ನೇಸರ ಮೇ 17: ದ. ಕ. ಜಿ. ಪಂ. ಹಿ. ಪ್ರಾ ಶಾಲೆ ಪೆರಾಬೆ ಶಾಲಾ ಪ್ರಾರಂಭೋತ್ಸವ ಜಾಥಾವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ನೇಮಿರಾಜ ಕಲ್ಲಡ್ಕ ಇವರು ಉದ್ಘಾಟಿಸಿದರು.
ಹೊಸದಾಗಿ ದಾಖಲಾದ ಮಕ್ಕಳಿಗೆ ಪುಸ್ತಕ ಸಾಮಗ್ರಿಗಳನ್ನು ವಿತರಿಸುವುದರ ಮೂಲಕ ಮುಖ್ಯ ಶಿಕ್ಷಕಿ ಶ್ರೀಮತಿ ಸುಚೇತಕುಮಾರಿ ಇವರು ಸ್ವಾಗತಿಸಿದರು. ಶಿಕ್ಷಕರಾದ ಶ್ರೀಮತಿ ಹೇಮಲತಾ ಪ್ರದೀಪ್, ರಾಘವೇಂದ್ರ ಪ್ರಸಾದ್, ಶ್ರೀಮತಿ ಸುಪ್ರೀತಾ ಹಾಗೂ ಎಸ್.ಡಿ.ಯಂ.ಸಿ ಪದಾಧಿಕಾರಿಗಳು, ಪೋಷಕರು, ಹಿರಿಯ ವಿದ್ಯಾಥಿ೯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
💮 ಜಾಹೀರಾತು 💮