ಕಾಂಚನ: ಮಕ್ಕಳ ಮನಸ್ಸಿನ ಸ್ಪಂದನೆಗೆ ವೇದಿಕೆ ಕಲ್ಪಿಸಿದ ಜೇಸಿ ಮಕ್ಕಳ ಬೇಸಿಗೆ ಶಿಬಿರ “ಸ್ಪಂದನ”

ಶೇರ್ ಮಾಡಿ

ನೇಸರ ಮೇ‌ 17: ಮುದ್ದು ಮಕ್ಕಳ ಕಲರವ, ನೂರಾರು ಕನಸುಗಳು, ಮುಗ್ಧ ಸ್ವಚ್ಛ ಮನಸ್ಸಿನ ಸ್ಪಂದನೆಯ ಮಕ್ಕಳ ಒಡನಾಟ, ಭವಿಷ್ಯದ ಯೋಗ್ಯ ಪೀಳಿಗೆಯ ನಿರ್ಮಾಣದ ಹೊಣೆಹೊತ್ತ ಪ್ರೀತಿಯ ಪೋಷಕರ ಪಾಲ್ಗೊಳ್ಳುವಿಕೆಯೊಂದಿಗೆ ಜೇಸಿಐ, ಜೆಜೆಸಿ ಉಪ್ಪಿನಂಗಡಿ ಘಟಕದ ಮುಂದಾಳತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ಮತ್ತು ಕಾಂಚನ ಶ್ರೀ ಲಕ್ಷ್ಮೀನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಿಕ್ರಂ ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆ ಇವರ ಅಧ್ಯಕ್ಷತೆಯಲ್ಲಿ ಪ್ರಾಂಶುಪಾಲರಾದ ಶ್ರೀ ಗಣರಾಜ್ ಕುಂಬ್ಳೆಯವರು “ಸ್ಪಂದನ” ಮಕ್ಕಳ ಬೇಸಿಗೆ ಶಿಬಿರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಜತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸ್ಮಿತಾ ಧನಂಜಯ ಪುಯಿಲ ಶಿಬಿರ ಆಯೋಜಿಸಿದಕ್ಕೆ ವಿವಿಧ ಸಂಘ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜೇಸಿ ಪೂರ್ವಾಧ್ಯಕ್ಷ ಜೇಸಿ ಜಯಪ್ರಕಾಶ್ ಶೆಟ್ಟಿ, ಯುವಕ ಮಂಡಲದ ಅಧ್ಯಕ್ಷ ಶ್ರೀ ಅನಿಲ್ ಪಿಂಟೊ, ಉಪಾಧ್ಯಕ್ಷ ಶ್ರೀ ಸಚಿನ್ ಮುದ್ಯ, ಕಾಂಚನ ವಿದ್ಯಾಸಂಸ್ಥೆಗಳ ಮುಖ್ಯೋಪಾಧ್ಯಾಯರುಗಳಾದ ಶ್ರೀ ಸೂರ್ಯಪ್ರಕಾಶ, ಶ್ರೀ ಲಕ್ಷ್ಮಣ, ನಿಕಟಪೂರ್ವ ಅಧ್ಯಕ್ಷ ಜೇಸಿ ಕೆ ವಿ ಕುಲಾಲ್, ಜೆಜೆಸಿ ಅಧ್ಯಕ್ಷರಾದ ಜೆಜೆಸಿ ಶ್ರೀರಕ್ಷಾ, ಮಕ್ಕಳಿಗೆ ವಿವಿಧ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳಾದ ನೀನಾಸಂ ಶ್ರೀ ಶೀನಾ ನಾಡೋಳಿ ಮತ್ತು ಚಿತ್ರಕಲಾ ಶಿಕ್ಷಕ ಶ್ರೀ ಕೆ.