ನೆಲ್ಯಾಡಿ: ಸಾಫಿಯೆನ್ಶಿಯ ಬೆಥನಿ ಪ್ರಥಮ ದರ್ಜೆ ಕಾಲೇಜು ಎನ್ ಎಸ್ ಎಸ್ ಶಿಬಿರ

ಶೇರ್ ಮಾಡಿ

ನೇಸರ ಜೂ.14: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಸಾಫಿಯೆನ್ಶಿಯ ಬೆಥನಿ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿ ಇದರ ವಾರ್ಷಿಕ ವಿಶೇಷ ಶಿಬಿರ ಜೂನ್ 6 ರಿಂದ ಜೂನ್ 12ರ ವರೆಗೆ ಬೆಥನಿ ಸಂಯುಕ್ತ ಮಹಾವಿದ್ಯಾಲಯ ನೂಜಿಬಾಳ್ತಿಲದಲ್ಲಿ ನಡೆಯಿತು.

ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಧ್ಯೇಯ ವಾಕ್ಯದಡಿಯಲ್ಲಿ ನಡೆದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣಗಾರರಾಗಿ ಪುಷ್ಪರಾಜ್.ಕೆ. ಎನ್ ಎಸ್ ಎಸ್ ಯೋಜನಾಧಿಕಾರಿ, ಎಸ್ ಡಿ ಎಂ ಲಾ ಕಾಲೇಜ್ ಮಂಗಳೂರು ಮಾತನಾಡಿ ಶಿಬಿರಾರ್ಥಿಗಳಾಗಿ ಎನ್ ಎಸ್ ಎಸ್ ಶಿಬಿರದಲ್ಲಿ ಭಾಗವಹಿಸುವುದು ಒಂದು ಪುಣ್ಯದ ಕೆಲಸ. ಎನ್ ಎಸ್ ಎಸ್ ಸ್ವಯಂಸೇವಕರು ರಾಷ್ಟ್ರ ನಿರ್ಮಾಣದ ಕೆಲಸ ಮಾಡ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಡಾ.ವರ್ಗೀಸ್ ಕೈಪನಡ್ಕ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆ ರೇ.ಫಾ.ಮೆಲ್ವಿನ್ ಮ್ಯಾಥ್ಯು OIC, ಪ್ರಾಂಶುಪಾಲರು ಎಸ್.ಬಿ.ಕಾಲೇಜು, ನೆಲ್ಯಾಡಿ, ರೇ.ಫಾ.ಜಿಜನ್ ಅಬ್ರಹಾಂ, ಉಪಪ್ರಾಂಶುಪಾಲರು ಎಸ್.ಬಿ.ಪ್ರ.ದ. ಕಾಲೇಜ್ ನೆಲ್ಯಾಡಿ, ರೇ.ಫಾ.ಜೈಸನ್ ಸೈಮನ್ OIC, ಕೋಶಾಧಿಕಾರಿ, ಬೆಥನಿ ವಿದ್ಯಾಸಂಸ್ಥೆಗಳು ನೂಜಿಬಾಳ್ತಿಲ. ರೇ.ಫಾ.ಸಕರಿಯಾಸ್ ನಂದಿಯಾಟ್ OIC, ಮ್ಯಾನೇಜರ್, ಬೆಥನಿ ವಿದ್ಯಾಸಂಸ್ಥೆಗಳು ನೂಜಿಬಾಳ್ತಿಲ. ರೇ.ಫಾ.ಬಿಜಿಲಿ ತೋಮಸ್ OIC, ಪ್ರಾಂಶುಪಾಲರು, ಬೆಥನಿ ಸಂಯುಕ್ತ ಮಹಾವಿದ್ಯಾಲಯ ನೂಜಿಬಾಳ್ತಿಲ. ಜಾರ್ಜ್ ಟಿ ಎಸ್ ಪ್ರಾಂಶುಪಾಲರು ಬೆಥನಿ ಸಂಯುಕ್ತ ಮಹಾವಿದ್ಯಾಲಯ ನೂಜಿಬಾಳ್ತಿಲ. ಅಭಿಲಾಷ್ ಪಿ.ಕೆ ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ ನೂಜಿಬಾಳ್ತಿಲ. ವಿಶ್ವನಾಥ್ ಎಸ್, ಎನ್ ಎಸ್ ಎಸ್ ಯೋಜನಾಧಿಕಾರಿ ಉಪಸ್ಥಿತರಿದ್ದರು.

ರೇ.ಫಾ.ಜಿಜನ್ ಅಬ್ರಹಾಂ ಸ್ವಾಗತಿಸಿ, ಯೋಜನಾಧಿಕಾರಿ ವಿಶ್ವನಾಥ್ ಎಸ್ ವಂದಿಸಿದರು. ಶಿಬಿರಾರ್ಥಿ ಸ್ವಾತಿಕ ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!