ನೆಲ್ಯಾಡಿ: ಕಾಂಗ್ರೆಸ್ ಪಕ್ಷದ ರಾಮನಗರ ವಾರ್ಡ್ ಸಮಿತಿಯಿಂದ ಉಚಿತ ಪುಸ್ತಕ ವಿತರಣೆ

ಶೇರ್ ಮಾಡಿ

ನೇಸರ ಜೂ.14: ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೆಲ್ಯಾಡಿ ಗ್ರಾಮದ ರಾಮನಗರ ವಾರ್ಡ್ ಸಮಿತಿಯ ವತಿಯಿಂದ 40 ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ರಾಮನಗರದ ಅಮೆತ್ತಿಮಾರು ಗುತ್ತು ಮನೆಯಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿದ ರಾಷ್ಟ್ರೀಯ ಕಾರ್ಮಿಕ ಇಲಾಖೆಯ ಸದಸ್ಯ, ಸುಳ್ಯ ಕ್ಷೇತ್ರದ ಉಸ್ತುವಾರಿ ಕೃಷ್ಣಪ್ಪರವರು ಮಾತನಾಡಿ ಕಾಂಗ್ರೆಸ್ ಪಕ್ಷ ಸೇವೆಯನ್ನೇ ಮುಖ್ಯ ಧ್ಯೇಯವನ್ನಾಗಿಸಿ ಈ ದೇಶದ ಬಡವರ ಹಿಂದುಳಿದವರ, ಕಾರ್ಮಿಕರ, ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಬದುಕು ಕಟ್ಟಿಕೊಟ್ಟ ಪಕ್ಷ. ಎಲ್ಲಾ ವರ್ಗದವರೂ ಶಿಕ್ಷಣವನ್ನು ಪಡೆಯಬೇಕು, ಆ ಮೂಲಕ ಸ್ವಾವಲಂಬನೆಯ ಬದುಕನ್ನು ಬದುಕಬೇಕು ಎನ್ನುವ ಗುರಿಯೊಂದಿಗೆ ಕಾಂಗ್ರೆಸ್ ಪಕ್ಷ ಅವಿರತವಾಗಿ ದುಡಿಯುತ್ತಾ ಇದೆ. ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣಕ್ಕಾಗಿ ಪ್ರೋತ್ಸಾಹವನ್ನು ನೀಡಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಪಕ್ಷದ ಚಿಂತನೆಗಳನ್ನು ಸಾಕಾರಗೊಳಿಸಿದ ರಾಮನಗರ ವಾರ್ಡ್ ಸಮಿತಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜ್ ವಿಭಾಗದ ಆಯ್ದ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು. ಅಧ್ಯಕ್ಷತೆಯನ್ನು ನೆಲ್ಯಾಡಿ ಪಂಚಾಯತ್ ಸಮಿತಿ ಅಧ್ಯಕ್ಷರಾದ ಜೋಸ್ ಕೆ ಜೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯ ಕೆ ಪಿ ತೋಮಸ್, ನೆಲ್ಯಾಡಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಉಷಾ ಅಂಚನ್, ಕಾಂಗ್ರೆಸ್ ಪಕ್ಷದ ಮುಖಂಡ ಸೀತಾರಾಮ ಗೌಡ ಕಾನಮನೆ ಭಾಗವಹಿಸಿದರು. ಕಾರ್ಯಕ್ರಮದ ವ್ಯವಸ್ಥಾಪಕ ಕಡಬ ಬ್ಲಾಕ್ ನ ಸೇವಾದಳದ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕೂಲಿ ಮಾಡಿ ಮೂರು ಮಕ್ಕಳನ್ನು ಓದಿಸುತ್ತಿರುವ ಸೋಮಪ್ಪ ರವರಿಗೆ ಮುಖ್ಯ ಅತಿಥಿಗಳಾದ ಕೃಷ್ಣಪ್ಪನವರು 5000ರೂ ಗಳ ಧನಸಹಾಯದ ಚಕ್ ವೈಯಕ್ತಿಕವಾಗಿ ನೀಡಿದರು. ಪಕ್ಷದ ಕಾರ್ಯಕರ್ತರು, ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೀತಾರಾಮ ಗೌಡ ಕಾನಮನೆ ವಂದಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!