ವಿಶ್ವನಾಥ ವಿಟ್ಲ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರ ಶಿಕ್ಷಕೇತರ ಪ್ರೇರಣೆ, ಶಿಕ್ಷಕರಕ್ಷಕ ಅಧ್ಯಕ್ಷರಾದ ಶ್ರೀ ವೇಣುಗೋಪಾಲ್ ರ ಬೆಂಬಲ, ಉಪಾಹಾರದ ಜವಾಬ್ದಾರಿ ನಿರ್ವಹಿಸಿದ ಶಂಕರ್ ನಾಯಕ್, ಉಪ್ಪಿನಂಗಡಿ ಜೇಸಿ ಘಟಕದ ಸ್ಥಾಪಕ ಸದಸ್ಯರಾಗಿ ಮತ್ತು ಪೂರ್ವಾಧ್ಯಕ್ಷರಾದ ಹಿರಿಯ ಜೇಸಿ ಡಾ.ಎಂ.ಆರ್.ಶೆಣೈ ಅವರ ಕಾರ್ಯಕ್ರಮಕ್ಕೆ ಪ್ರೀತಿಯ ಶುಭ ಹಾರೈಕೆಗಳು, ಡಾಕ್ಟರ್ ಗೋವಿಂದ ಪ್ರಸಾದ್ ಕಜೆ ಇವರ ಪರಿಣಾಮಕಾರಿ ಭಾಷಣ ಕಲೆ ತರಬೇತಿ, ಶಿಬಿರ ಸಂಚಾಲಕ ಜೇಸಿ ಪ್ರಶಾಂತ್ ಕುಮಾರ್ ರೈ, ಶಿಬಿರ ನಿರ್ದೇಶಕ ಜೇಸಿ ಶಶಿಧರ್ ನೆಕ್ಕಿಲಾಡಿ, ಜೇಸಿ ಕೇಶವ ರಂಗಾಜೆ, ಜೇಸಿ ಹರೀಶ್ ನಟ್ಟಿಬೈಲು, ಜೇಸಿ ಲವಿನಾ ಪಿಂಟೊ, ಜೇಸಿ ಅವನೀಶ್, ಜೇಸಿ ಕುಶಾಲಪ್ಪ, ಜೇಸಿ ದಿವಾಕರ ಶಾಂತಿನಗರದ, ಜೇಸಿ ಪುರುಷೋತ್ತಮ ತೋಟದ ಮನೆ, ಜೇಸಿ ಮಹೇಶ್ ಖಂಡಿಗ, ಜೇಸಿ ಪ್ರಮೀಳಾ ಮಹೇಶ್, ಜೇಸಿ ಮನೋಜ್, ಜೇಸಿ ಉದಯಚಂದ್ರ, ಜೇಸಿ ನಾಗೇಶ್ ಬಿದಿರಾಡಿ ಇವರು ಮಾರ್ಗದರ್ಶನ ಮಾಡಿದರು. ಸ್ಥಳೀಯರಾದ ಶ್ರೀ ಶಂಕರ್ ನಾಯಕ್ ಕಾಂಚನ, ಶ್ರೀ ದೇವದಾಸ್ ‘ಸೌಭಾಗ್ಯ ನಿಲಯ’ ಪದಕ ಕಾಂಚನ, ಶ್ರೀ ಕೃಷ್ಣ ಪ್ರಸಾದ್ “ಜನನಿ” ಅಂಬಟೆಮಾರು ಕಾಂಚನ, ಶ್ರೀ ಹೇಮಂತ್ ನೆಕ್ಕರೆ, ಶ್ರೀ ಬಾಲಕೃಷ್ಣ ಮುಖ್ಯಗುರುಗಳು ಉಜಿರೆ, ಶ್ರೀಹರೀಶ್ ಉರಾಬೆ, ಶ್ರೀದಿನೇಶ್ ನಡ್ಪ, ಶ್ರೀಯಾದವ ನೆಕ್ಕರೆ, ಶ್ರೀ ರುಕ್ಮಯ ಪುಯಿಲ ‘ಚರಣ್ ಶಾಮಿಯಾನ’ , ಶ್ರೀ ಉದಯ ಚಂದ್ರ ಅಗರ್ತಿಮಾರು ತನು-ಮನ-ಧನದಿಂದ ಸಹಕರಿಸಿದರು.

