ನೇಸರ ಜೂ.20: ಗೊಲ್ಲ(ಯಾದವ) ಸಮುದಾಯದ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿದಾಗ ನಾವು ದುರ್ಬಲರಲ್ಲ, ಅತ್ಯಂತ ಶ್ರೇಷ್ಠವಾದ, ಇಡೀ ವಿಶ್ವಕ್ಕೆ ಅತ್ಯಮೂಲ್ಯವಾದ ಗ್ರಂಥ ಭಗವದ್ಗೀತೆಯನ್ನು ನೀಡಿದ ಸಮುದಾಯ ನಮ್ಮದು. ಇದರಲ್ಲಿ ಒಬ್ಬ ವ್ಯಕ್ತಿಯ ಬದುಕಿಗೆ ಬೇಡ ಎನ್ನುವುದು ಯಾವುದು ಸಿಗುವುದಿಲ್ಲ. ನಾವುಗಳು ಸಾಮಾಜಿಕವಾಗಿ ಹಿಂದುಳಿದಿರ ಬಹುದು. ನಮ್ಮಲ್ಲಿ ಛಲ ಬಂದಾಗ ನಾವುಗಳು ಅದನ್ನು ಮಕ್ಕಳಲ್ಲಿ ಬೀಜ ಬಿತ್ತಬೇಕು. ಮಕ್ಕಳನ್ನು ಆಸ್ತಿವಂತರನ್ನಾಗಿ ಮಾಡಿ, ಅವರಿಗೆ ಒಳ್ಳೆಯ ದಾರಿ ತೋರಿಸಬೇಕು. ನಾವುಗಳು ಹೋಗುವ ದಾರಿ ಬಹಳಷ್ಟು ಮುಖ್ಯ. ನಮಗೆ ಬೇಕಾಗಿರುವುದು ಒಳ್ಳೆಯ ದಾರಿ. ಒಡೆದ ಮನಸ್ಸುಗಳಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ. ನಮ್ಮ ಇಡಿ ಸಮುದಾಯದಲ್ಲಿ ಒಗ್ಗಟ್ಟ ಇರಬೇಕು, ಎಲ್ಲರಲ್ಲಿ ಒಳ್ಳೆಯ ಮನೋಭಾವ ಬರಬೇಕು. “ನಾವು ಬೆಳೆಯುತ್ತೇವೆ, ನೀವು ಬೆಳೆಯಬೇಕು” ಎಂಬ ಭಾವನೆ ಇರಬೇಕು. ನಾವುಗಳು ಜ್ಞಾನಕ್ಕೆ, ಆದರ್ಶಕ್ಕೆ, ನೈತಿಕತೆಗೆ, ಆಸ್ತಿವಂತರು ಆಗಿರಬೇಕು. ಗೊಲ್ಲ(ಯಾದವ) ಸಮಾಜದವರಲ್ಲಿ ಹಿಂದುಳಿದ ಮನೋಭಾವ ಬರಬಾರದು. ಎಲ್ಲರಿಗೂ ಒಳ್ಳೆಯ ಶಿಕ್ಷಣ ಸಿಗುವಂತಾಗಬೇಕು ಎಂದು ಜೂ.19ರಂದು ಬಾಲಂಭಟ್ಟರ ಹಾಲ್ ಮಂಗಳೂರಿನಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ(ಯಾದವ) ಸಮಾಜಸೇವಾ(ರಿ.) ನ 15ನೇ ವಾರ್ಷಿಕ ಮಹಾಸಭೆಯನ್ನು ಡಾ|ಕುಮಾರ ಐಎಎಸ್, CEO ಜಿಲ್ಲಾ ಪಂಚಾಯತ್ ಮಂಗಳೂರು ದೀಪ ಪ್ರಜ್ವಲನಗೊಳಿಸಿ ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಅಧ್ಯಕ್ಷರು ಕರ್ನಾಟಕ ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ನಿಗಮ ಮಾತನಾಡಿ ಒಟ್ಟು 46 ಜಾತಿಯನ್ನು ಒಳಗೊಂಡ ಹಿಂದುಳಿದ ಪ್ರವರ್ಗ 1ಕ್ಕೆ ಒಳಪಟ್ಟಿದೆ ಎಂದರು ಹಾಗೂ ಸರ್ಕಾರದಿಂದ ಸಿಗುವಂತಹ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಅಧ್ಯಕ್ಷರು ಕರ್ನಾಟಕ ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ನಿಗಮ ಮಾತನಾಡಿ ಒಟ್ಟು 46 ಜಾತಿಯನ್ನು ಒಳಗೊಂಡ ಹಿಂದುಳಿದ ಪ್ರವರ್ಗ 1ಕ್ಕೆ ಒಳಪಟ್ಟಿದೆ ಎಂದರು ಹಾಗೂ ಸರ್ಕಾರದಿಂದ ಸಿಗುವಂತಹ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು.
