ದ.ಕ. ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ: ಡಾ.ಎಂ.ಪಿ ಶ್ರೀನಾಥ್

ಶೇರ್ ಮಾಡಿ

ನೇಸರ ನ17: ನಾಡಿನ ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ, ನೆಲ-ಜಲದ ಬಗ್ಗೆ ಪ್ರಾಮಾಣಿಕ ಸೇವೆಗಾಗಿ ಒಬ್ಬ ಕ್ರೀಯಾಶೀಲ ಸಂಘಟಕನಾಗಿ, ಕನ್ನಡಪರ ಕಾರ್ಯಕರ್ತನಾಗಿ, ಕಳೆದ ಕೆಲವು ದಶಕಗಳಿಂದ ಕನ್ನಡ ಸಾಹಿತ್ಯ ಸೇವೆಯಲ್ಲಿ ನಿರತನಾಗಿದ್ದೇನೆ.
ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತನ್ನು ಕ್ರೀಯಾಶೀಲವಾಗಿ ಕಟ್ಟುವ ಮತ್ತು ಪುನರ್ ರೂಪಿಸುವ ಅಗತ್ಯವಿದೆ. ಜಿಲ್ಲೆಯ ಕನ್ನಡ ಭವನದ ಮತ್ತು ತಾಲೂಕಿನಲ್ಲಿ ಕನ್ನಡ ಭವನದ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶಾಲಾ,ಕಾಲೇಜುಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಮಾಡುವುದರ ಮೂಲಕ ವಿದ್ಯಾರ್ಥಿ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ನಿರ್ಮಿಸುವುದು, ಜಿಲ್ಲೆಯಲ್ಲಿರುವ ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸಿ ಅವರಿಗೆ ಸಾಹಿತ್ಯಕ್ಕೆ ವೇದಿಕೆ ಕಲ್ಪಿಸಿ ಕೊಡುವುದು, ಏಕಮುಖವಾದ ಚಿಂತನೆಯ ಕಾರ್ಯಕ್ರಮಗಳಿಗಿಂತ ಸೃಜನಶೀಲವಾದ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುವುದು, ಸಮ್ಮೇಳನಗಳಲ್ಲಿ ಹಿರಿಯ ಸಾಹಿತಿಗಳ ಮಾರ್ಗದರ್ಶನದಿಂದ ಯುವ ಸಾಹಿತಿ, ಕವಿಗಳಿಗೆ ಹೆಚ್ಚಿನ ಅವಕಾಶ ಪ್ರೇರಣೆ ಲಭಿಸುವಂತೆ ಮಾಡುವುದು.


ಪರಿಷತ್ತಿನ ವತಿಯಿಂದ ಯೋಜನೆ : ಚಿಂತನಾ ಚಾವಡಿ, ಕನ್ನಡ ಕಾವ್ಯ ಪರಂಪರೆಗಳ ಪರಿಚಯ ಹೀಗೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ನಾನು 26 ವರ್ಷಗಳ ಕಾಲ ಬೋಧನಾ ಅನುಭವ ಹೊಂದಿದ್ದು, ಅನೇಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳನ್ನು ಸಂಘಟಿಸಿದ ಮತ್ತು ಭಾಗವಹಿಸಿದ ಅನುಭವ ಇದೆ. ಸಾವಿರಕ್ಕಿಂತಲೂ ಹೆಚ್ಚಿನ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರನ್ನು ಮಾಡಿದ್ದೇನೆ. ಬೆಂಗಳೂರು, ಮಡಿಕೇರಿ, ಮೈಸೂರು, ಧಾರವಾಡಗಳಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ದುಡಿದ ಅನುಭವ ಇದೆ. ಮುಖ್ಯವಾಗಿ ಉಜಿರೆಯಲ್ಲಿ 2017ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನೆ, ಜಿಲ್ಲೆ ಮತ್ತು ತಾಲೂಕುಗಳಲ್ಲಿ ಹಲವು ಸಮ್ಮೇಳನಗಳನ್ನು ಸಂಯೋಜನೆ ಮಾಡಿದ್ದು ಸಾಹಿತ್ಯದ ಕೆಲಸಗಳಿಗೆ ಪೂರಕವಾಗಿದೆ. ಉಜಿರೆಯಲ್ಲಿ 2009ರಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಕಾರ್ಯದರ್ಶಿಯಾಗಿ ದುಡಿದಿದ್ದೇನೆ. ಅನೇಕ ಪುಸ್ತಕಗಳ ಪ್ರಕಟಣೆಯ ಸಂಯೋಜನೆ ಮಾಡಲಾಗಿದೆ. ಉಜಿರೆ ಜೇಸಿಐನ ಅಧ್ಯಕ್ಷನಾಗಿ ಅನೇಕ ಜನಪರ ಕಾರ್‍ಯಕ್ರಮಗಳನ್ನು ರೂಪಿಸಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಜನಸೇವೆ ಮಾಡಿರುತ್ತೇನೆ.
ನ.21 ರಂದು ನಡೆಯಲಿರುವ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿ ಸಹಕರಿಸಬೇಕು ಎಂದರು.
ಪ್ರತಿಕಾಗೋಷ್ಠಿಯಲ್ಲಿ ಉಜಿರೆಯ ನಿವೃತ್ತ ಉಪನ್ಯಾಸಕ ಡಾ. ಎಸ್.ಡಿ ಶೆಟ್ಟಿ, ವಾಣಿ ಪ.ಪೂ. ಶಾಲಾ ಪ್ರಾಂಶುಪಾಲ ಯದುಪತಿ ಗೌಡ, ಉಜಿರೆ ಜನಾರ್ದನ ದೇವಸ್ಥಾನದ ಶರತ್‌ಕೃಷ್ಣ ಪಡ್ವೆಟ್ನಾಯ, ನಿವೃತ್ತ ಶಿಕ್ಷಕ ಕಮಲಾಕ್ಷ ಆಚಾರ್, ಉಪಸ್ಥಿತರಿದ್ದರು.

Leave a Reply

error: Content is protected !!