ಕುಂಟಾಲಪಳಿಕೆ ಶಾಲೆಗೆ ಜೆರಾಕ್ಸ್ ಮತ್ತು ಪ್ರಿಂಟರ್ ಕೊಡುಗೆ

ಶೇರ್ ಮಾಡಿ

ನೇಸರ ಜೂ.26: ಹತ್ಯಡ್ಕ ಗ್ರಾಮದ ಕುಂಟಾಲಪಳಿಕೆ ಶಾಲೆಯಲ್ಲಿ ಇಂದು ಶಿಶಿಲ ಗ್ರಾಮದ ಮುಕುಂದ ದಾಮ್ಲೆ ಇವರ ವತಿಯಿಂದ ಶಾಲೆಗೆ ಅತೀ ಅಗತ್ಯವಾಗಿ ಬೇಕಾಗಿರುವ ಸುಮಾರು 13000 ರೂ ವೆಚ್ಚದ ಜೆರಾಕ್ಸ್ ಮತ್ತು ಪ್ರಿಂಟರ್ ಅನ್ನು ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವೀನ್ ರೆಕ್ಯ ಮತ್ತು ಸೌಮ್ಯಾ ತುಳುಪುಳೆಯವರ ಮೂಲಕ ಶಾಲೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪರವಾಗಿ ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷರಾದ ಸುದರ್ಶನ ಆಚಾರ್ಯ ನಾವಳೆ, ಮುಖ್ಯ ಶಿಕ್ಷಕರಾದ ಉಷಾ, ಶಿಕ್ಷಕಿಯರಾದ ಸವಿತಾ, ಕಸ್ತೂರಿ, ಶಿಕ್ಷಕ ಸಂತೋಷ್ ಉಪಸ್ಥಿತರಿದ್ದು ಜೆರಾಕ್ಸ್ ಯಂತ್ರವನ್ನು ಸ್ವೀಕರಿಸಿದರು. ಗ್ರಾಮಸ್ಥರಾದ ಹರೀಶ್ ಅಭ್ಯಂಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮುಕುಂದ ದಾಮ್ಲೆಯವರಿಗೆ ಹಳ್ಳಿಗಳ ಶಾಲೆಗಳ ಬಗ್ಗೆ ಇರುವ ಕಾಳಜಿಯನ್ನು ಶ್ಲಾಘಿಸಿದರು. ಕಳೆದ ವರ್ಷ ಕೂಡ ತಾಲೂಕಿನ ದಿಡುಪೆ ಭಾಗದ ಶಾಲೆಗಳಿಗೆ ಮಕ್ಕಳ ಕಲಿಕೆಗಾಗಿ ಗಣಕಯಂತ್ರಗಳನ್ನು ನೀಡಿದ ಬಗ್ಗೆ ನೆನಪಿಸಿಕೊಂಡರು. ಈ ಯಂತ್ರವನ್ನು ನೀಡುವಲ್ಲಿ ಸಹಕರಿಸಿದ ಅವಿನಾಶ್ ಭಿಡೆ ಅರಸಿನಮಕ್ಕಿಯವರ ಪ್ರಯತ್ನಕ್ಕೆ ಮತ್ತು ಶಾಲೆಯ ಮೇಲಿರುವ ಕಾಳಜಿಯಿಂದ ಯಂತ್ರವನ್ನು ನೀಡಿದ ಮುಕುಂದ ದಾಮ್ಲೆ ಶಿಶಿಲ ಇವರಿಗೆ ಮುಖ್ಯ ಶಿಕ್ಷಕಿ ಉಷಾ ಧನ್ಯವಾದಗಳನ್ನು ನೀಡಿದರು. ಶಿಕ್ಷಕಿಯಾದ ಸವಿತಾ ಸ್ವಾಗತಿಸಿ. ಪ್ರಾಧ್ಯಾಪಕ ಸಂತೋಷ್ ವಂದನಾರ್ಪಣೆಗೈದರು.


Leave a Reply

error: Content is protected !!