
ನೇಸರ ಮೇ 17: ದಿನಾಂಕ 16-05-2022 ಸೋಮವಾರ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಗೋಪಾಲ ಗೌಡರು ಉದ್ಘಾಟಿಸಿದರು.

ನಂತರ ಗೋಳಿತೊಟ್ಟು ಬೀದಿಯಲ್ಲಿ ವಿದ್ಯಾರ್ಥಿಗಳ ವೈಭವದ ಮೆರವಣಿಗೆ ನಡೆದು ವಿದ್ಯಾರ್ಥಿಗಳನ್ನು ಸಹಿ ಹಂಚುವುದರ ಮೂಲಕ ವಿದ್ಯಾ ಸಂಸ್ಥೆಗೆ ಸ್ವಾಗತಿಸಲಾಯಿತು.ಕಲಿಕಾ ಚೇತರಿಕಾ ವರ್ಷದ ಮೊದಲ ದಿನವಾದ ಇಂದು ವಿದ್ಯಾರ್ಥಿಗಳಿಗೆ ಆಟೋಟ ಚಟುವಟಿಕೆಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಯ ಸದಸ್ಯರು, ಪೋಷಕರು, ಭಾಗವಹಿಸಿದ್ದರು. ಎಸ್.ಡಿ.ಎಂ.ಸಿ ಯ ಅಧ್ಯಕ್ಷರು ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿದರು. ಶಿಕ್ಷಕಿ ಶ್ರೀಮತಿ ಸಚಿತ ಸ್ವಾಗತಿಸಿ, ಶಾಲಾ ನೂತನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಂತಿ ಬಿ.ಎಂ. ವಂದಿಸಿದರು. ಸಹ ಶಿಕ್ಷಕರುಗಳಾದ ಜಾನ್.ಕೆ.ಪಿ, ತೇಜಸ್ವಿ.ಕೆ, ಸೀಮಾ, ಅಬ್ದುಲ್ ಲತೀಪ್ ಸಹಕರಿಸಿದರು.
💐 ಜಾಹೀರಾತು 💐





