ಮಂಗಳೂರು ನಗರದಲ್ಲಿ ವಿದ್ಯಾರ್ಥಿಗಳಿಂದ ಸಾಹಿತ್ಯ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ – ಡಾ.ಎಂ.ಪಿ.ಶ್ರೀನಾಥ್, ಕಸಾಪ ಜಿಲ್ಲಾಧ್ಯಕ್ಷ
ಓದುವ ಬರೆಯುವ ಹವ್ಯಾಸ ಇಂದಿನ ದಿನಗಳಲ್ಲಿ ಕುಂಠಿತ ಗೊಂಡಿರುವ ಕಾರಣ ಕೃತಿಗಳ ಬಗ್ಗೆ ಚರ್ಚೆ, ಅಧ್ಯಯನ ಶಿಬಿರ ನಡೆಯಬೇಕಾದ ಅಗತ್ಯವಿದೆ – ಪ್ರೊ.ಎನ್.ಜಿ.ಪಟವರ್ಧನ್, ಹಿರಿಯ ಸಾಹಿತಿ.
ಧರ್ಮಸ್ಥಳದ ಡಾ.ಡಿ.ಹೆಗ್ಗಡೆಯವರ ಪುಸ್ತಕಗಳ ಬಗೆಗಿನ ಗ್ರಹಣಶಕ್ತಿ ವಿಶಿಷ್ಟವಾದುದು – ಪ.ರಾಮಕೃಷ್ಣ ಶಾಸ್ತ್ರೀ, ಹಿರಿಯ ಸಾಹಿತಿ
ನೇಸರ ಜೂ.22: ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ದ ಕ ಜಿಲ್ಲಾ ಕ.ಸಾ.ಪ.ಬೆಳ್ತಂಗಡಿ ತಾಲೂಕು ಘಟಕ ಹಾಗೂ ಉಜಿರೆ ಶ್ರಿ ಧ.ಮಂ.ಸ್ವಾಯತ್ತ ಮಹಾವಿದ್ಯಾಲಯದ ಕನ್ನಡ ಸಂಘದ ಆಶ್ರಯದಲ್ಲಿ ಸಮ್ಯಗ್ದರ್ಶನ ಸಭಾ ಭವನದಲ್ಲಿ ಡಾ.ಟಿ.ಎನ್.ತುಳುಪುಳೆ ದತ್ತಿನಿಧಿ ಉಪನ್ಯಾಸ, ಸಾಧಕರಿಗೆ ಸನ್ಮಾನ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ಜೂ.21ರಂದು ನಡೆಯಿತು.
ಮಂಗಳೂರು ನಗರದಲ್ಲಿ ವಿದ್ಯಾರ್ಥಿಗಳಿಂದ ಸಾಹಿತ್ಯ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹೇಳಿದರು.
ತಾಲೂಕು ಘಟಕ ಅಧ್ಯಕ್ಷ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಪಿ.ಎನ್. ಉದಯ ಚಂದ್ರ, ಹಿರಿಯ ಸಾಹಿತಿ ಪ್ರೊ.ಎನ್.ಜಿ.ಪಟವರ್ಧನ್ ಅವರ “ಕಿರಿದರೊಳ್ ಪಿರಿದರ್ಥ” ಮತ್ತು “ಅಮೃತ ಬಳ್ಳಿಯ ಸನ್ನಿಧಿ” ಹಾಗೂ ಇತರ ಪ್ರಬಂಧಗಳು, ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ಓದುವ ಬರೆಯುವ ಹವ್ಯಾಸ ಇಂದಿನ ದಿನಗಳಲ್ಲಿ ಕುಂಠಿತ ಗೊಂಡಿರುವ ಕಾರಣ ಕೃತಿಗಳ ಬಗ್ಗೆ ಚರ್ಚೆ, ಅಧ್ಯಯನ ಶಿಬಿರ ನಡೆಯಬೇಕಾದ ಅಗತ್ಯವಿದೆ ಎಂದರು.
ಡಾ.ಟಿ.ಎನ್.ತುಳುಪುಳೆ ದತ್ತಿನಿಧಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರೀ, ಧರ್ಮಸ್ಥಳದ ಡಾ.ಡಿ.ಹೆಗ್ಗಡೆಯವರ ಪುಸ್ತಕಗಳ ಬಗೆಗಿನ ಗ್ರಹಣಶಕ್ತಿ ವಿಶಿಷ್ಟವಾದುದು, ಡಾ.ಬಿ.ಯಶೋವರ್ಮರ ಪುಸ್ತಕ ಪ್ರೀತಿ, ಸಂಗ್ರಹ ವ್ಯವಸ್ಥೆ, ಸಾಹಿತಿಗಳ ಬಗ್ಗೆ ಹೊಂದಿದ್ದ ಗೌರವ ಎಲ್ಲರಿಗೂ ಮಾದರಿ ಎಂದು ಹೇಳಿದರು.
ದತ್ತಿನಿಧಿಯ ಡಾ.ಎಂ.ಎನ್.ತುಳುಪುಳೆ, ಸಾಹಿತಿ ಪ್ರೊ.ಎನ್.ಜಿ. ಪಟವರ್ಧನ್ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ಸಂಪತ್ ಕುಮಾರ್ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕಿ ಕವಿತಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಕಸಾಪ ತಾಲೂಕು ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ಕನ್ನಡ ಪ್ರಾಧ್ಯಾಪಕ ದಿವಾ ಕೊಕ್ಕಡ ಕಾರ್ಯಕ್ರಮ ಸಂಯೋಜಿಸಿದ್ದರು.