ಶಿಶಿಲೇಶ್ವರನ ತೀರ್ಥಕ್ಷೇತ್ರದಲ್ಲಿ ನೀರು ನಾಯಿಗಳ ಹಾವಳಿ : ಭಕ್ತರು ಕಂಗಾಲು

ಶೇರ್ ಮಾಡಿ

ನೇಸರ ಮೇ‌.31: ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರನ ಸನ್ನಿಧಿ ಮತ್ಸ್ಯಗಳಿಂದಲೇ ಖ್ಯಾತಿ ಪಡೆದಿದೆ. ದೇವಾಲಯಕ್ಕೆ ಬರುವ ಭಕ್ತರು ಇಲ್ಲಿರುವ ತೀರ್ಥಕ್ಷೇತ್ರದ ಮತ್ಸ್ಯಗಳನ್ನು ಕಣ್ತುಂಬಿಸಿಕೊಳ್ಳುವ ಪರಿಯೇ ಚಂದ. ಆದರೀಗ ಜನರು ಆರಾಧಿಸುವ ಮತ್ಸ್ಯಗಳು ನೀರು ನಾಯಿಗಳ ಕಾಟಕ್ಕೆ ಕಂಗೆಟ್ಟಿವೆ. ಕಪಿಲೆಯ ಒಡಲಲ್ಲಿರುವ ಮತ್ಸ್ಯಗಳ ಸಾವು ಇಲ್ಲಿನ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟುಮಾಡಿದೆ.

ನೀರು ನಾಯಿಗಳ ಕಾಟ ಈ ಪ್ರದೇಶದಲ್ಲಿ ಕಳೆದ 5 ವರ್ಷಗಳಿಂದಲೂ ಇದ್ದು, ಬೇಸಿಗೆ ಕಾಲದ ಮೇ ತಿಂಗಳಲ್ಲಿ ಈ ಪ್ರದೇಶದ 3-4 ಕಡೆಯಿಂದ ಗುಂಪು ಗುಂಪಾಗಿ ಮತ್ಸ್ಯಗಳು ಬರುತ್ತಿದ್ದು, ದೇವಳದ ಪಕ್ಕದಲ್ಲಿರುವ ನದಿಯ ಮೀನಿನ ತಲೆಯ ಭಾಗವನ್ನಷ್ಟೇ ತಿಂದು ಹಾಕುತ್ತಿದೆ. ಉಳಿದ ಭಾಗಗಳು ನೀರಿನಲ್ಲಿ ತೇಲುತ್ತಿರುತ್ತದೆ. ದೇವಳದ ಸನಿಹದಲ್ಲಿರುವ ನಾಗಬನ ಹಾಗೂ ದುರ್ಗಮ ಸ್ಥಳದಿಂದ ಈ ನೀರುನಾಯಿ ಬರುತ್ತಿದೆ.
ಅರಣ್ಯ ಇಲಾಖಾಧಿಕಾರಿಗಳು ಹೇಳುವುದೇನು:
ಈ ಪ್ರದೇಶ ನೀರುನಾಯಿ ಹಾಗೂ ಮತ್ಸ್ಯಗಳ ಆವಾಸ ಸ್ಥಾನವಾಗಿದ್ದು, ಪ್ರಕೃತಿ ಸಹಜವಾದ ಆಹಾರವನ್ನು ತಿಂದುಕೊಂಡು ಅವು ಇಲ್ಲೇ ಬದುಕುತ್ತವೆ. ಪ್ರಶಾಂತವಾದ, ಸ್ವಚ್ಚ ಜಾಗದಲ್ಲಿ ಈ ನೀರುನಾಯಿ ಆಹಾರದ ಅಗತ್ಯತೆಯನ್ನು ನೋಡಿಕೊಂಡು ಬದುಕುತ್ತದೆ. ಜೋರಾದ ಮಳೆಗೆ ಸಹಜವಾಗಿ ಶಿಶಿಲದ ಬರ್ಗುಳ ಸಹಿತ ಇತರ ಪ್ರದೇಶಕ್ಕಿದು ಚದುರಿ ಬದುಕುತ್ತವೆ. ಬೇಸಿಗೆ ಕಾಲಕ್ಕೆ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ಆಹಾರ ಸೇವನೆಗೆ ಬಂದು ತಿರುಗಿ ಪೊಟರೆಗಳಿಗೆ ಹೋಗುವಾಗ ನಮಗೆ ಕಾಣ ಸಿಗುತ್ತವೆ. ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದಾಗ ನಮಿಗಿದು ಅಷ್ಟು ಕಾಣಸಿಗದು. ಅಲ್ಲದೆ ದೇವಳದ ಸಮೀಪ ನೀರು ಸಂಗ್ರಹಗೊಳ್ಳಲು ತಡೆಬೇಲಿ ಹಾಕಿರುವ ಕಾರಣ ಈ ಪ್ರದೇಶದಲ್ಲೇ ಹೆಚ್ಚು ಮೀನು ಸಂಗ್ರಹವಾದ ಕಾರಣ ನೀರು ನಾಯಿ ಕೂಡ ಸುಲಭ ಆಹಾರಕ್ಕಾಗಿ ಇಲ್ಲಿದೆ.
ಸಭೆಯಲ್ಲಿ ಕಂಡುಕೊಂಡ ಪರಿಹಾರ:
ಶಿಶಿಲ ದೇವಳದ ಕಾವಲು ಸಮಿತಿ ಪಡೆ, ಮತ್ಸ್ಯ ಹಿತರಕ್ಷಣಾ ವೇದಿಕೆ, ಅರಣ್ಯ ಇಲಾಖೆ, ಅರಣ್ಯ ಸಮಿತಿ ಹಾಗೂ ಭಕ್ತರ ಈ ಬಗ್ಗೆ ಸಭೆ ಸೇರಿ, ಒಮ್ಮತದ ನಿರ್ಧಾರದ ಪ್ರಕಾರ ಜೋರಾಗಿ ಮಳೆ ಬರುವ ತನಕ ಸಂಜೆಯ ವೇಳೆ ಈ ಪ್ರದೇಶದಲ್ಲಿ ದೇವಳದ ಕಾವಲು ಸಮಿತಿ ಪಡೆಯನ್ನು ಬಲಪಡಿಸಿ ನೀರು ನಾಯಿಗಳು ಬರದಂತೆ ಕಾವಲು ಕಾಯುವುದು. ಶ್ರಮದಾನದ ಮೂಲಕ ಸುತ್ತಮುತ್ತಲಿನ ಪೊದೆಗಳನ್ನು ತೆರವುಗೊಳಿಸಿ ಶುಚಿಗೊಳಿಸುವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಶ್ರೀನಿವಾಸ ಮೂಡೆತ್ತಾಯ, ಅರಣ್ಯ ಇಲಾಖೆಯ ಉಪ ವಲಯರಣ್ಯಾದಿಕಾರಿ ಪ್ರಶಾಂತ್, ಅರಣ್ಯ ರಕ್ಷಕ ನಾಗಲಿಂಗ ಬಡಿಗೇರ್, ಮತ್ಸ್ಯ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಯರಾಮ ನೆಲ್ಲಿತ್ತಾಯ, ಪಂ.ಅಧ್ಯಕ್ಷ ಸಂದೀಪ್, ಅರಣ್ಯ ಸಮಿತಿ ಅಧ್ಯಕ್ಷ ಪದ್ಮನಾಭ ಹಾಗೂ ದೇವಳದ ಭಕ್ತರು ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!