ನೇಸರ ಜೂ.09:ಪರಿಸರ ದಿನಾಚರಣೆ ಅಂಗವಾಗಿ ಆಲಂಕಾರು ಲಯನ್ಸ್ ಕ್ಲಬ್, ಜೆಸಿಐ ನೆಲ್ಯಾಡಿ, ನೆಲ್ಯಾಡಿ ವಲಯ ಬಂಟರ ಸಂಘ ಹಾಗೂ ಎಸ್‌ಕೆಎಸ್‌ಎಸ್‌ಎಫ್ ನವರ ಸಹಕಾರದೊಂದಿಗೆ ನೆಲ್ಯಾಡಿ ಹಾಗೂ ಕೊಣಾಲು ಶಾಲಾ ವಠಾರದಲ್ಲಿ, ಗೋಳಿತೊಟ್ಟುನ ಮೆಸ್ಕಾಂ ಪವರ್ ಮ್ಯಾನ್, ಪರಿಸರ ಪ್ರೇಮಿ ದುರ್ಗಾಸಿಂಗ್‌ರವರ ಮಾರ್ಗದರ್ಶನದಲ್ಲಿ ಜಪಾನ್ ವಿಜ್ಞಾನಿ ‘ಮಿಯಾ ವಾಕಿ’ ಮಾದರಿಯಲ್ಲಿ ವಿವಿಧ ಜಾತಿಯ ಹಣ್ಣುಗಳ ಹಾಗೂ ಅರಣ್ಯ ಗಿಡಗಳನ್ನು ನಾಟಿ ಮಾಡಲಾಯಿತು.
ಆಲಂಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಜಯಂತಿ ಬಿ.ಎಂ., ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ನಿತ್ಯಾನಂದ ರೈ ಮನವಳಿಕೆ, ಬಂಟರ ಸಂಘದ ಪದಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ಪುರ, ಸುಂದರ ಶೆಟ್ಟಿ ಪುರ, ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಕ್ಲಸ್ಟರ್ ಅಧ್ಯಕ್ಷ ಯೂಸುಫ್ ಬೈಲಂಗಡಿ, ಕಾರ್ಯದರ್ಶಿ ಅನ್ಸೀಫ್ ಎ., ಕೋಶಾಧಿಕಾರಿ ಹೈದರ್ ಮಲ್ಲಿಗೆ, ಎಸ್‌ಕೆಎಸ್‌ಎಸ್‌ಎಫ್ ಗೋಳಿತ್ತೊಟ್ಟು ಅಧ್ಯಕ್ಷ ಹಾರೀಸ್ ಪಿ.ಎಸ್., ಕೋಶಾಧಿಕಾರಿ ಜಲೀಲ್ ಹೆಚ್., ವಿಖಾಯ ಕನ್ವೀನರ್ ಹನೀಫ್ ಮರ್ಲಾಪು, ಅಬ್ದುಲ್ ಕುಂಞಿ ಕೊಂಕೋಡಿ, ಎಸ್‌ಕೆಎಸ್‌ಎಸ್‌ಎಫ್ ಕೊಕ್ಕಡ ಶಾಖೆ ಕಾರ್ಯದರ್ಶಿ ಸಿರಾಜ್ ಸೌತಡ್ಕ, ಎಸ್‌ಕೆಎಸ್‌ಎಸ್‌ಎಫ್ ನೆಲ್ಯಾಡಿ ಶಾಖೆ ಕೋಶಾಧಿಕಾರಿ ಶುಕೂರ್ ಕೆ.ಜಿ.ಎನ್. ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಾಹೀರಾತು