ಭಾರೀ ಮಳೆ ರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ ➤ವಿದ್ಯುತ್ ಕಂಬಗಳಿಗೆ ಹಾನಿ ➤ ತಕ್ಷಣ ಸ್ಪಂದಿಸಿ ಮರ ತೆರವು ಗೊಳಿಸಿದ ಅಧಿಕಾರಿಗಳು

ಶೇರ್ ಮಾಡಿ

ನೇಸರ ಜು.14: ಇಂದು (ಜು.14) ಮಧ್ಯಾಹ್ನ ಅನಿರೀಕ್ಷಿತವಾಗಿ ಬೀಸಿದ ಗಾಳಿ ಮಳೆಗೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ ಹೆದ್ದಾರಿ ತಡೆಯಾಗಿದ್ದಲ್ಲದೇ, ಎರಡು ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಿದೆ.

ತಕ್ಷಣ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಮಧುಸೂದನ್ ಹಾಗೂ ಸಿಬ್ಬಂದಿಗಳು, ನೆಲ್ಯಾಡಿ ಹೊರ ಠಾಣೆಯ ಹೆಡ್ ಕಾನ್ ಸ್ಟೇಬಲ್ ಬಾಲಕೃಷ್ಣ ಹಾಗೂ ಸಿಬ್ಬಂದಿಗಳು, ಮೆಸ್ಕಾಂ ನ ಜೆ ಇ ರಮೇಶ್ ಹಾಗೂ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ಕ್ರಮವನ್ನು ವಹಿಸಿ, ಸಂಚಾರ ಸುಗಮಗೊಳಿಸಿಕೊಟ್ಟರು.

Leave a Reply

error: Content is protected !!