ನೇಸರ ಮೇ 16: ಕ್ಯಾಂಪ್ಕೋ ನಿಯಮಿತ ಮಂಗಳೂರು ಇದರ ಸಹಭಾಗಿತ್ವದಲ್ಲಿ ನೆಲ್ಯಾಡಿ ಶಾಖೆಯಲ್ಲಿ ಕಾಳುಮೆಣಸು ಖರೀದಿ ಕೇಂದ್ರವನ್ನು ದಿನಾಂಕ 16-05-2022 ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ಶೆಟ್ಟಿ ಪಟ್ಟೆ ಅವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಶ್ರೀ ಕೃಷ್ಣ ಪ್ರಸಾದ್ ಮಡ್ತಿಲ ಅವರು ಕ್ಯಾಂಪ್ಕೋ ಸಂಸ್ಥೆಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ನೀಡಿದರು. ಕಾಳುಮೆಣಸು ವಿಭಾಗ ಆಧಿಕಾರಿ ನಿತಿನ್ ಕೋಟ್ಯಾನ್ ಮತ್ತು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ದಯಾಕರ್ ರೈ ಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿಪರ ಕೃಷಿಕರಾದ ರಾಧಕೃಷ್ಣ ಎಡಪಡಿತ್ತಾಯ, ವಸಂತಕೃಷ್ಣ, ಎಂ ಕೃಷ್ಣ , ಕಮಲಾಕ್ಷ, ಇಲಿಯಾಸ್ ಕೆ ಪಿ, ಸುಮಯ್ಯ, ರವಿ ಕೆ ಕೆ, ಎನ್ ವಿ ವ್ಯಾಸ ಮೊದಲಾದ ಮೊದಲ ಕೃಷಿಕರು ಕಾಳುಮೆಣಸು ನೀಡುವುದರೊಂದಿಗೆ ಚಾಲನೆ ನೀಡಿದರು. ನೆಲ್ಯಾಡಿ ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಮ್ಯಾನೇಜರ್, ಸಿಬ್ಬಂದಿ ವರ್ಗ ಮತ್ತು ನೆಲ್ಯಾಡಿ ಕ್ಯಾಂಪ್ಕೋ ಶಾಖೆಯ ಸಿಬ್ಬಂದಿ ವರ್ಗ ಸಹಕರಿಸಿದರು. ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿ, ಕ್ಯಾಂಪ್ಕೋ ಸಂಸ್ಥೆಯ ನೆಲ್ಯಾಡಿ ಶಾಖಾ ಮ್ಯಾನೇಜರ್ ದಿನೇಶ್ ರವರು ಧನ್ಯವಾದ ಸಮರ್ಪಿಸಿದರು.
⛳ ಜಾಹೀರಾತು ⛳