ನೇಸರ ಮೇ 21: ಶಿಶಿಲ ದೇವಾಲಯದಲ್ಲಿ ವಾರ್ಷಿಕ ಜಾತ್ರೆಯ ಅವಭ್ರತ ಕಾರ್ಯಕ್ರಮ. ದೇವಾಲಯದಿಂದ ಹೊರಟ ದೇವರ ಸವಾರಿ ರಾಜ ರಸ್ತೆಯಲ್ಲಿ ಸಾಗಿ ಹಲವಾರು ಕಟ್ತೆ ಪೂಜೆಯಲ್ಲಿ ಭಕ್ತರಿಂದ ಪೂಜೆಯನ್ನು ಪಡೆದ ಸ್ವಾಮಿ ಕೊನೆಗಳಿಗೆಯಲ್ಲಿ ಮತ್ಸ್ಯಗಳು ಇರುವ ಜಾಗ “ಮೀನುಗಳ ಗುಂಡಿ” ಎಂಬಲ್ಲಿ ರುದ್ರ ಪಠಣ, ಮಹಾಪೂಜೆ ಪಡೆದು ಮತ್ತೆ ಹಿಂತುರುಗಿ ರಾಜ ರಸ್ತೆಯಲ್ಲಿ ಬಂದು ದೇವಾಲಯದಲ್ಲಿ ಧ್ವಜ ಅವರೋಹಣ ಆಗುತ್ತದೆ.
ವಿಶೇಷವೆಂದರೆ ದೇವರು ಅವಭ್ರತ ಹೊರಡುವ ಮೊದಲು ಕಪಿಲಾ ನದಿಯಲ್ಲಿ ತೆಪ್ಪೋತ್ಸವ ನಡೆಯುತ್ತದೆ. ನದಿ ನಡುವಿನಲ್ಲಿರುವ “ಕಪಿಲಾ” ಎಂಬ ಕಲ್ಲಿಗೆ ದೇವರು, ಅರ್ಚಕರು, ತಂತ್ರಿಗಳು ವಿಶೇಷವಾಗಿ ಬಿದಿರಿನಿಂದ ತಯಾರಿಸಿದ ತೆಪ್ಪದಲ್ಲಿ ಕುಳಿತುಕೊಂಡು ಮೂರು ಪ್ರದಕ್ಷಿಣೆ ಬರುತ್ತಾರೆ. ಇದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ ಮತ್ತು ಶ್ರದ್ಧೆ, ನಂಬಿಕೆ. ನಂತರ ಅವಭ್ರತ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಕಪಿಲಾ ನದಿಯ ಮಧ್ಯದಲ್ಲಿ ಮತ್ಸ್ಯಗಳ ನಡುವಿನಲ್ಲಿ ಇರುವ ಕಪಿಲಾ ಕಲ್ಲನ್ನು ಉಳಿದ ಸಂದರ್ಭಗಳಲ್ಲಿ ಯಾರೂ ಸ್ಪರ್ಶಿಸುವುದಿಲ್ಲ. ಅದು ದೇವರ ಕಲ್ಲೆಂದೆ ಖ್ಯಾತಿ ಪಡೆದಿದ್ದು.ಇಂದಿಗೂ ನಾವು ನೋಡಬಹುದು.
ಜಾಹೀರಾತು