ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಪ್ರತೀ ವರ್ಷ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿರುವ ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಶ್ಲಾಘನೀಯ- ಡಾ. ಕೆ ವಿ ಚಿದಾನಂದ

ಶೇರ್ ಮಾಡಿ

ನೇಸರ ಜೂ.14: ಎನ್ನೆಂಸಿ: ರೆಡ್ ಕ್ರಾಸ್ ಘಟಕದಿಂದ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ.
ರಕ್ತದಾನ ಜೀವ ಉಳಿಸುವ ಸಂಜೀವಿನಿ. ಆ ನಿಟ್ಟಿನಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಪ್ರತೀ ವರ್ಷ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಎನ್ನೆಂಸಿಯ ಯುವ ರೆಡ್ ಕ್ರಾಸ್ ಘಟಕ ಜೀವದಾನದ ಕೆಲಸ ಮಾಡುತ್ತಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ (ರಿ) ನ ಅಧ್ಯಕ್ಷರಾದ ಡಾ.ಕೆ.ವಿ ಚಿದಾನಂದ ಅವರು ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ವಿದ್ಯಾರ್ಥಿ ಸಂಘದ ವತಿಯಿಂದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಕೆವಿಜಿ ರಕ್ತದಾನ ಕೇಂದ್ರದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಕ್ತದಾನ ಮಾಡುವುದು ಎಷ್ಟು ಮಹಾನ್ ಕಾರ್ಯವೋ ರಕ್ತದಾನಿಗಳನ್ನು ಪ್ರೋತ್ಸಾಹಿಸುವುದು ಅಷ್ಟೇ ಮಹಾತ್ಕಾರ್ಯ, ಯುವಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ.ನೀಲಂಬಿಕೈ ನಟರಾಜನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ.ಮಹಂತದೇವರು, ನೆಹರೂ ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಬಾಲಚಂದ್ರ ಗೌಡ ಕೆ, ಕಾಲೇಜಿನ ಪ್ರಾಂಶುಪಾ‌ಲ ರುದ್ರಕುಮಾರ್ ಎಂ ಎಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ, ಕೆವಿಜಿ ಮೆಡಿಕಲ್ ಕಾಲೇಜಿನ ಪೆಥಾಲಜಿ ವಿಭಾಗದ ಪ್ರೊಪೆಸರ್ ಡಾ.ರಾಜೇಶ್ ಗೋಪಿನಾಥ್ ಹಾಗೂ ಕಾಲೇಜಿನ ಇತರ ಸಿಬ್ಬಂದಿಗಳು, ಮೆಡಿಕಲ್ ಕಾಲೇಜಿನ ಅಲೈಡ್ ಹೆಲ್ತ್ ಸೈನ್ಸ್ ನ ಕಛೇರಿ ಅಧೀಕ್ಷಕಿ ಅರ್ಪಿತಾ, ಎನ್ನೆಂಸಿಯ ವಿದ್ಯಾರ್ಥಿ ಸಂಘದ ನಾಯಕ ಭರತ್ ಎಂ ಎಲ್ ಹಾಗೂ ಕಾರ್ಯದರ್ಶಿ ಶ್ರೀಶ್ಯಾಮ್ ಹಾಗೂ ಪದಾಧಿಕಾರಿಗಳು, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಬ್ಲಡ್ ಬ್ಯಾಂಕ್ ಸಿಬ್ಬಂದಿ ವರ್ಗ, ರೆಡ್ ಕ್ರಾಸ್ ಘಟಕ ನಾಯಕರು ಹಾಗೂ ಸದಸ್ಯರು, ರಕ್ತದಾನಿಗಳು ಮೊದಲಾದವರು ಉಪಸ್ಥಿತರಿದ್ದರು.

ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಅನುರಾಧಾ ಕುರುಂಜಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ, ಯುವ ರೆಡ್ ಕ್ರಾಸ್ ಸದಸ್ಯ ಲಿಖಿತ್ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು. ಉಪನ್ಯಾಸಕರಾದ ವಿಷ್ಣು ಪ್ರಶಾಂತ್ ಮತ್ತು ಹರಿಪ್ರಸಾದ್ ಸೇರಿದಂತೆ ರೆಡ್ ಕ್ರಾಸ್, ಎನ್ ಸಿ ಸಿ, ಎನ್ ಎಸ್ ಎಸ್, ರೇಂಜರ್- ರೋವರ್ ಹಾಗೂ ಕಾಲೇಜಿನ ಇತರ ವಿದ್ಯಾರ್ಥಿಗಳು ಸೇರಿ ಸುಮಾರು 20 ಮಂದಿ ರಕ್ತದಾನ ಮಾಡಿದರು ಹಾಗೂ ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಸಂಗ್ರಹಿಸಿದ 183 ಮಂದಿ ರಕ್ತದಾನಿಗಳ ಪಟ್ಟಿ ಯನ್ನು ಅಗತ್ಯ ಬಿದ್ದಾಗ ರಕ್ತದಾನ ಮಾಡಲು ಪ್ರಾಂಶುಪಾಲರು ಡಾ.ಕೆ.ವಿ ಚಿದಾನಂದ ಅವರಿಗೆ ಹಸ್ತಾಂತರಿಸಿದರು. ಕೆ ವಿ ಜಿ ಮೆಡಿಕಲ್ ಕಾಲೇಜಿನ ಬ್ಲಡ್ ಬ್ಯಾಂಕ್ ಇನ್ಚಾರ್ಜ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರದೀಪ್, ಬ್ಲಡ್ ಬ್ಯಾಂಕ್ ನ ಶ್ರೀಮತಿ ಪ್ರಮಿತಾ ಹಾಗೂ ಸಿಬ್ಬಂದಿಗಳು, ಕಾಲೇಜಿನ ರೆಡ್ ಕ್ರಾಸ್ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!