ಪಟ್ರಮೆ: ದೇಶಾದ್ಯಂತ ಇಂದು ಯೋಗ; ಈ ಶಾಲೆಗೆ ನೋವಿನ ಯೋಗ..!!!

ಶೇರ್ ಮಾಡಿ

ಪುಟ್ಟ ಮಕ್ಕಳ ಶಿಕ್ಷಣದಲ್ಲಿ ಬೇಜವಾಬ್ದಾರಿ, ನಿರ್ಲಕ್ಷ್ಯ ತೋರದೆ ಕಾಳಜಿಯಿಂದ ತಕ್ಷಣ ಸಮಸ್ಯೆ ಇತ್ಯರ್ಥಕ್ಕೆ ಕ್ಷೇತ್ರ ಶಿಕ್ಷಣ ಇಲಾಖೆ ಮುಂದಾಗಬೇಕಿದೆ.

ಶಿಕ್ಷಕರನ್ನು ಒದಗಿಸುವವರೆಗೂ ನಾವು ಮಕ್ಕಳನ್ನು ಕಳುಹಿಸುವುದಿಲ್ಲ ಎಂದ ಶಾಲಾ ಪೋಷಕರು.

ಪೋಷಕರ ಪರವಾಗಿ SDMC ಅಧ್ಯಕ್ಷರಾದ ಧನಂಜಯ ಗೌಡರು ಕ್ಷೇತ್ರ ಶಿಕ್ಷಣಾಧಿಕಾರಿ ಯವರಲ್ಲಿ ಈ ಬಗ್ಗೆ ಆತಂಕ ವ್ಯಕ್ತಡಿಸಿದ್ದರು.

ನಮ್ಮ ಮಕ್ಕಳು ಪಾಪ ಮಾಡಿ ಹುಟ್ಟಿದವರೇ? ಯಾಕೆ ಹೀಗೆ ನಮ್ಮ ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬುದು ಪೋಷಕರ ನೋವಿನ ಪ್ರಶ್ನೆಗಳಾಗಿವೆ.