ಡಾ.ದಿನೇಶ್ ಕುಮಾರ್.ವೈ ಕೆ., IFS, ಉಪ ಅರಣ್ಯ ಸಂರಕ್ಷಣಾಧಿಕಾರಿ, ಪ್ರಾದೇಶಿಕ ಅರಣ್ಯ ವಿಭಾಗ, ಮಂಗಳೂರು ರವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ನಮ್ಮ ಕುಟುಂಬ ಸಣ್ಣದಾದರು ನಮಗೆ ದೃಢತೆ ಇರಬೇಕು. ಮಕ್ಕಳಲ್ಲಿ ನಾವು ಕನಸು ಕಾಣಬೇಕು. ಆರ್ಥಿಕವಾಗಿ ನಮಗೆ ಸಮಸ್ಯೆಗಳಿರಬಹುದು, ಆದರೆ ಶಿಕ್ಷಣಕ್ಕೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ಸಮಾಜದಲ್ಲಿ ಒಗ್ಗಟ್ಟು ಕಡಿಮೆಯಿದೆ. ಎಲ್ಲರೂ ಒಗ್ಗಟ್ಟಿನಿಂದ ಸಂಘಟಿತರಾಗಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ ಆರ್ ಕುಮಾರಸ್ವಾಮಿ, ಅಧ್ಯಕ್ಷರು, ದ.ಕ ಜಿಲ್ಲಾ ಗೊಲ್ಲ(ಯಾದವ) ಸಮಾಜ ಸೇವಾ ಸಂಘ(ರಿ). ಮಂಗಳೂರು ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ ದ.ಕ ಜಿಲ್ಲಾ ಸಲಹಾ ಸಮಿತಿ ಸದಸ್ಯ, ಸಂಘದ ಕಾರ್ಯಾಧ್ಯಕ್ಷರಾದ ಅನಂತಕೃಷ್ಣ ವಿ, ಕಾರ್ಯದರ್ಶಿ ಕೃಷ್ಣಯ್ಯ, ಕೋಶಾಧಿಕಾರಿ ಯು.ಅನಿಲ್ ಕುಮಾರ್ ಉಪಸ್ಥಿತರಿದ್ದರು
ಸನ್ಮಾನ :
ವೈದ್ಯ ರತ್ನ ಪ್ರಶಸ್ತಿ ಪುರಸ್ಕೃತರಾದ ವಾಸುದೇವ ಇಡ್ಯಾಡಿ. ಡಾಕ್ಟರೇಟ್ ಪದವಿಯನ್ನು ಪಡೆದ ಉಪನ್ಯಾಸಕಿ ಡಾ.ಸುಧಾ ಕುಮಾರಿ, ಮಂಗಳೂರು. ಪ್ರಗತಿಪರ ಕೃಷಿಕ ಮಧುಸೂದನ ರಾವ್, ಕಡೆಶಿವಾಲಯ ಇವರುಗಳಿಗೆ “ಯದುಕುಲ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗತಕಾಲದ ವರದಿಯನ್ನು ಕಾರ್ಯದರ್ಶಿ ಕೃಷ್ಣಯ್ಯ ಸಭೆಗೆ ಮಂಡಿಸಿದರು. ಕೋಶಾಧಿಕಾರಿ ಯು.ಅನಿಲ್ ಕುಮಾರ್, ಆಯವ್ಯಯದ ವರದಿಯನ್ನು ಸಭೆಗೆ ನೀಡಿದರು. ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕುಮಾರಿ ಶೋಭಿತಾ ಪ್ರಾರ್ಥಿಸಿದರು. ಸಂಘದ ಗೌರವಾಧ್ಯಕ್ಷರಾದ ವಾಸುದೇವ ಇಡ್ಯಾಡಿ ಸ್ವಾಗತಿಸಿ. ಸನ್ಮಾನ ಪತ್ರವನ್ನು ಶ್ರೀಮತಿ ವೀಣಾ ಕುಮಾರಿ ವಾಚಿಸಿದರು. ಕಾರ್ಯದರ್ಶಿ ಕೃಷ್ಣಯ್ಯ ವಂದಿಸಿದರು. ಡಾ.ಸುಧಾ ಕುಮಾರಿ ನಿರೂಪಿಸಿದರು.