ನೆಲ್ಯಾಡಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಶಾಖೆಯಲ್ಲಿ ಗಣಹೋಮ, ಲಕ್ಷ್ಮೀ ಪೂಜೆ

ಶೇರ್ ಮಾಡಿ

ನೇಸರ ಜೂ.09:ನೆಲ್ಯಾಡಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆ 9ನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಯಲ್ಲಿ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀ ಪೂಜೆ ಜೂ.8ರಂದು ನಡೆಯಿತು.

ಗಣಹೋಮ, ಲಕ್ಷ್ಮೀ ಪೂಜೆಯನ್ನು ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಅರ್ಚಕ ಶ್ರೀಧರ ನೂಜಿನ್ನಾಯರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಬೈಲಾಡಿಯವರು ಮಾತನಾಡಿ, ಪುತ್ತೂರು ಎಪಿಎಂಸಿ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು ಹಾಗೂ ಪುತ್ತೂರಿನಲ್ಲಿ ಶಾಖೆಗಳಿವೆ. ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಒಟ್ಟು 7 ಶಾಖೆಗಳನ್ನು ಹೊಂದಿದೆ. ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಮಣಾಯಿ ಸಂಕೀರ್ಣದಲ್ಲಿ ಸ್ವಂತ ಕಟ್ಟಡದಲ್ಲಿ ಪ್ರಧಾನ ಕಚೇರಿ ಹೊಂದಿದೆ. 2014ರಲ್ಲಿ ನೆಲ್ಯಾಡಿಯಲ್ಲಿ ಶಾಖೆ ಆರಂಭಗೊಂಡಿದ್ದು 8 ವರ್ಷ ಯಶಸ್ವಿಯಾಗಿ ಪೂರೈಸಿದೆ ಎಂದು ಹೇಳಿದರು.

ಸನ್ಮಾನ:
ನೆಲ್ಯಾಡಿ ಶಾಖೆಯಲ್ಲಿ ಸ್ಥಾಪಕ ಮೇನೇಜರ್ ಆಗಿದ್ದು ಇದೀಗ ಪುತ್ತೂರು ಶಾಖೆಗೆ ಮೇನೇಜರ್ ಆಗಿ ವರ್ಗಾವಣೆಗೊಂಡಿರುವ ಶಿವಪ್ರಸಾದ್, ಪುತ್ತೂರು ಎಪಿಎಂಸಿ ರಸ್ತೆ ಶಾಖೆಗೆ ವರ್ಗಾವಣೆಗೊಂಡಿರುವ ಸಿಬ್ಬಂದಿ ರಾಧಾಕೃಷ್ಣ ಹಾಗೂ ಆಲಂಕಾರು ಶಾಖೆಗೆ ವರ್ಗಾವಣೆಗೊಂಡಿರುವ ಸಿಬ್ಬಂದಿ ವಿಜಯಕುಮಾರ್‌ರವರಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಯಿತು.
ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಗೌಡ, ನಿರ್ದೇಶಕರುಗಳಾದ ಜಿನ್ನಪ್ಪ ಗೌಡ ಮುಳುವೇಲು, ಸತೀಶ್ ಪಾಂಬಾರು, ಲೋಕೇಶ್ ಸಿ.ಹೆಚ್., ಸುಪ್ರಿತಾ ರವಿಚಂದ್ರ, ತೇಜಸ್ವಿನಿಶೇಖರ ಗೌಡ, ಸಂಘದ ನಿರ್ದೇಶಕರೂ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಂಟ್ಯಾನ, ಸಂಘದ ಮಾಜಿ ನಿರ್ದೇಶಕ ನಾಗೇಶ್ ನಳಿಯಾರು, ನೆಲ್ಯಾಡಿ ಶಾಖಾ ಸಮಿತಿ ಸದಸ್ಯರಾದ ರಾಧಾಕೃಷ್ಣ ಕೆರ್ನಡ್ಕ, ನೋಣಯ್ಯ ಗೌಡ ಡೆಬ್ಬೇಲಿ, ಡೊಂಬಯ್ಯ ಗೌಡ ಶಿರಾಡಿ, ಜಿನ್ನಪ್ಪ ಗೌಡ ಪೊಸೊಳಿಕೆ, ಸುರೇಶ್ ಪಡಿಪಂಡ, ಸುಲತ ಮೋಹನಚಂದ್ರ, ಸಂಘದ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಆಂತರಿಕ ಲೆಕ್ಕಪರಿಶೋಧಕ ಶ್ರೀಧರ ಕಣಜಾಲು, ನೆಲ್ಯಾಡಿ ಡೆಂಜ ಕಾಂಪ್ಲೆಕ್ಸ್ ಮಾಲಕ ಪುರಂದರ ಗೌಡ, ನೆಲ್ಯಾಡಿ ಶ್ರೀರಾಮ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು, ಜಯಕುಮಾರ್, ಬಾಲಕೃಷ್ಣ ಗೌಡ, ತಿಮ್ಮಪ್ಪ ಗೌಡ ಇಚ್ಚೂರು, ಜನಾರ್ದನ ಗೌಡ ಪಿಲವೂರು, ಬೆಳಿಯಪ್ಪ ಗೌಡ ಕಜೆ, ಮೊದಲಾದವರು ಉಪಸ್ಥಿತರಿದ್ದರು. ನೆಲ್ಯಾಡಿ ಶಾಖಾ ಮೇನೇಜರ್ ವಿನೋದ್‌ರಾಜ್ ಎಸ್, ವಂದಿಸಿದರು. ಸಿಬ್ಬಂದಿಗಳಾದ ಕಾರ್ತಿಕ್ ಎಂ, ಅಜಿತ್‌ಕುಮಾರ್, ಪುತ್ತೂರು ಶಾಖೆಯ ಸಿಬ್ಬಂದಿ ಯಕ್ಷಿತ್ ಸಹಕರಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!