ನೆಲ್ಯಾಡಿ: ಉಪ್ಪಿನಂಗಡಿ ಠಾಣಾಧಿಕಾರಿ ಕುಮಾರ್ ಸಿ ಕಾಂಬ್ಳೆ ನೇತ್ರತ್ವದಲ್ಲಿ ಧಾರ್ಮಿಕ ಮುಖಂಡರಿಗೆ ಮಾಹಿತಿ ಕಾರ್ಯಗಾರ

ಶೇರ್ ಮಾಡಿ

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನಾವೆಲ್ಲರೂ ಬದ್ಧರಾಗಿರಬೇಕು –  ಕುಮಾರ್ ಸಿ ಕಾಂಬ್ಳೆ, ಉಪ್ಪಿನಂಗಡಿ ಠಾಣಾಧಿಕಾರಿ

ನೇಸರ ಮೇ‌.25: ಧ್ವನಿ ವರ್ಧಕಗಳ ಬಳಕೆ ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಧಾರ್ಮಿಕ ಮುಖಂಡರಿಗೆ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರುಗಳ ಕಾರ್ಯಗಾರವನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಹಾಗೂ ಕ್ರೈಸ್ತ ಧಾರ್ಮಿಕ ಮುಖಂಡರುಗಳ ಮಾಹಿತಿ ಕಾರ್ಯಗಾರವನ್ನು ನೆಲ್ಯಾಡಿ ಹೊರಠಾಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಗಾರದಲ್ಲಿ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಧಾರ್ಮಿಕ ಕೇಂದ್ರಗಳಲ್ಲಿ ಬಳಸುವ ಧ್ವನಿವರ್ಧಕಗಳ ಧ್ವನಿ ಮೌಲ್ಯಗಳ ಬಗ್ಗೆ ವಿವರಿಸಲಾಯಿತು. ಧಾರ್ಮಿಕ ಕೇಂದ್ರಗಳಲ್ಲಿ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಕೆ, ಅಥವಾ ಕಾವಲುಗಾರನ ನೇಮಕ ಮಾಡಿಕೊಳ್ಳುವಂತೆ ತಿಳಿಸಲಾಯಿತು. ನಗರದಲ್ಲಿ ಎಲ್ಲಾ ಸಂದರ್ಭದಲ್ಲೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತೆ ತಿಳಿಸಲಾಯಿತು. ತುರ್ತು ಸಂದರ್ಭಗಳಲ್ಲಿ ಬಳಸಲಾಗುವ 112 ಸಹಾಯವಾಣಿಯ ಬಗ್ಗೆಯೂ ತಿಳಿಸಲಾಯಿತು. ಶಿರಾಡಿ, ಇಚಿಲಂಪಾಡಿ, ನೆಲ್ಯಾಡಿ, ಉದನೆ, ಉಪ್ಪಿನಂಗಡಿ ವ್ಯಾಪ್ತಿಯ ಧಾರ್ಮಿಕ ಮುಖಂಡರು ಕಾರ್ಯಗಾರದಲ್ಲಿ ಪಾಲ್ಗೊಂಡರು.
ಉಪ್ಪಿನಂಗಡಿ ಠಾಣಾಧಿಕಾರಿ ಕುಮಾರ್ ಸಿ ಕಾಂಬ್ಳೆ ಮಾಹಿತಿಯನ್ನು ನೀಡಿದರು. ಈ ಸಂದರ್ಭ ನೆಲ್ಯಾಡಿ ಹೊರಠಾಣಾ ಸಿಬ್ಬಂದಿಗಳಾದ ಹೆಡ್ ಹೆಡ್ ಕಾನ್ಸ್ ಟೇಬಲ್ ಗಳಾದ ಬಾಲಕೃಷ್ಣ, ಹಿತೋಶ್, ಕಾನ್ಸ್ಟೇಬಲ್ ಯೋಗರಾಜ್ ಮೊದಲಾದವರು ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!