ನೇಸರ ಜೂ.23: ರಾಜ್ಯ ಹೆದ್ದಾರಿ 37ರ ಕೊಕ್ಕಡ ಸಮೀಪದ ಕಾಪಿನ ಬಾಗಿಲಿನ ಪರಕೆ ಎಂಬಲ್ಲಿ ತಡೆಗೋಡೆ ಇಲ್ಲದೇ ಟಾಟಾ ಸುಮೋ ಒಂದು ಕಮರಿಗೆ ಬಿದ್ದ ಘಟನೆ ಜೂನ್ 23ರಂದು ಸಂಭವಿಸಿದೆ.
ದೊಡ್ಡಬಳ್ಳಾಪುರದಿಂದ ಧರ್ಮಸ್ಥಳಕ್ಕೆ ಬಂದು ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳು ಈ ರಾಜ್ಯ ಹೆದ್ದಾರಿಯ ಮೂಲಕ ಪ್ರಯಾಣಿಸುವಾಗ ಈ ಅವಘಡ ಸಂಭವಿಸಿದೆ. ಗಂಭೀರ ಗಾಯಗೊಂಡ 3 ಗಾಯಾಳುಗಳಿಗೆ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ. ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿಗೆ ಕೊಂಡೊಯ್ಯಲಾಗಿದೆ.