ನೇಸರ ಜೂ.01: ತಿರ್ಲೆ ಶ್ರೀ ವಿಷ್ಣುಮೂರ್ತಿದೇವಸ್ಥಾನ ಕೊಣಾಲು. ನೂತನ ದೇವಾಲಯದ ಶಿಲಾನ್ಯಾಸ ದಿನಾಂಕ 01-06-2022 ನೇ ಬುಧವಾರ ನಡೆಯಿತು.
ಬ್ರಹ್ಮಶ್ರೀ ವೇದಮೂರ್ತಿ ನಾಗೇಶ ತಂತ್ರಿ ಹಾಗೂ ಶ್ರೀ ರಮೇಶ ಕಾರಂತರ ನಿರ್ದೇಶನದಲ್ಲಿ ನೂತನ ದೇವಾಲಯದ ಶಿಲಾನ್ಯಾಸವನ್ನು ಶ್ರೀ ಎಡನೀರು ಮಠಾಧೀಶರಾದ ಪರಮಪೂಜ್ಶ್ರ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀಗಳು ಮಾತನಾಡುತ್ತಾ ದೇವಾಲಯಗಳ ಪುನರ್ ನಿರ್ಮಾಣ ಧರ್ಮ ಕಾರ್ಯದಲ್ಲಿ ಭಾಗಿಗಳಾಗುವುದು ಪುಣ್ಯದ ಕೆಲಸ ಶಿಥಿಲಾವಸ್ಥೆಗೆ ತಲುಪಿದ ದೇವಾಲಯಗಳು ಮತ್ತೆ ಪುನರ್ ನಿರ್ಮಾಣಗೊಳ್ಳುತ್ತಿರುವುದು ಹಿಂದೂ ಧರ್ಮದ ಏಳಿಗೆಯ ಸಂಕೇತ ಈ ಭಾಗದ ಜನತೆಯ ಭಕ್ತಿಯ ಸಂಕೇತವಾಗಿ ಈ ದೇವಾಲಯ ಶೀಘ್ರವಾಗಿ ನಿರ್ಮಾಣವಾಗಲಿ ಎಂದು ಹಾರೈಸಿ ಆಶೀರ್ವದಿಸಿದರು.
ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಆಡಳಿತ ಮೊಕ್ತೇಸರರು ಶ್ರೀಷಣ್ಮುಖ ದೇವಸ್ಥಾನ ಕಾಂಚನ ಪೆರ್ಲ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ದೇವಸ್ಥಾನದ ವಾಸ್ತುಶಿಲ್ಪಿ ರಮೇಶ್ ಕಾರಂತರು ಜೀರ್ಣೋದ್ಧಾರದ ಬಗ್ಗೆ ಸಲಹೆ ನೀಡುತ್ತಾ ಈ ದೇವಾಲಯ ವಾಸ್ತು ಬದ್ಧವಾಗಿ ನಿರ್ಮಾಣಗೊಳ್ಳಲಿದೆ, ಆಲಯ ನಿರ್ಮಾಣವಾಗಿ ಆದಷ್ಟು ಬೇಗ ಪುನರ್ ಪ್ರತಿಷ್ಠೆಯನ್ನು ನೋಡುವ ಭಾಗ್ಯ ನಮ್ಮದಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಲರಾಮ ಆಚಾರ್ಯ ಸ್ವರ್ಣ ಉದ್ಯಮಿಗಳು ಪುತ್ತೂರು ಇವರು ಈ ಪರಿಸರದ ಜನರ ಧಾರ್ಮಿಕ ಜವಾಬ್ಧಾರಿಯ ಶುಭರಾಂಭವಿದು, ಸ್ವಾಮೀಜಿಯವರ ಅಮೃತ ಹಸ್ತದಿಂದ ಆರಂಭವಾದ ಈ ಪುಣ್ಯ ಕಾರ್ಯ ಶೀಘ್ರ ಸಂಪೂರ್ಣಗೊಳ್ಳು ದರಲ್ಲಿ ಸಂಶಯವಿಲ್ಲ ಎಂದರು. ವೇದಿಕೆಯಲ್ಲಿ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ ತಂತ್ರಿ, ರಾಧಾಕೃಷ್ಣ ಕುವೆಚ್ಚಾರು, ಕಾರ್ಯದರ್ಶಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ರಾಮಕುಂಜ. ಪಿ ಕುಶಾಲಪ್ಪಗೌಡ ಪೂವಾಜೆ, ಪ್ರತಿಷ್ಠಾ ಮಹೋತ್ಸವದ ಅಧ್ಯಕ್ಷರು ಮಾಯಿಲ ಕೋಟೆಯ ದೈವ ಸನ್ನಿಧಿ, ಕೊಕ್ಕಡ ಸೀಮೆ. ಶ್ರೀಮತಿ ತೇಜಸ್ವಿನಿ ಕಟ್ಟಪುಣಿ, ಮಾಜಿ ಸದಸ್ಯರು ತಾಲೂಕು ಪಂಚಾಯತ್. ಶಿವಾನಂದ ಕಾರಂತ ಅಧ್ಯಕ್ಷರು ಜೀರ್ಣದ್ದಾರ ಸಮಿತಿ, ಜನಾರ್ದನ, ಅಧ್ಯಕ್ಷರು ಗ್ರಾಮ ಪಂಚಾಯತ್ ಗೋಳಿತೊಟ್ಟು. ಶ್ರೀಮತಿ ಉಷಾ ಅಂಚನ್ ಮಾಜಿ ಸದಸ್ಯರು ತಾಲೂಕು ಪಂಚಾಯತ್. ಅಜಿತ್ ಪಾಲೇರಿ ಉಪಾಧ್ಯಕ್ಷರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಉಪ್ಪಿನಂಗಡಿ. ಮಾಧವ ಸರಳಾಯ ಆಡಳಿತ ಧರ್ಮದರ್ಶಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಶ್ರೀಮತಿ ಆರತಿ ರವಿಕುಮಾರ್ ವರದಿ ವಾಚಿಸಿದರು, ಜೊತೆ ಕಾರ್ಯದರ್ಶಿ ಜಯಂತ ಅಂಬರ್ಜೆ ಸ್ವಾಗತಿಸಿ, ಹರೀಶ್ ಧನ್ಯವಾದ ಸಮರ್ಪಿಸಿ, ಬಾಲಚಂದ್ರ ರೈ ಪಾತ್ರಜೆ ನಿರೂಪಿಸಿದರು.
ಜಾಹೀರಾತು