ನೇಸರ ಮೇ.25: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಜನರಿಗೆ ಮೇ 25 ಎಂದೂ ಮರೆಯಲಾರದ ದಿನ.
ಇಂದಿನಿಂದ 26 ವರ್ಷಗಳ ಹಿಂದೆ ಬೆಳಗ್ಗಿನ ಜಾವದಿಂದಲೆ ಕಪಿಲ ನದಿಯಲ್ಲಿ ಒದ್ದಾಡಿದ ಲಕ್ಷಾಂತರ ಮತ್ಸ್ಯಗಳು. ನದಿ ಪೂರ್ತಿ ವಿಷ. ಜಲಚರಗಳೂ ನಾಶ. ನಂಬಿಕೆ, ಶ್ರದ್ದೆಯಿಂದ ಕಪಿಲಾ ನದಿಯಲ್ಲಿ ಸಾವಿರಾರು ವರ್ಷದಿಂದ ಪೂಜಿಸುತ್ತಿದ್ದ “ಮತ್ಸ್ಯಗಳ ನಾಶ” ದುಷ್ಟಶಕ್ತಿಗಳಿಗಾಗಿ ಹಿಡಿ ಶಾಪ. ಭಕ್ತರ ಕಣ್ಣೀರು. ಇಂದಿಗೂ ಈ ದಿನವನ್ನು ಶಿಶಿಲದಲ್ಲಿ ” ಮತ್ಸ್ಯ ದುರಂತ ” ದಿನವೆನ್ನುತ್ತಾರೆ. ಮಡಿದ ದೇವರ ಮೀನುಗಳಿಗೆ ಸದ್ಗತಿ ದೊರಕಲಿ. ಮತ್ತೆ ಈ ರೀತಿಯ ಘಟನೆ ನಡೆಯದಂತೆ ಜಾಗ್ರತರಾಗೊಣ. ಮಡಿದ ಮತ್ಸ್ಯಗಳು ಮತ್ತೆ ಕಪಿಲೆಯಲ್ಲಿ ಜನಿಸಲಿ ಎಂದು ಭಕ್ತರು ಪ್ರಾರ್ಥಿಸುತ್ತಿದ್ದಾರೆ.
ಜಾಹೀರಾತು