ಕೇವಲ ಶಿಕ್ಷಣ ಇದ್ದರೆ ಸಾಲದು ಸಮಾಜದಲ್ಲಿ ಬೆರೆತು ಬಾಳಲು ಸಂಸ್ಕಾರ ಬೇಕು – ಗಣೇಶ ಐತಾಳ್

ಶೇರ್ ಮಾಡಿ

ನೇಸರ ಜು.05: ಶಿಕ್ಷಣ ಎಲ್ಲಾ ಶಾಲೆಗಳಲ್ಲಿ ದೊರೆಯುತ್ತದೆ. ಆದರೆ ಸಂಸ್ಕಾರಯುಕ್ತ ಶಿಕ್ಷಣ ಕೆಲವೇ ಕೆಲವು ಶಾಲೆಗಳಲ್ಲಿ ಮಾತ್ರ ದೊರೆಯಲು ಸಾಧ್ಯ. ಅಂತಹ ಸಂಸ್ಕಾರ ಭರಿತ ಶಿಕ್ಷಣವು ಗ್ರಾಮೀಣ ಭಾಗವಾದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಸಿಗಲು ಸಾಧ್ಯ ಎಂದು ಸೌತಡ್ಕ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪಾಡಿ ನುಡಿದರು.
ಅವರು ಇತ್ತೀಚೆಗೆ ಪಟ್ರಮೆ ಗ್ರಾಮದ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ವೇದವ್ಯಾಸ ಧ್ಯಾನ ಮಂಟಪ ದಲ್ಲಿ ನಡೆದ ನೂತನ ದಾಖಲಾತಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇನ್ನೋರ್ವ ಅತಿಥಿ ನಿವೃತ್ತ ಶಿಕ್ಷಕ ಗಣೇಶ ಐತಾಳ್ ಮಾತನಾಡಿ, ಕೇವಲ ಶಿಕ್ಷಣ ಇದ್ದರೆ ಸಾಲದು ಸಮಾಜದಲ್ಲಿ ಬೆರೆತು ಬಾಳಲು ಸಂಸ್ಕಾರ ಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಸಂಸ್ಕಾರಗಳನ್ನು ಮೈಗೂಡಿಸಿಕೊಂಡರೆ ಅದು ಜೀವನ ಪರ್ಯಂತ ನಮ್ಮ ಬದುಕಿನಲ್ಲಿ ಬೆರೆತು ಹೋಗುತ್ತದೆ. ವಿದ್ಯಾದಾನಿಗಳು ಇಂತಹ ಶಾಲೆಗಳನ್ನು ಪೋಷಿಸಲು ಮುಂದೆ ಬರಬೇಕು ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರಗೌಡ, ಧರ್ಮದಕಳ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ್ ನಾಯಕ್, ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ಮಂಕುಡೆ, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ದೇರಾಜೆ, ಸದಸ್ಯರುಗಳಾದ ಗಣೇಶ್ ಹಿತ್ತಿಲು, ಕಿರಣ್ ಬಲ್ಯಾಯ, ರಾಜೇಶ್ ರೈ, ದೇವಪಾಲ ಅಜ್ರಿ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ ವೃಂದ ಸಹಕರಿಸಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ದೇರಾಜೆ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ವಂದಿಸಿದರು. ವಿದ್ಯಾರ್ಥಿನಿ ನಮಿತಾ ಕಾರ್ಯಕ್ರಮ ನಿರೂಪಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಪಾಲ್ಗೊಂಡಿದ್ದರು.

ವಿಶೇಷ ಆಕರ್ಷಣೆ

  • 2020- 21 ರಿಂದ 2022-23 ರ ನಡುವೆ ದಾಖಲಾತಿ ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಾರತೀಯ ಸಂಪ್ರದಾಯದಂತೆ ಆರತಿ ಬೆಳಗಿ, ಅಕ್ಷತೆ ಹಾಕಿ, ಸಿಹಿತಿನ್ನಿಸಿ, ಹೋಮಕುಂಡಕ್ಕೆ ಘೃತಾಹುತಿ ಮಾಡಿಸಿ, ಮುಖ್ಯ ಅತಿಥಿಗಳ ಕೈಯಿಂದ ತಿಲಕಧಾರಣೆ ಮಾಡಿಸಲಾಯಿತು.
  • 2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಧನ್ಯ, ಪ್ರೇಮ, ದಿವ್ಯರನ್ನು ಸನ್ಮಾನಿಸಲಾಯಿತು.
  • ವಿಜಯ ಕರ್ನಾಟಕ ಪತ್ರಿಕೆಯ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ನಡೆಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನುು ಗೌರವಿಸಲಾಯಿತು.
ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!