ನೇಸರ ಜು.09: ಆಕರ್ಷಕ ರಸ್ತೆಗಳನ್ನು ನೋಡಲು ಈ ಹಿಂದೆ ಬೆಂಗಳೂರಿಗೆ ಹೋಗುವ ಅಗತ್ಯ ಇತ್ತು. ಇದೀಗ ಇಂತಹ ರಸ್ತೆ ಉಜಿರೆಯಲ್ಲಿ ನಿರ್ಮಾಣವಾಗಿದೆ. ಇದು ಜನ, ವಾಹನ ಸಂಚಾರಕ್ಕೆ ಹೆಚ್ಚಿನ ಅನುಕೂಲ ನೀಡಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಅಭಿವೃದ್ದಿ ಹೊಂದಿದ ಉಜಿರೆ ಕಾಲೇಜು ರಸ್ತೆಯ ಹೈಟೆಕ್ ದಾರಿದೀಪ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಅಭಿವೃದ್ಧಿಗೆ ಪಣ ತೊಟ್ಟಿದ್ದು ಮುಂದಿನ ದಿನಗಳಲ್ಲಿ ಉಜಿರೆ ಸಹಿತ ತಾಲೂಕಿನ ಎಲ್ಲಾ ಕಡೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಪಂಚಾಯತಿ ಸದಸ್ಯರು, ಪಿ.ಡಿ.ಒ. ಪಿ.ಎಚ್.ಪ್ರಕಾಶ್ ಶೆಟ್ಟಿ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ ಮತ್ತು ವರ್ತಕರು, ಶಿವಳ್ಳಿ ಸಭಾದ ತಾಲೂಕು ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಬೆಳ್ತಂಗಡಿ ಬಿಜೆಪಿ ಮಂಡಲ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂ.ಸದಸ್ಯೆ ಉಷಾ ಕಿರಣ ಕಾರಂತ್ ವಂದಿಸಿದರು.