ಅಖಿಲ ಭಾರತ ಜೀವ ವಿಮಾ ಸಂಘಟನೆ ಉಡುಪಿ ವಿಭಾಗ ಇದರ 6ನೇ ಕರ್ನಾಟಕ ರಾಜ್ಯ ಸಮ್ಮೇಳನ

ಶೇರ್ ಮಾಡಿ

ನೇಸರ ಜು.07: ಬೆಳ್ತಂಗಡಿ: ಅಖಿಲ ಭಾರತ ಜೀವ ವಿಮಾ ಸಂಘಟನೆ ಉಡುಪಿ ವಿಭಾಗ ಇದರ 6ನೇ ಕರ್ನಾಟಕ ರಾಜ್ಯ ಸಮ್ಮೇಳನ ಜು.6 ರಂದು ಶ್ರೀ.ಧ.ಮಂಜುನಾಥೇಶ್ವರ ಕಲಾ ಭವನದಲ್ಲಿ ದಿ.ರಮೇಶ್ ಕುಮಾರ್ ಮೂಲ್ಕಿ ವೇದಿಕೆಯಲ್ಲಿ ನಡೆಯಿತು.
ಸಂಘಟನೆಯ ದಕ್ಷಿಣ ಮಧ್ಯವಲಯ ಅಧ್ಯಕ್ಷ ಎಲ್.ಮಂಜುನಾಥ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬೆಳ್ತಂಗಡಿ ಉಪಗ್ರಹ ಸೇರಿದಂತೆ ರಾಜ್ಯದ 16 ಉಪಗ್ರಹ ಶಾಖೆಗಳನ್ನು ಪೂರ್ಣ ಪ್ರಮಾಣದ ಶಾಖೆಯನ್ನಾಗಿ ಮಾಡಬೇಕು ಹಾಗೂ ಗುಲ್ಬರ್ಗ ಮತ್ತು ರಾಮ ನಗರದಲ್ಲಿ ವಿಭಾಗ ಕಛೇರಿಯನ್ನು ತೆರೆಯಬೇಕು ಎಂದು ಸಂಘಟನೆ ಮೂಲಕ ಆಗ್ರಹಿಸಲಾಗುವುದು. 70 ವರ್ಷಗಳ ಇತಿಹಾಸವಿರುವ ಜೀವ ವಿಮಾ ನಿಗಮದ ಆಧಾರ ಸ್ತಂಭವಾಗಿ ದುಡಿಯುತ್ತಿರುವ 11.33 ಲಕ್ಷ ವಿಮಾ ಪ್ರತಿನಿಧಿಗಳ ಅಭಿವೃದ್ಧಿಗಾಗಿ 90 ವಿವಿಧ ಬೇಡಿಕೆಗಳಿಗೆ ಹೋರಾಟ ನಡೆಸುತ್ತಾ ಬಂದಿದೆ. ಗ್ರಾಚ್ಯೂಟಿ ತಿದ್ದುಪಡಿ ಮೂಲಕ ಪ್ರತಿಯೊಬ್ಬ ಪ್ರತಿನಿಧಿಗೆ 15 ಲಕ್ಷ ಏರಿಸಬೇಕು. ಪಿಂಚಣಿಯನ್ನು ಹೂಡಿಕೆಯ ಲಾಭಾಂಶದಲ್ಲಿ ಲೆಕ್ಕಾಚಾರದ ಪ್ರಕಾರ ಪ್ರಾರಂಭಿಸಬೇಕು. 1 ವರ್ಷ ಅವಧಿ ಪೂರೈಸಿದ ಎಲ್ಲಾ ಪ್ರತಿನಿಧಿಗಳಿಗೆ ಗುಂಪುವಿನ ಯೋಜನೆ ಕೈಗೊಳ್ಳಬೇಕು ಹಾಗೂ ಪಾಲಿಸಿದಾರರಿಗೆ ವಿಮಾ ಕಂತುಗಳ ಮೇಲೆ ವಿಧಿಸಿರುವ ಜಿಎಸ್‌ಟಿ ತೆರಿಗೆಯನ್ನು ತಿದ್ದುಗೊಳಿಸಬೇಕು ಮುಂತಾದ ಬೇಡಿಕೆಗಳಿಗೆ ಸಂಘಟನೆಯೂ ಕಾನೂನಾತ್ಮಕ ಹೋರಾಟ ಸಿದ್ದ ಎಂದರು.

ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಉಡುಪಿ ವಿಭಾಗದ ಅಧ್ಯಕ್ಷ ಸಮ್ಮೇಳನದ ಕೋಶಾಧಿಕಾರಿ ಎ.ಎಸ್. ಲೋಕೇಶ್ ಶೆಟ್ಟಿ ಧರ್ಮಸ್ಥಳ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಸ್.ಭಟ್ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ ದಕ್ಷಿಣ ಮಧ್ಯ ವಲಯದ ಪ್ರಧಾನ ಕಾರ್ಯದರ್ಶಿ ಪಿ.ಎಲ್. ನರಸಿಂಹ ರಾವ್, ರಾಜ್ಯ ಸಮಿತಿ ಗೌರವ ಅಧ್ಯಕ್ಷ ಡಾ.ಕೆ.ಪ್ರಕಾಶ್, ಕೋಶಾಧಿಕಾರಿ ದಕ್ಷಿಣ ಮಧ್ಯ ವಲಯದ ಜಿ.ವಿ.ವಿ. ಆರ್.ಕೆ.ಅಚಾರಿ, ದಕ್ಷಿಣ ಮಧ್ಯವಲಯದ ಕಾರ್ಯಕಾರಿ ಮಂಡಳಿ ಸದಸ್ಯೆ ರೇಖಾ ಕೋಟೆಕಾರ್, ರಾಜ್ಯ ಸಮಿತಿ ಕಾರ್ಯಧ್ಯಕ್ಷ ಜಿ.ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಯೋಗೀಶ್, ಸಂಘಟನಾ ಕಾರ್ಯದರ್ಶಿ ಬಿ.ಜಯರಾಮ್, ಕೋಶಾಧಿಕಾರಿ ಡಿ. ಶಿವಮೂರ್ತಿ, ಉಡುಪಿ ಹಿರಿಯ ವಿಭಾಗಾಧಿಕಾರಿ ರಾಜೇಶ್ ವಿ. ಮುದೋಳ್, ಉಡುಪಿ ವಿಭಾಗದ ಮಾರುಕಟ್ಟೆ ಪ್ರಭಂದಕ ಎನ್. ರಮೇಶ್ ಭಟ್, ವಿಕ್ರಯ ಪ್ರಭಂದಕ ಕೆ. ಸದಾಶಿವ ಭಟ್, ಬಂಟ್ವಾಳ ಶಾಖೆಯ ಮುಖ್ಯ ಪ್ರಬಂಧಕ ಯು.ಎನ್.ಗೌಡ, ಬೆಳ್ತಂಗಡಿ ಶಾಖೆಯ ಪ್ರಬಂಧಕ ವಿ.ಎಸ್.ಕುಮಾರ್, ಉಡುಪಿ ವಿಭಾಗದ ಪ್ರದಾನ ಕಾರ್ಯದರ್ಶಿ ಪ್ರಭಾಕರ್ ಬಿ.ಕುಂದರ್, ಉಡುಪಿ ವಿಭಾಗದ ಎನ್‌ಐಎಫ್‌ಡ್ಲುಐ ಅದ್ಯಕ್ಷ ಮಂಜುನಾಥ ಹೆಬ್ಬಾರ್, ರಾಜ್ಯ ಸಮ್ಮೇಳನದ ಗೌರವ ಅಧ್ಯಕ್ಷ ಕೆ.ಕೇಶವ ಪ್ರಭು, ಪ್ರಧಾನ ಸಂಚಾಲಕ ಪ್ರಕಾಶ್ ಕುಮಾರ್ ಕೆ, ಗೀತಾ ರಮೇಶ್ ಮೂಲ್ಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲೋಕೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಜೀವ ವಿಮಾ ನಿಗಮದಲ್ಲಿ ದುಡಿಯುತ್ತಿರುವ ಪ್ರತಿನಿಧಿಗಳಿಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳು ಉದ್ಯೋಗದ ಭದ್ರತೆ ಆರೋಗ್ಯ ವಿಮೆ ಗುಂಪು ವಿಮೆ ಗ್ರಾಚ್ಯೂಟಿ, ಕಲ್ಯಾಣ ನಿಧಿ ಸ್ಥಾಪನೆ, ಕಮೀಷನ್ ದರ ಹೆಚ್ಚಳ ಮೊದಲಾದ ಬೇಡಿಕೆಗಳ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದರು. ಈ ಸಮ್ಮೇಳನದಲ್ಲಿ ರಾಜ್ಯದ 8 ವಿಭಾಗಗಳಾದ ಮೃಸೂರು, ರಾಯಚೂರು, ಬೆಳಗಾವಿ, ಉಡುಪಿ, ಧಾರವಾಡ, ಶಿವಮೊಗ್ಗ, ಬೆಂಗಳೂರು ಐ ಮತ್ತು ಐಐ ನೇ ವಿಭಾಗದ ಆಯ್ದ ಪ್ರತಿನಿಧಿಗಳು ಭಾಗವಹಿಸಿದ್ದರು. ಬಂಟ್ವಾಳ ಮತ್ತು ಬೆಳ್ತಂಗಡಿ ಶಾಖೆಯ ಪ್ರತಿನಿಧಿಗಳು ಉಪಸ್ಥಿತರಿದ್ದು ಸಹಕರಿಸದರು. ಕಾರ್ಯಕ್ರಮ ಮೊದಲು ಸಂಘಟನೆಗಾಗಿ ದುಡಿದು ಅಪಾಘಾತದಲ್ಲಿ ನಿಧನರಾದ ಸಂಘಟನೆಯ ರಾಜ್ಯ ಅಧ್ಯಕ್ಷ ರಮೇಶ್ ಕುಮಾರ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪ್ರತಿನಿಧಿ ಜಗನ್ನಾಥ ದೇವಾಡಿಗ ಪ್ರಾರ್ಥಿಸಿ. ಸ್ವಾಗತ ಸಮಿತಿ ಅದ್ಯಕ್ಷ ಎಮ್.ಎಸ್ ಭಟ್ ಪುತ್ತೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಅಮೀನ್ ವಂದಿಸಿದರು. ಶಿಕ್ಷಕ ಧರಣೇಂದ್ರ ಕೆ.ಜೈನ್ ನಿರೂಪಿಸಿದರು. ಬಳಿಕ ವಿವಿದ ಅಧಿವೇಶನ ನಡೆಯಿತು.

Leave a Reply

error: Content is protected !!