ಮಕ್ಕಳ ಶಿಬಿರದ ಕಾರ್ಯಕ್ರಮದ ಸಮಾರೋಪ ಭಾಷಣವನ್ನು ವಲಯಾಧ್ಯಕ್ಷರಾದ ಜೇಸಿ ರೋಯನ್ ಉದಯ್ ಕ್ರಾಸ್ತ ನೇರವೇರಿಸಿದರು. ಉಪ್ಪಿನಂಗಡಿ ಜೇಸಿಯ ಪೂರ್ವಾಧ್ಯಕ್ಷರಾದ ಜೇಸಿ ರವೀಂದ್ರ ದರ್ಬೆ ಸಂದರ್ಭೋಚಿತವಾಗಿ ಮಾತನಾಡಿದರು. ವಲಯ ಮಹಿಳಾ ಜೇಸಿ ನಿರ್ದೇಶಕಿ ಶ್ರೀಮತಿ ಮಾರಿಯಾ ಜ್ಯೋತಿ ರೊಡ್ರಿಗಸ್ ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಶಿಬಿರದ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಮೂರು ದಿನ ನಡೆದ ಶಿಬಿರದಲ್ಲಿ ಮಕ್ಕಳು ಸೇರಿದಂತೆ 125 ರಿಂದ 150 ಮಂದಿ ಸರಾಸರಿಯಾಗಿ ಪಾಲ್ಗೊಳ್ಳುತ್ತಿದ್ದರು. ಇನ್ನೂ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಪೇಸ್ ಬುಕ್, ಮತ್ತು ಪತ್ರಿಕೆಗಳ ಮೂಲಕ ಐವತ್ತು ಸಾವಿರದಿಂದ ಒಂದು ಲಕ್ಷ ಕ್ಕೂ ಮಿಕ್ಕಿ ಶಿಬಿರದ ಚಟುವಟಿಕೆಗಳಲ್ಲಿ ಭಾಗವಹಿಸಿಸುತ್ತ ಬಂದಿರುತ್ತಾರೆ. ಮಕ್ಕಳ ಆಸಕ್ತಿ, ಸ್ಪಂದನೆ, ಪಾಲ್ಗೊಳ್ಳುವಿಕೆ, ಉತ್ತಮ ಸಭಾಂಗಣದ ವ್ಯವಸ್ಥೆ, ಶಾಲಾ ಬಿಸಿಯೂಟದವರ ಪ್ರಾಮಾಣಿಕ ಸ್ಪೂರ್ತಿಯುತ ಕೆಲಸ ಕಾರ್ಯಗಳು, ಸುದ್ದಿ ಬಿಡುಗಡೆ ಪತ್ರಿಕೆಯ ಸಂತೋಷ್ ಶಾಂತಿನಗರ ಮತ್ತು ವಸಂತ್, ನೇಸರ ಜಾಲತಾಣ ಪತ್ರಿಕೆಯ ಜೇಸಿ ಪ್ರಶಾಂತ್ ಅವರ ಕಾರ್ಯಕ್ರಮದ ವರದಿ ಪ್ರಕಟಣೆಗೆ ವಹಿಸಿದ ಮುಂದಾಳತ್ವ ಶಿಬಿರ ಅತ್ಯುತ್ತಮವಾಗಿ ಮೂಡಿಬರಲು ಸಹಾಯಕವಾಗಿವೆ. ಭವಿಷ್ಯದಲ್ಲಿ ಮಕ್ಕಳ ಶಿಬಿರ ನಡೆದಾಗ ಪೋಷಕರು ಶಿಬಿರಕ್ಕೆ ತಮ್ಮ ಮಕ್ಕಳನ್ನು ಕಳಿಸುವುದಕ್ಕೆ ಪ್ರೇರಣೆ ಹುಟ್ಟಿರುವುದೇ ಈ ಸ್ಪಂದನ ಮಕ್ಕಳ ಬೇಸಿಗೆ ಶಿಬಿರದ ದೊಡ್ಡ ಕೊಡುಗೆಯಾಗಿದೆ. ಇದೇ ಸಂದರ್ಭದಲ್ಲಿ ಜೇಸಿ ಸಂಸ್ಥೆಗೆ ಕಾಂಚನದಿಂದ ನಾಲ್ಕು ಹೊಸ ಸದಸ್ಯರ ಸೇರ್ಪಡೆಯಾಗಿದ್ದರೆ. ಇದು ಜೇಸಿ ಪ್ರಪಂಚಕ್ಕೆ ಸಂತೋಷದ ವಿಚಾರವಾಗಿದೆ. ಈ ಎಲ್ಲಾ ನೆನಪುಗಳೊಂದಿಗೆ ಮೊಟ್ಟಮೊದಲ ಬಾರಿಗೆ ಕಾಂಚನದಲ್ಲಿ ಆಯೋಜಿಸಿದ ಸ್ಪಂದನ ಮಕ್ಕಳ ಬೇಸಿಗೆ ಶಿಬಿರ ಬಹಳ ಯಶಸ್ವಿಯಾಗಿ ಕೊನೆಗೊಂಡಿತ್ತು.

ವೀಕ್ಷಿಸಿ SUBSCRIBERS ಮಾಡಿ

🌸 ಜಾಹೀರಾತು 🌸

Leave a Reply

error: Content is protected !!