ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ

ಶೇರ್ ಮಾಡಿ

 “ಯೋಗವು ಕೇವಲ ಒಂದು ದಿನದ ಸಂಭ್ರಮ ಆಚರಣೆಗೆ ಸೀಮಿತವಾಗಬಾರದು. ಅದು ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸುಂದರ ಭವಿಷ್ಯ ನಮ್ಮದಾಗುವುದು” –  ವಿದ್ಯಾಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗೀಸ್ 

ನೇಸರ ಜೂ.21: ಸಂತ ಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಸೀನಿಯರ್ ಜೇಸಿ ಚೇಂಬರ್ ಇಂಟರ್ ನ್ಯಾಷನಲ್ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ಇಂದು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿಯ ಅಧ್ಯಕ್ಷರು, ನಿವೃತ್ತ ಮುಖ್ಯ ಗುರುಗಳಾದ ಆರ್. ವೆಂಕಟ್ರಮಣ್ ರವರು ಮಾತನಾಡಿ “ಯೋಗವು ಮನೋನಿಗ್ರಹಕ್ಕೆ ಸಹಕಾರಿ. ಯೋಗದಿಂದ ಮಾನವೀಯ ಮೌಲ್ಯಗಳು ಬೆಳೆದು, ಸಾಮರಸ್ಯದ ಬದುಕು ನಮ್ಮದಾಗಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗೀಸ್ ರವರು ಮಾತನಾಡಿ “ಯೋಗವು ಕೇವಲ ಒಂದು ದಿನದ ಸಂಭ್ರಮ ಆಚರಣೆಗೆ ಸೀಮಿತವಾಗಬಾರದು. ಅದು ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸುಂದರ ಭವಿಷ್ಯ ನಮ್ಮದಾಗುವುದು” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜ್ ವಿಭಾಗದ ಪ್ರಾಚಾರ್ಯರಾದ ಏಲಿಯಾಸ್ ಎಂ.ಕೆ ರವರು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಮಹಮ್ಮದ್ ಹಾರೀಸ್ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿನಿಯರು ಯೋಗ ಗೀತೆ ಹಾಡಿದರು ಹಾಗೂ ಯೋಗ ಸಂಕಲ್ಪವನ್ನು ಮಾಡಲಾಯಿತು.

ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಆಂಗ್ಲಮಾಧ್ಯಮ ವಿಭಾಗದ ಮುಖ್ಯ ಗುರುಗಳಾದ ಹರಿಪ್ರಸಾದ್ ಕೆ ಸ್ವಾಗತಿಸಿದರು. ಶಿಕ್ಷಕ ಕರುಣಾಕರ ಕಾರ್ಯಕ್ರಮ ನಿರೂಪಿಸಿ, ಕನ್ನಡ ಮಾಧ್ಯಮ ವಿಭಾಗದ ಮುಖ್ಯ ಗುರುಗಳಾದ ತೋಮಸ್ ಎಂ.ಐ ರವರು ವಂದಿಸಿದರು. ಕಾಲೇಜ್ ವಿಭಾಗದ ವಿಶ್ವನಾಥ್ ಶೆಟ್ಟಿ ಕೆ, ಕನ್ನಡ ಮಾಧ್ಯಮ ವಿಭಾಗದ ವರ್ಗೀಸ್ ಫ್ರಾನ್ಸಿಸ್ ಹಾಗೂ ಆಂಗ್ಲ ಮಾಧ್ಯಮ ವಿಭಾಗದ ರಾಬಿಯರವರು ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!