ನೇಸರ ಜೂ.09: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು, ಸುಬ್ರಹ್ಮಣ್ಯ ಇದರ ಮಾನವಿಕ ಸಂಘ ಮತ್ತು ತೃತೀಯ ಕಲಾ ಪದವಿಯ ಸಹಭಾಗಿತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಅಂತರ್ ತರಗತಿ ಕಲಾ ಹಬ್ಬ-‘DREAMS 2K22’ ಅನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ.ಪಿ.ಟಿ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅನುಗ್ರಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಚಂದ್ರಶೇಖರ್ ನಾಯರ್ ಉದ್ಘಾಟನೆ ನಡೆಸಿದರು. ಮುಖ್ಯ ಅತಿಥಿಯಾಗಿ ಸುಬ್ರಹ್ಮಣ್ಯ ಠಾಣಾಧಿಕಾರಿ ಯಾದ ಜಂಬುರಾಜ್ ಮಹಾಜನ್, ಕಾಲೇಜಿನ ಐಕ್ಯೂಎಸಿ ಘಟಕದ ಮುಖ್ಯಸ್ಥರಾದ ಡಾ.ಪ್ರಸಾದ್.ಎನ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶ್ರೀಲತಾ ಕಮಿಲ, ಮಾರ್ಗದರ್ಶಕಿಯಾದ ಶ್ರೀಮತಿ ಸ್ವಾತಿ ಕೆ, ಮಾನವಿಕ ಸಂಘದ ಸಂಯೋಜಕಿ ಶ್ರೀಮತಿ ಶಶಿ. ಕೆ, ವಿದ್ಯಾರ್ಥಿ ಸಂಯೋಜಕ ಚೇತನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಶ್ರೀಮತಿ ಆರತಿ ಕೆ ಸ್ವಾಗತಿಸಿ, ಚೇತನ್.ಎಂ ಧನ್ಯವಾದ ನೆರವೇರಿಸಿದರು. ವಿದ್ಯಾರ್ಥಿನಿಗಳಾದ ಅನುಶ್ರೀ ಬಿ ಮತ್ತು ರಕ್ಷಿತ .ಎನ್ ಆರ್ ಕಾರ್ಯಕ್ರಮ ನಿರೂಪಿಸಿದರು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ.ಪಿ.ಟಿ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ಅತ್ಯಾಡಿ ಮುಖ್ಯ ಅತಿಥಿಯಾಗಿ ಆಗಮಿಸಿ ಅಭಿನಂದನಾ ಭಾಷಣವನ್ನು ನೆರವೇರಿಸಿದರು.
ಕಾಲೇಜಿನ ಐಕ್ಯೂಎಸಿ ಘಟಕದ ಮುಖ್ಯಸ್ಥರಾದ ಡಾ.ಪ್ರಸಾದ್.ಎನ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶ್ರೀಲತಾ ಕಮಿಲ, ಮಾನವಿಕ ಸಂಘದ ಸಂಯೋಜಕಿ ಶ್ರೀಮತಿ ಶಶಿ. ಕೆ, ವಿದ್ಯಾರ್ಥಿ ಸಂಯೋಜಕ ಚೇತನ್ ಎಂ ಮತ್ತು ಹರ್ಷಿತ.ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಹರ್ಷಿತಾ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಡಾ.ಪ್ರಸಾದ್.ಎನ್ ಸ್ವಾಗತಿಸಿ, ಕೌಶಿಕ್.ಬಿ.ಎಸ್ ಧನ್ಯವಾದ ನೆರವೇರಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಡಿ.ಟಿ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು