ಜೆಸಿಐ ಕೊಕ್ಕಡ ಕಪಿಲಾಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ

ಶೇರ್ ಮಾಡಿ

ನೇಸರ ಜೂ.01: ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ನಡೆದ ವಲಯದ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು.

ಜೆಸಿಐ ವಲಯ 15ರ ಅಧ್ಯಕ್ಷ ರಾಯನ್ ಉದಯ್ ಕ್ರಾಸ್ತ ವಲಯದ ಪ್ರಥಮ ಮಹಿಳೆ ಮಾರಿಯಾ ರೋಯನ್ ಉಪಾಧ್ಯಕ್ಷರಾದ ರವಿಚಂದ್ರ ಪಾಟಾಳಿ, ಸ್ವಾತಿ ರೈ, ಪೂರ್ವ ಅಧ್ಯಕ್ಷರುಗಳು ಆಡಳಿತ ಮಂಡಳಿಯ ಸದಸ್ಯರ ಸಮ್ಮುಖದಲ್ಲಿ 2022ನೇ ಸಾಲಿನ ಅಧ್ಯಕ್ಷೀಯ ಅವಧಿಯಲ್ಲಿ ಅದ್ದೂರಿ ಪದಗ್ರಹಣ, ಕೊಕ್ಕಡ ಕೋರಿ ಗದ್ದೆಯಲ್ಲಿ ನಾಟಿ ನೇಜಿ, ಹಲವು ಶಾಲೆಗಳಲ್ಲಿ ಸಮಾಧಾನ, ದೇವಸ್ಥಾನಗಳಲ್ಲಿ ಸಮಾಧಾನ, ರಕ್ತದಾನ, ಮಕ್ಕಳಿಗೆ ಸ್ಪರ್ಧೆ ಮತ್ತು ಬಹುಮಾನ ವಿತರಣೆ, ಬೃಹತ್ ಕ್ರಿಕೆಟ್ ಪಂದ್ಯಾಟ, ಗ್ರಾಮ ಪಂಚಾಯತ್ ಜೊತೆಗೆ ಸ್ವಚ್ಛತಾ ಆಂದೋಲನ, ಎನ್ ಎಸ್ ಎಸ್ ಶಿಬಿರದ ಸಹಭಾಗಿತ್ವ, ಹಸಿ ತ್ಯಾಜ್ಯ ನಿರ್ವಹಣಾ ತರಬೇತಿ, ಸ್ವಚ್ಛ ಕುಡಿಯುವ ನೀರಿನ ತರಬೇತಿ, ವಿವಿಧ ಸಂಸ್ಥೆಗಳಿಗೆ ಸಹಾಯ ಧನ, ಶಾಲಾ ಪ್ರಾರಂಭೋತ್ಸವ, ವಲಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ, ಕನ್ನಡ ಸಾಹಿತ್ಯ ಪರಿಷತ್ ಅಭ್ಯರ್ಥಿ ಜೊತೆಗೆ ಸಂವಾದ ಕಾರ್ಯಕ್ರಮ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ, ಭಾರತೀಯ ಜೇಸಿ ಫೌಂಡೇಶನ್ ಗೆ JFP ಕೊಡುಗೆ, ಜೆಸಿಪಿ ಸದಸ್ಯರಿಗೆ ವಿವಿಧ ತರಬೇತಿಗಳು, ಜಾನುವಾರು ಸಾಕಾಣಿಕೆ ತರಬೇತಿ, ಸದಸ್ಯತ್ವ ಶುಲ್ಕ ರವಾನೆ ಮೊದಲಾದಮೊದಲಾದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಿಗಾಗಿ ಕೊಕ್ಕಡ ಕಪಿಲ ಜೆಸಿ ಅಧ್ಯಕ್ಷರಾದ ಶ್ರೀಧರ್ ರಾವ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಜೂನಿಯರ್ ಜೇಸಿ ಧನುಷ್ ಇವರಿಗೆ ವಲಯ ಮಟ್ಟದ ದ್ವಿತೀಯ ಅತ್ಯುತ್ತಮ ಭಾಷಣಕಾರ ಪ್ರಶಸ್ತಿ ದೊರೆತಿದೆ.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!