ನೇಸರ ಮೇ 16: ಸ.ಉ.ಹಿ.ಪ್ರಾ.ಶಾಲೆ ಉಪ್ಪಾರಪಳಿಕೆಯಲ್ಲಿ ಕಲಿಕಾ ಚೇತರಿಕೆ ಪ್ರಯುಕ್ತ ಶಾಲಾ ಪ್ರಾರಂಭೋತ್ಸವ ಮೇ 16ರಂದು ಅದ್ದೂರಿಯಾಗಿ ನಡೆಯಿತು.
ಶಿಕ್ಷಕ ದಾಮೋದರ ಅಜ್ಜಾವರ ನೇತೃತ್ವದಲ್ಲಿ ಕಿರಿಯ ವಿದ್ಯಾರ್ಥಿಗಳ ಮೆರವಣಿಗೆಗೆ ಹಿರಿಯ ವಿದ್ಯಾರ್ಥಿಗಳು ಬ್ಯಾಂಡ್ ಬಾರಿಸುವುದರ ಮೂಲಕ ಚಾಲನೆ ನೀಡಿದರು. ಶಾ.ಸ.ಅ. ಜಯಪ್ರಕಾಶ್ ಬಾಳ್ತಿಲ್ಲಾಯ, ನಿ.ಪೂ.ಅ. ರಮೇಶ್ ಕುಡಾಲ, ಸಮಿತಿ ಸದಸ್ಯರು, ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಪುಷ್ಪವೃಷ್ಟಿಗರೆದು ಶಾಲೆಗೆ ಸ್ವಾಗತಿಸಿ ಕೊಂಡರು. ಈ ಸಂದರ್ಭ ಶಾಲೆಗೆ ನೂತನವಾಗಿ ಆಗಮಿಸಿದ ಮುಖ್ಯಶಿಕ್ಷಕಿ ಸರಸ್ವತಿ ಅವರನ್ನು ವಿದ್ಯಾರ್ಥಿಗಳು ಸ್ವಾಗತಿಸಿದರು. ಶಾಲಾ ಶಿಕ್ಷಕಿಯರಾದ ಕ್ರಿಸ್ತಿನಾ, ವನಿತಾ, ವನಿತಾ ಅಶೋಕ್ ಉಪಸ್ಥಿತರಿದ್ದರು.
🌸 ಜಾಹೀರಾತು 🌸