ನೇಸರ ಜೂ.23: ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ(ಯಾದವ) ಸಮಾಜ ಸೇವಾ ಸಂಘ(ರಿ) ದ 15ನೇ ವಾರ್ಷಿಕ ಮಹಾಸಭೆಯು ಜೂ19 ರಂದು ಬಾಲಂಭಟ್ಟರ ಹಾಲ್ ಮಂಗಳೂರುನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಸಂಘಕ್ಕೆ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪ್ರಮೋದ್ ಕುಮಾರ್ ಉಳ್ಳಾಲ. ಅಧ್ಯಕ್ಷರಾಗಿ ಕುಮಾರಸ್ವಾಮಿ ಟಿ.ಆರ್. ಉಪಾಧ್ಯಕ್ಷರಾಗಿ ವಿಜಯಕುಮಾರ್ ಮೂಡಬಿದ್ರೆ. ರಾಧಾಕೃಷ್ಣ ಸುಳ್ಯ. ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ ಸಿಎಚ್., ಕೊಕ್ಕಡ. ಜೊತೆ ಕಾರ್ಯದರ್ಶಿ ಶುಭಕರ ಉಳ್ಳಾಲ. ಕೋಶಾಧಿಕಾರಿಯಾಗಿ ಸುಧಾಕರ.ಯು.,ತೊಕ್ಕೊಟ್ಟು. ಮಹಿಳಾ ಅಧ್ಯಕ್ಷರಾಗಿ ಡಾ.ಸುಧಾ ಕುಮಾರಿ. ಯುವ ಘಟಕದ ಅಧ್ಯಕ್ಷರಾಗಿ ಪ್ರತೀಶ್ ಅಜ್ಜಿಬೆಟ್ಟು ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.