ನೇಸರ ಜೂ.21: ಮೊದಲೇ ಶಿಕ್ಷಕರ ಕೊರತೆ ಎದುರಿಸುತ್ತಿರುವ ತಮ್ಮಶಾಲೆಯ ಇದ್ದ ಮೂವರು ಶಿಕ್ಷಕರಲ್ಲೇ ಒಬ್ಬರನ್ನು ಬೇರೆ ಶಾಲೆಗೆ ನಿಯೋಜಿಸುತ್ತಿರುವ ಇಲಾಖೆಯ ಕ್ರಮಕ್ಕೆ ನೋವಿನ ಪ್ರತಿರೋಧ ವ್ಯಕ್ತಪಡಿಸುವ ಸಲುವಾಗಿ ಇಂದು ಬೆಳ್ತಂಗಡಿ ತಾಲೂಕಿನ ಪಟ್ರಮೆಯ ಸ.ಉ.ಹಿ. ಪ್ರಾಥಮಿಕ ಶಾಲೆಯ ಪೋಷಕರು ಶಾಲೆಗೆ ಮಕ್ಕಳನ್ನೇ ಕಳುಹಿಸಲಿಲ್ಲ. 84 ಮಕ್ಕಳ ಪೈಕಿ 70 ಕ್ಕೂ ಹೆಚ್ಚು ಮಕ್ಕಳು ಗೈರಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಕೊಠಡಿ ಸಮಸ್ಯೆ, ಶಿಕ್ಷಕರ ಕೊರತೆ ಹೀಗೆ ಅನೇಕ ಸಂಕಷ್ಟಗಳಿಂದ ಮುಳುಗಿದ್ದ ಈ ಶಾಲೆ, ಊರವರ ಸತತ ಪ್ರಯತ್ನಗಳಿಂದ ಕೊಠಡಿ ಕೊರತೆ ನೀಗಿಸಿಕೊಂಡಿತ್ತು. ಸರಕಾರದ ಶಿಕ್ಷಕರೂ 5 ಜನ ಇದ್ದರು. ಆದರೆ ಇದೀಗ ಮತ್ತೆ ಶಿಕ್ಚಕರ ಕೊರತೆ ಸಮಸ್ಯೆಗೆ ಸಿಲುಕಿಕೊಂಡಿದೆ. ಸುಮಾರು 84 ಮಕ್ಕಳಿರುವ, ಎಂಟು ತರಗತಿಗಳಿರುವ ಇಲ್ಲಿ ಈಗ ಸರಕಾರದ ಶಿಕ್ಷಕರು ಮುಖ್ಯ ಶಿಕ್ಷಕರೂ ಸೇರಿದಂತೆ ಮೂರು ಜನ ಮಾತ್ರ. ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಮುಖ್ಯ ಶಿಕ್ಷಕರಿಗೆ ಕಚೇರಿ ಕೆಲಸಗಳೇ ಸಾಕಷ್ಟಿರುತ್ತವೆ. ಈ ಹಿಂದೆ ಇದ್ದ ಇಬ್ಬರು ಶಿಕ್ಷಕರಿಗೆ ಭಡ್ತಿಯ ವರ್ಗಾವಣೆ ಆಗಿದೆ.
ಈ ಸಮಸ್ಯೆಯ ನಡುವೆಯೇ ಇದೀಗ ಒಬ್ಬರು ಶಿಕ್ಷಕರನ್ನು ಸಮೀಪದ ಬದಿಪಲ್ಕೆ ಶಾಲೆಗೆ ಕಳೆದ ಎರಡು ವಾರಗಳಿಂದ ನಿಯೋಜಿಸಿದ್ದಾರೆ. ಅಲ್ಲಿ 7 ಮಕ್ಕಳಿದ್ದಾರೆ. ಅಲ್ಲಿನ ಏಕಮಾತ್ರ ಶಿಕ್ಷಕರು ಅನಾರೋಗ್ಯ ನಿಮಿತ್ತ ಈಗ ರಜೆಯಲ್ಲಿದ್ದಾರೆ, ಕರ್ತವ್ಯಕ್ಕೆ ಬಂದರೂ ಬರುವ ಜುಲೈ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಹೀಗಾಗಿ ಇಲಾಖೆಯು ವರ್ಷ ಇಡೀ ಅಲ್ಲಿಗೆ ಅನಾರು ಶಾಲೆಯಿಂದಲೇ ನಿಯೋಜಿಸುವ ಸಂಭವ ಇದೆ.
ಬದಿಪಲ್ಕೆ ಶಾಲೆಗೆ ಬೇರೆಯೇ ಖಾಯಂ ಶಿಕ್ಷಕರನ್ನು ಕೊಡಿ, ನಮ್ಮ ಶಾಲೆಯಿಂದ ನಿಯೋಜಿಸಿದರೆ ಈ ಶಾಲಾ ಮಕ್ಕಳಿಗೂ ಸಮಸ್ಯೆ ಆಗುತ್ತದೆ ಎಂದು ಪೋಷಕರು ಹೇಳುತ್ತಿದ್ದಾರೆ. ಕಳೆದ ವಾರ ಪೋಷಕರ ಪರವಾಗಿ SDMC ಅಧ್ಯಕ್ಷರಾದ ಧನಂಜಯ ಗೌಡರು ಕ್ಷೇತ್ರ ಶಿಕ್ಷಣಾಧಿಕಾರಿ ಯವರಲ್ಲಿ ಈ ಬಗ್ಗೆ ಆತಂಕ ವ್ಯಕ್ತಡಿಸಿದ್ದರಂತೆ. ಆಗ “ಇನ್ನೂ ಒಂದು ವಾರ ಸಹಕರಿಸಿ, ಜೂನ್ 20 ನೇ ತಾರೀಕಿನಿಂದ ಬೇರೆ ವ್ಯವಸ್ಥೆ ಮಾಡುತ್ತೇವೆ” ಎಂದು ಭರವಸೆ ನೀಡಿದ್ದರಂತೆ. ಆದರೆ ಇದೀಗ ಈ ವಾರವೂ ನಿಯೋಜನೆ ಮುಂದುವರೆಸುತ್ತಿದ್ದಾರೆ ಎಂದು SDMC ಅಧ್ಯಕ್ಷರು ನೋವು ತೋಡಿಕೊಂಡಿದ್ದಾರೆ.
8 ತರಗತಿಗಳಿಗೆ ಇಬ್ಬರು ಶಿಕ್ಷಕರಿದ್ದರೆ ಶಾಲೆ ಹೇಗೆ ನಡೆಸೋದೂ, ಮಕ್ಕಳ ನಡುವೆ ಮಕ್ಕಳಾಟಿಗೆಯ ಜಗಳಗಳಾದರೆ ನೋಡಿಕೊಳ್ಳೋರು ಯಾರೂ? ಕಳೆದ ವಾರವಷ್ಟೇ ಒಬ್ಬಳು ವಿದ್ಯಾರ್ಥಿನಿಗೆ ಹೀಗೆ ಸಮಸ್ಯೆ ಆಗಿದೆ. ಇದಕ್ಕೆ ಯಾರು ಹೊಣೇ? ನಮಗೆ ಕೊರತೆ ಇರುವ ಇಬ್ಬರು ಶಿಕ್ಷಕರನ್ನು ಒದಗಿಸಿ ಅಂತ ನಾವು ಕೇಳುತ್ತಿದ್ದರೆ, ಇಲಾಖೆಯು ಇದ್ದ ಶಿಕ್ಷಕರನ್ನೇ ಕಡಿತಗೊಳಿಸುತ್ತಿರುವುದು ಸರಿಯೇ? ನಮ್ಮ ಮಕ್ಕಳು ಪಾಪ ಮಾಡಿ ಹುಟ್ಟಿದವರೇ? ಯಾಕೆ ಹೀಗೆ ನಮ್ಮ ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬುದು ಪೋಷಕರ ನೋವಿನ ಪ್ರಶ್ನೆಗಳಾಗಿವೆ.

