ನೇಸರ ಮೇ 16:ಸರಕಾರಿ ಹೈಯರ್ ಪ್ರೈಮರಿ ಸ್ಕೂಲ್ ಆಲಂಗಾರು ಶಾಲಾ ಪ್ರಾರಂಭೋತ್ಸವ ಬಹಳ ವಿಜ್ರಂಭಣೆಯಿಂದ ಮುನ್ನೂರಕ್ಕೂ ಹೆಚ್ಚು ಮಕ್ಕಳು ಪುರಮೆರವಣಿಗೆಯಲ್ಲಿ ಭಾಗವಹಿಸಿ ಶಾಲೆಗೆ ತಲುಪಿದ ಮಕ್ಕಳಿಗೆ ಶಾಲಾ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರಿಂದ ಗುಲಾಬಿ ಹೂವನ್ನು ನೀಡಿ, ಆರತಿ ಎತ್ತುವುದರ ಮೂಲಕ ಸ್ವಾಗತಿಸಲಾಯಿತು.
ಪೋಷಕರು, ಗ್ರಾಮ ಪಂಚಾಯತ್ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಊರಿನ ಶಾಲಾ ಅಭಿಮಾನಿಗಳನ್ನು ಜೊತೆಗೊಂದು ಕಾರ್ಯಕ್ರಮ ಜರಗಿತು. ಸಭಾ ಕಾರ್ಯಕ್ರಮದಲ್ಲಿ ಸಭೆ ಅಧ್ಯಕ್ಷತೆಯನ್ನು ದಯಾನಂದ ಕರ್ಕೆರ ವಹಿಸಿದ್ದರು. ಮುಖ್ಯಗುರುಗಳಾದ ನಿಂಗರಾಜು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಕಾರ್ಯಕರ್ತೆ ಮತ್ತು ಆಶಾ ಕಾರ್ಯಕರ್ತರು ಜೊತೆಗೂಡಿ ಆರೋಗ್ಯ ಇಲಾಖೆಯ ಪ್ರತಿನಿಧಿಯಿಂದ ಪ್ರಸ್ತುತ ಸಂದರ್ಭದಲ್ಲಿ ಆರೋಗ್ಯದ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸಿದರು. ಸಭೆಯಲ್ಲಿ ಸಿ ಆರ್ ಪಿ ಶ್ರೀಮತಿ ಯಶೋಧ ಸಂದರ್ಭೋಚಿತವಾಗಿ ಮಾತನಾಡಿದರು. ಪೋಷಕ ಪ್ರತಿನಿಧಿಗಳಾಗಿ ಕುಶಾಲಪ್ಪಗೌಡ ಅಂಬುಲ, ರಾಜಾರಾಮ್ ಭಟ್, ಆರೋಗ್ಯ ಇಲಾಖೆ ಪ್ರತಿನಿಧಿ ಕುಮಾರಿ ಯಶ್ವಿತಾ ಮತ್ತು ಸರೋಜಿನಿ, ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
🌸 ಜಾಹೀರಾತು 🌸