ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಡುಬೆಟ್ಟು ಶಾಲಾ ಪ್ರಾರಂಭೋತ್ಸವ

ಶೇರ್ ಮಾಡಿ

ನೇಸರ ಮೇ‌ 17: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಡುಬೆಟ್ಟು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ದಿನಾಂಕ 16.05.2022 ರಂದು ನಡೆಯಿತು. ಶಾಲೆಗೆ ಹೊಸದಾಗಿ ಸೇರಿದ ವಿದ್ಯಾರ್ಥಿಗಳನ್ನು ಬಲೂನು ಹಾಗೂ ಹೂವು ನೀಡಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಿವಪ್ರಸಾದ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ರವಿಪ್ರಸಾದ್ ಶೆಟ್ಟಿ ಇವರು ಶುಭ ಹಾರೈಸಿದರು. ನೂತನ ಮುಖ್ಯ ಗುರುಗಳಾದ ಶ್ರೀಮತಿ ಜೆಸ್ಸಿ ಕೆ ಎ ಇವರು ಪ್ರಾಸ್ತಾವಿಕ ವಾಗಿ ಮಾತನಾಡಿ ನೂತನ ಕಾರ್ಯಕ್ರಮ ವಿದ್ಯಾಪ್ರವೇಶ ಕಲಿಕಾ ಚೇತರಿಕೆ, ಮಳೆಬಿಲ್ಲು ಇವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಸಲಾಂ ಬಿಲಾಲ್, ಪುಷ್ಪಾ, ಜಯಲಕ್ಷ್ಮಿ ಪ್ರಸಾದ್, ಪ್ರಕಾಶ್ ಪೂಜಾರಿ ಹಾಗೂ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರುಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಲೀಲಾವತಿ ಎಂ, ಕವಿತಾ ಡಿ, ಮಮತಾ ಸಿ.ಹೆಚ್. ನ್ಯಾನ್ಸಿ ಲಿಝಿ ಸಹಕಾರ ನೀಡಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಹಶಿಕ್ಷಕಿಯಾದ ಶ್ರೀಮತಿ ಸಜಿನ ಕೆ ಎರೋಡಿ ಇವರು ಸ್ವಾಗತಿಸಿದರು. ಸಹ ಶಿಕ್ಷಕಿಯಾದ ಕಮಲಾಕ್ಷಿ ಕೆ ಇವರು ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಮುಖ್ಯ ಗುರುಗಳಾದ ಜೆಸ್ಸಿ ಕೆ ಎ ಇವರು ಧನ್ಯವಾದ ಸಲ್ಲಿಸಿದರು.

ವೀಕ್ಷಿಸಿ SUBSCRIBERS ಮಾಡಿ

🌸 ಜಾಹೀರಾತು 🌸

Leave a Reply

error: Content is protected !!