ಇದೀಗ ಈ ಸಮಸ್ಯೆಗೆ ಇಲಾಖೆ ಸ್ಪಂದಿಸದಿರುವುದರಿಂದ, ಶಾಲೆಯ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸುವುದನ್ನು ರದ್ದುಮಾಡುವವರೆಗೂ ಅಥವಾ ನೂತನ ಶಿಕ್ಷಕರನ್ನು ಒದಗಿಸುವವರೆಗೂ ನಾವು ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಶಾಲಾ ಪೋಷಕರು ಹೇಳುತ್ತಿದ್ದಾರೆ.
ಈ ಬಗ್ಗೆ ವಿಚಾರಿಸಲು ಬೆಳ್ತಂಗಡಿ ಕ್ಷೇತ್ರದ ಶಿಕ್ಷಣಾಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಸಂಪರ್ಕಕ್ಕೆ ಸಿಗಲಿಲ್ಲ.
ಒಟ್ಟಿನಲ್ಲಿ ಸರಕಾರ ಶಿಕ್ಷಕರ ಕೊರತೆ ನೀಗಲು ತಕ್ಷಣ ಕ್ರಮಕೈಗೊಳ್ಳಬೇಕು, ಶಿಕ್ಷಕರ ಕೊರತೆ ಇರುವ ಶಾಲೆಯಿಂದಲೇ ಬೇರೆ ಶಾಲೆಗೆ ನಿಯೋಜಿಸದೆ ಬದಲಿ ವ್ಯವಸ್ಥೆಯನ್ನು ಇಲಾಖೆ ತಕ್ಷಣ ಕೈಗೊಳ್ಳಬೇಕಿದೆ. ಪುಟ್ಟ ಮಕ್ಕಳ ಶಿಕ್ಷಣದಲ್ಲಿ ಬೇಜವಾಬ್ದಾರಿ, ನಿರ್ಲಕ್ಷ್ಯ ತೋರದೆ ಕಾಳಜಿಯಿಂದ ತಕ್ಷಣ ಸಮಸ್ಯೆ ಇತ್ಯರ್ಥಕ್ಕೆ ಕ್ಷೇತ್ರ ಶಿಕ್ಷಣ ಇಲಾಖೆ ಮುಂದಾಗಬೇಕಿದೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!