ಸಂಕಷ್ಟದಲ್ಲಿರುವ ಕಲಾವಿದರ ಕಣ್ಣೊರೆಸುವ ಕೆಲಸ ಮಾಡುತ್ತಿರುವ ಪಟ್ಲ ಸತೀಶ್ ಶೆಟ್ಟಿ – ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ

ಶೇರ್ ಮಾಡಿ

ನೇಸರ ಮೇ‌.31: ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಮೇ‌.29 ಭಾನುವಾರ ನಡೆದ ಯಕ್ಷಧ್ರುವ ಪಟ್ಲ ಸಂಭ್ರಮ 2022 ಕಾರ್ಯಕ್ರಮದ ಅದ್ದೂರಿ ವೈಭವದ ಮೆರವಣಿಗೆ ನಂತರ ನಡೆದ ಉದ್ಘಾಟನಾ ಸಮಾರಂಭವನ್ನು ಎಕ್ಸ್ ಕ್ಲೂಸಿವ್ ನೆಟ್ವರ್ಕ್ ಸೇಲ್ಸ್ ಇಂಡಿಯಾದ ಹಣಕಾಸು ವಿಭಾಗದ ನಿರ್ದೇಶಕ ದಿನಕರ ರಾವ್ ನೆರವೇರಿಸಿದರು. ಅಡ್ಯಾರ್ ಗಾರ್ಡನ್ ನ ಡಾ.ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಜರಾತ್ ನ ಉದ್ಯಮಿ ಶಶಿಧರ್ ಬಿ. ಶೆಟ್ಟಿ ಸಂಭ್ರಮಾಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾದ ಅರೋಗ್ಯ ಶಿಬಿರವನ್ನು ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಕೂಡ್ಲು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರಾಕೇಶ್ ಪೂಂಜ ಸಂಪಾದಕತ್ವದಲ್ಲಿ ಹೊರತಂದಿರುವ “ಧ್ರುವ ಪ್ರಭಾ” ಗ್ರಂಥವನ್ನು ಐಕಳ ಹರೀಶ್ ಶೆಟ್ಟಿ ಬಿಡುಗಡೆಗೊಳಿಸಿದರು. ಶರತ್ ಶೆಟ್ಟಿ ಪಡುಪಳ್ಳಿಯವರು ಬರೆದ “ಯಕ್ಷ ರಂಗದಲ್ಲಿ ಧ್ರುವತಾರೆಪಟ್ಲ” ಪುಸ್ತಕವನ್ನು ರವಿಶಂಕರಶೆಟ್ಟಿ ಬಡಾಜೆ ಬಿಡುಗಡೆಗೊಳಿಸಿದರು.
ಆಶೀರ್ವಚನ:
ಶ್ರೀ ಕ್ಷೇತ್ರ ಕೊಂಡವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಸಂಕಷ್ಟದಲ್ಲಿರುವ ಕಲಾವಿದರ ಕಣ್ಣೊರೆಸುವ ಕೆಲಸ ಮಾಡುತ್ತಿರುವ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದ ಯಕ್ಷಧ್ರುವ ಪಟ್ಲ ಪೌಂಡೇಶನ್ ಕಾರ್ಯ ಸಮಾಜಕ್ಕೆ ಮಾದರಿ ಎಂದರು. ಪಟ್ಲ ಪೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು, ಕನ್ಯಾನ ಶುಭಾಶಂಸನೆಗೈದರು, ಮಾಜಿ ಸಚಿವ ಕೃಷ್ಣ ಜಿ. ಪಾಲೆಮಾರ್, ಮೈಸೂರಿನ ಜ್ಞಾನಸರೋವರ ಅಂತರಾಷ್ಟ್ರೀಯ ವಿದ್ಯಾಸಂಸ್ಥೆಯ ಸುಧಾಕರ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಓ ಅನಿಲ್ ಕುಮಾರ್ ಯಸ್. ಯಸ್.ಯು ಎಸ್ಐ ಪುತ್ತಿಗೆ ಮಠದ ಯೋಗಿಂದ್ರ ಭಟ್ ಉಳಿ, ನಿಟ್ಟೆ ವಿ.ವಿ ಕುಲಪತಿ ಡಾ. ಸತೀಶ್ ಭಂಡಾರಿ, ಕತಾರ್ ಉದ್ಯಮಿ ಡಾ.ರವಿ ಶೆಟ್ಟಿ ಮೂಡಂಬೈಲು, ಮುಂಬಯಿ ಬಂಟ್ಸ್ ಸಂಘದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಮಹೇಶ್ ಮೋಟಾರ್ಸ್ ನ ಮಾಲೀಕ ಜಯರಾಮ್ ಶೇಖ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಅಡ್ಯಾರ್ ಮಾಧವ ನಾಯಕ್, ವಿಜಯ ಕುಮಾರ್ ಅಮೀನ್, ವಿಶ್ವನಾಥ ಶೆಟ್ಟಿ ಮುಂಬಯಿ ಉಪಸ್ಥಿತರಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು, ಜತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ಅಶೋಕ್ ನಗರ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

 

Leave a Reply

error: Content is protected !!