ನೇಸರ ಜು.13: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕಲ್ಮಂಜ ಬಿ ಘಟಕದ ವತಿಯಿಂದ ಸಾರ್ವಜನಿಕರಿಗಾಗಿ ಕೆಸರ್ ಕಂಡೊಡು ನೇಜಿ ಗೌಜಿ ಕಾರ್ಯಕ್ರಮವು ಅಂತರ ಬೈಲು ಎಂಬಲ್ಲಿ ನಡೆಯಿತು.
ಶಾಸಕ ಹರೀಶ್ ಪೂಂಜ ಗದ್ದೆಗೆ ಪೂಜೆ ಸಲ್ಲಿಸಿ, ಗದ್ದೆ ಉಳುಮೆ ಮಾಡಿ, ನೇಜಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಹಿರಿಯರ ಸಂಸ್ಕಾರ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕೃಷಿ ಬದುಕಿಗೆ ಬೇಕಾದ ಪದ್ಧತಿ ಅನಾವರಣಗೊಳ್ಳಲು ಗದ್ದೆ ಬೇಸಾಯ ಪ್ರಾಮುಖ್ಯವಾಗಿದೆ ಎಂದರು.
ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಕಲ್ಮಂಜ ಬಿ ಘಟಕ ಗೌರವಾಧ್ಯಕ್ಷರಾದ ರಮೇಶ್ ಗೌಡ ಗುಲ್ಲೋಡಿ. ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕಲ್ಮಂಜ ಬಿ ಘಟಕದ ಅಧ್ಯಕ್ಷರಾದ ರಾಘವ ಗೌಡ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿಯ ಗೌರವಾಧ್ಯಕ್ಷ ಪದ್ಮ ಗೌಡ, ಅಧ್ಯಕ್ಷ ಕುಶಾಲಪ್ಪ ಗೌಡ, ನಿರ್ದೇಶಕರಾದ ಜಯಾನಂದ ಗೌಡ, ತನಿಯಪ್ಪ ಗೌಡ. ಜಿಲ್ಲಾ ಯುವ ವೇದಿಕೆ ಕಾರ್ಯದರ್ಶಿ ಗಣೇಶ್ ಗೌಡ ಕಲಾಯಿ. ವಾಣಿ ಸೌಹಾರ್ದ ಕೋ – ಆಪರೇಟಿವ್ ಸೊಸೈಟಿ ನಿರ್ದೇಶಕ ಬಿ ಗೋಪಾಲಕೃಷ್ಣ ಗುಲ್ಲೋಡಿ, ಸ್ಪಂದನ ಸೇವಾ ಸಂಘದ ಸಂಚಾಲಕರಾದ ಸುರೇಶ್ ಕೌಡಂಗೆ, ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಯುವ ವೇದಿಕೆಯ ಅಧ್ಯಕ್ಷರಾದ ಯಶವಂತ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿದ ಆಟೋಟ ಸ್ಪರ್ಧೆಗಳು ನಡೆದವು. ಕಾರ್ಯಕ್ರಮವು ಹಡೀಲು ಬಿದ್ದ ಗದ್ದೆಯಲ್ಲಿ ನಡೆದಿದ್ದು ಗದ್ದೆಯಲ್ಲಿ ನೇಜಿ ನಾಟಿ ಮಾಡಲಾಯಿತು.