ್ರ ಗುರುಪ್ರಸಾದ್, ಕಾರ್ಯದರ್ಶಿ ಸಾವಿತ್ರಿ, ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಚಂದ್ರಕಲಾ, ಸಂಗಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ನಳಿನಿ, ತರಬೇತುದಾರರಾದ ಸುಲೈಮಾನ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ತರಬೇತುದಾರರು ಅಣಬೆ ಬೇಸಾಯದ ಬಗ್ಗೆ ಹಾಗೂ ಬೆಳೆದ ಅಣಬೆಯ ಮಾರುಕಟ್ಟೆಯ ಬಗ್ಗೆ, ಇದರಿಂದ ಬರುವ ಆದಾಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಜಯಶ್ರೀ LCRP ಸ್ವಾಗತಿಸಿ, ವಸಂತಿ ವಂದಿಸಿದರು, ವೀಣಾಶ್ರೀ MBK ಕಾರ್ಯಕ್ರಮ ನಿರೂಪಿಸಿದರು.
💐 ಜಾಹೀರಾತು 💐