ಜಾತಿಯ ಬಗ್ಗೆ ಅಭಿಮಾನ ಬೇಕು ಆದರೆ ಜಾತಿ ಜಾತಿ ಮಧ್ಯೆ ಪೈಪೋಟಿ ಬೇಡ: ಸಚಿವ ಎಸ್.ಅಂಗಾರ

ಶೇರ್ ಮಾಡಿ

ನೇಸರ ಜೂ.14: ನಮಗೆ ಜಾತಿಯ ಬಗ್ಗೆ ಅಭಿಮಾನ ಬೇಕು ಆದರೆ ಜಾತಿ ಜಾತಿ ಮಧ್ಯೆ ಪೈಪೋಟಿ ಬೇಡ, ನೀತಿವಂತರಾಗಿ ಬಾಳಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಈ ನಿಟ್ಟಿನಲ್ಲಿ ಜಾತಿ ಸಂಘಟನೆಗಳು ಶ್ರಮಿಸಬೇಕು ಎಂದು ಬಂದರು ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ಅವರು ಮಂಗಳವಾರ ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ದ.ಕ ಜಿಲ್ಲಾ ಸವಿತಾ ಸಮಾಜ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನೂತನ ಕಡಬ ತಾಲೂಕು ಸವಿತಾ ಸಮಾಜದ ಘಟಕದ ಪದಗ್ರಹಣ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಯಾರೂ ಕೂಡಾ ತಮ್ಮ ಜಾತಿಯಿಂದ ಸಣ್ಣವರಾಗುವುದಿಲ್ಲ, ಅವರ ಕಠಿಣ ಪರಿಶ್ರಮ, ಸಾಧನೆಗಳಿಂದ ನೀತಿಯಂತರಾಗಿ ಬಾಳಿದಾಗ ಸಮಾಜದಲ್ಲಿ ಮೇಲ್ಮಟ್ಟಕ್ಕೆ ಏರಬಹುದು, ನಾವು ಜಾತಿಯಿಂದ ಅವಮಾನ ಪಡುವಂತಾಗದಂತೆ ನಮ್ಮ ವರ್ತನೆ ಇರಬೇಕು, ಜೀವನದಲ್ಲಿ ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿ ಸಾಧಿಸಿ ಜಾತಿ ಅಂತಸ್ತನ್ನು ಮೆಟ್ಟಿ ನಿಲ್ಲಬೇಕು ಎಂದು ಹೇಳಿದ ಸಚಿವರು. ಜಾತಿ ಸಂಘಟನೆಗಳು ಸಮಾಜದಲ್ಲಿ ಒಗ್ಗಟ್ಟು ಮೂಡಿಸಿ ಸೌಹರ್ದತೆಗೆ ಆದ್ಯತೆ ನೀಡಿ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.

ನೂತನ ಘಟಕವನ್ನು ಉದ್ಘಾಟಿಸಿದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಮಾತನಾಡಿ ಯಾವುದೇ ಸಂಘಟನೆಗಳು ಗಟ್ಟಿಯಗಿ ಬೆಳೆದು ಹಿಂದೂ ಸಮಾಜಕ್ಕೆ ಪೂರಕವಾಗಿರಬೇಕು, ಜಾತಿ ದ್ವೇಷಕ್ಕೆ ಕಾರಣವಾಗದೆ ನಮ್ಮೆಲ್ಲರ ಗುರಿ ಹಿಂದುತ್ವದಕಡೆಗೆ ಇರಬೇಕು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಸಿದ್ದ ಪುತ್ತೂರು ಎ.ಪಿ.ಎಂಸಿ ನಿರ್ದೇಶಕಿ ಪುಲಸ್ಯ ರೈ ಮಾತನಾಡಿ ಜಾತಿ ಪದ್ದತಿ ಸಮಾಜದ ಸುಸ್ತಿತಿಗೆ ತಂದ ಪದ್ದತಿಯಾಗಿದೆ. ಜಾತಿ ಸಂಘಟನೆಗಳು ತಮ್ಮ ಸಮಾಜದಲ್ಲಿನ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು ಸದೃಢ ಸಮಾಜಕ್ಕೆ ಪ್ರೇರಣೆಯಾಗಬೇಕು, ಸವಿತಾ ಸಮಾಜದ ಯುವ ಜನತೆ ಹಿಂದೂ ಧರ್ಮದ ರಕ್ಷಣೆಗೆ ಬದುಕುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ದ.ಕ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸವಿತಾ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್, ಪುತ್ತೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ವೆಂಕಟೇಶ್ ಜಿ.ಬಿ, ಸುಳ್ಯ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಗುರುರಾಜ ಅಜ್ಜಾವರ, ಸುಳ್ಯ ಬಾರ್ಬರ್ ಅಸೋಸಿಯೇಶನ್ ಅಧ್ಯಕ್ಷ ಪದ್ಮನಾಭ ಎಸ್ ಅತಿಥಿಗಳಾಗಿ ಮಾತನಾಡಿದರು. ದ.ಕ ಜಿಲ್ಲಾ ಸವಿತಾ ಸಮಾಜದ ಕಾರ್ಯದರ್ಶಿ ವಸಂತ ಬೊಳ್ಳೂರು, ಕೋಶಾಧಿಕಾರಿ ಭುಜಂಗ ಸಾಲ್ಯಾನ್, ಕಡಬ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ವಸಂತ ಮೂರಾಜೆ, ಪ್ರಧಾನ ಕಾರ್ಯದರ್ಶಿ ನವೀನ್ ನೆಲ್ಯಾಡಿ, ಕೋಶಾಧಿಕಾರಿ ಗಣೇಶ್ ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಪ್ರತಿಭಾವಂತ ವಿದ್ಯಾರ್ಥಿನಿ ವರ್ಷಾ, ರಾಜ್ಯ ಮಟ್ಟದ ಕ್ರೀಡಾಪಟು ರಂಜಿನಿ, ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕಿ ಶಾಲಿನಿ ಕೆ ಅವರುಗಳನ್ನು ಸನ್ಮಾನಿಸಲಾಯಿತು.
ಕಡಬ ತಾಲೂಕು
ಸವಿತಾ ಸಮಾಜದ ಗೌರವಾಧ್ಯಕ್ಷ ಪ್ರಕಾಶ್ ಎನ್.ಕೆ ಸ್ವಾಗತಿಸಿದರು. ಅಜಿತ್ ಎಸ್ ವಂದಿಸಿದರು. ಪತ್ರಕರ್ತ ನಾಗರಾಜ್ ಎನ್.ಕೆ ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!