ನೇಸರ ಮೇ 16: ಜೆಸಿಐ ಆಲಂಕಾರಿನಲ್ಲಿ ಸಾಮಾಜಿಕ ಜವಾಬ್ದಾರಿ ಎಂಬ ವಿಷಯದ ಕುರಿತಾಗಿ ವಲಯ ಮಟ್ಟದ ತರಬೇತಿ ಕಾರ್ಯಕ್ರಮವು ಆಲಂಕಾರು ಗ್ರಾಮಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸೀನಿಯರ್ ಮೆಂಬರ್ಸ್ ಅಸೋಸಿಯೇಶನ್ ಇದರ ಉಪಾಧ್ಯಕ್ಷ ಜೆಸಿ ಪ್ರಶಾಂತ್ ಕುಮಾರ್ ರೈಯವರು ದೀಪ ಬೆಳಗಿಸಿ ನೆರವೇರಿಸಿ ಕೊಟ್ಟರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ “ಜೆಸಿಐ ಎಂಬ ಸಂಘಟನೆ ಸಮಾಜ ಸುಧಾರಣೆಯನ್ನು ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ವ್ಯಕ್ತಿಗಳನ್ನು ಬೆಳೆಸುವ ಮೂಲಕ, ವ್ಯಕ್ತಿಗಳನ್ನೇ ಸಮಾಜದ ಆಸ್ತಿಯನ್ನಾಗಿಸಿ, ಸಮಾಜ ಸುಧಾರಣೆಯನ್ನು ತರಬೇತಿಗಳ ಮೂಲಕ ಮಾಡುತ್ತದೆ. ಇಂಥಹ ಒಂದು ವಲಯ ಮಟ್ಟದ ತರಬೇತಿ ಇಂದು ಆಲಂಕಾರಿನಲ್ಲಿ ಆಯೋಜನೆಗೊಂಡಿದೆ. ಈ ಕಾರ್ಯಕ್ರಮವು ಯಶಸ್ವಿಯಾಗಲಿ” ಎಂದು ಹೇಳಿದರು.
ತರಬೇತಿಯ ಮುಖ್ಯ ತರಬೇತುದಾರರಾದ ಜೆಸಿಐ ಆಥರ್ ಪದವೀಧರ, ರಾಷ್ಟ್ರೀಯ ತರಬೇತುದಾರ ಜೆಸಿಐ ಸೆನ್ ಕೃಷ್ಣಮೋಹನ್‌ರವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ” ಜೆಸಿಐ ಸಂಘಟನೆ ಸಮಾಜದಲ್ಲಿ ಪರಿಣಾಮಕಾರಿ ಬದಲಾವಣೆ ತರುತ್ತದೆ. ಈ ಉದ್ದೇಶದಿಂದ ಮೊದಲಿಕೆ ಸಮಸ್ಯೆಯ ಮೂಲಕಾರಣವನ್ನು ಹುಡುಕಿ, ಅದರನ್ನು ವಿಮರ್ಶೆ ಮಾಡಿ, ಪರಿಹಾರವನ್ನು ಸಮಾಲೋಚಿಸಿ, ಅದನ್ನು ಕಾರ್ಯರೂಪಕ್ಕೆ ತಂದು ತದನಂತರ ಪರಾಮರ್ಶಿಸುವ ಮೂಲಕ ಸಮಸ್ಯೆಗೆ ಖಾಯಂ ಪರಿಹಾರವನ್ನು ಕಂಡುಕೊಳ್ಳಲಾಗುತ್ತದೆ.” ಎಂದು ಹೇಳಿ ತರಬೇತಿಯ ವಿಷಯದ ಪಕ್ಷಿನೋಟವನ್ನು ಮಾಡಿಸಿದರು. ಸಹತರಬೇತುದಾರರಾದ ಜೆಎಫ್‌ಪಿ ಹೇಮಲತಾ ಪ್ರದೀಪ್ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಲಯದ ಉಪಾಧ್ಯಕ್ಷೆ ಜೆಸಿಐ ಸೆನ್ ಸ್ವಾತಿ ಜೆ ರೈ ಯವರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ತರಬೇತಿಗಳೇ ಜೆಸಿಐನ ಜೀವಾಳ. ಇಂಥಹ ತರಬೇತಿಗಳಲ್ಲಿ ಮಹತ್ವವನ್ನು ಪಡೆದಿರುವ ವಲಯ ಮಟ್ಟದ ಬಹುಘಟಕ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಆಲಂಕಾರು ಘಟಕದ ಅಧ್ಯಕ್ಷರಿಗೆ ಮತ್ತು ಸರ್ವ ಸದಸ್ಯರಿಗೆ ಧನ್ಯವಾದಗಳು. ಬೇರೆ ಬೇರೆ ಘಟಕದಿಂದ ಬಂದಿರುವ ಶಿಬಿರಾರ್ಥಿಗಳೆಲ್ಲರೂ ಈ ತರಬೇತಿಯ ಸಂಪೂರ್ಣ ಸದುಪಯೋಗ ಮಾಡಿಕೊಳ್ಳಬೇಕು” ಎಂದು ಹೇಳಿದರು. ಈ ಸಂದರ್ಭದಲ್ಲಿ ಜೆಸಿಐ ಆಲಂಕಾರಿನ ಸ್ಥಾಪಕಾಧ್ಯಕ್ಷ ಜೆಸಿ ಬಿಎಲ್ ಜನಾರ್ದನ್, ಕಾರ್ಯದರ್ಶಿ ಚೇತನ್ ಎಂ, ಜೆಜೆಸಿ ಅಧ್ಯಕ್ಷೆ ಜ್ಯೋತಿಕಾ ರೈ, ಲೇಡಿ ಜೇಸಿ ಮಮತಾ ಅಂಬರಾಜೆ, ಬೇರೆ ಬೇರೆ ಘಟಕಗಳ ಅಧ್ಯಕ್ಷರು, ಸದಸ್ಯರು, ಆಲಂಕಾರು ಘಟಕದ ಪೂರ್ವಾಧ್ಯಕ್ಷರುಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಜೆಸಿಐ ಆಲಂಕಾರು ಘಟಕದ ಅಧ್ಯಕ್ಷ ಜೆಸಿ ಅಜಿತ್ ಕುಮಾರ್ ರೈಯವರು ಸ್ವಾಗತಿಸಿದರು. ಕಾರ್ಯಕ್ರಮದ ನಿರ್ದೇಶಕರಾದ ಜೆಸಿ ಗುರುಕಿರಣ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಭೆಯನ್ನು ತರಬೇತಿಗಾಗಿ ಮುಂದೂಡಲಾಯಿತು.
ತರಬೇತಿಯ ಸಂದರ್ಭದಲ್ಲಿ ಜೆಸಿಐ ವಲಯ 15ರ ಅಧ್ಯಕ್ಷ ಜೆಸಿ ರೋಯನ್ ಉದಯ್ ಕ್ರಾಸ್ತ, ವಲಯ ಆಡಳಿತ ಮಂಡಳಿಯ ನಿರ್ದೇಶಕ ಜೆಸಿ ಪುರುಷೋತ್ತಮ ಶೆಟ್ಟಿ, ವಲಯ ಉಪಾಧ್ಯಕ್ಷ ರೀಜನ್ ಬಿ ಯ ಜೆಸಿ ಪ್ರಶಾಂತ್ ಲಾಯಿಲ ಮತ್ತು ಇತರ ಗಣ್ಯರು ಆಲಂಕಾರು ಘಟಕಕ್ಕೆ ಭೇಟಿ ನೀಡಿದರು.
🌼 ಜಾಹೀರಾತು 🌼