ಕೊಕ್ಕಡ- ಬೆನಕ- ಪಾಲಾಲೆ ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆ ಈಡೇರಿಸಿದ ಕೊಕ್ಕಡ ಪಂಚಾಯತ್

ಶೇರ್ ಮಾಡಿ

ನೇಸರ ಜು.19: ಕೊಕ್ಕಡ- ಬೆನಕ – ಪಾಲಾಲೆ ಸಂಪರ್ಕಿಸುವ ಸಾರ್ವಜನಿಕ ರಸ್ತೆಯು ಬೆಳ್ತಂಗಡಿ ತಾಲೂಕು ಮತ್ತು ಕಡಬ ತಾಲೂಕಿನ ಗಡಿ ಭಾಗದ ರಸ್ತೆ ಇದಾಗಿತ್ತು. ಆದುದರಿಂದ ಈ ರಸ್ತೆಯ ಯಾವುದೇ ಕೆಲಸ ಕಾರ್ಯಗಳು ನಡೆಯದೆ ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿತ್ತು. ರಸ್ತೆಯ ಮೇಲೆ ನೀರು ಹರಿದು ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ.

ಈ ಬಗ್ಗೆ ಸಾರ್ವಜನಿಕರ ಮನವಿಯ ಮೇರೆಗೆ ಕೊಕ್ಕಡ ಪಂಚಾಯತ್ ಅಧ್ಯಕ್ಷರಾದ ಯೋಗೀಶ ಆಲಂಬಿಲ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ವಾರ್ಡಿನ ಸದಸ್ಯ ಪುರುಷೋತ್ತಮ ರವರು ತಕ್ಷಣ ಸ್ಪಂದಿಸಿ, ಮೋರಿಯನ್ನು ಅಳವಡಿಸಿ ರಸ್ತೆಯನ್ನು ನೇರವಾಗಿ ನಿರ್ಮಿಸಿದರು.

ತಕ್ಷಣ ಸ್ಪಂದಿಸಿ ಆ ಭಾಗದ ಜನರ ಬಹುದಿನದ ಬೇಡಿಕೆಯನ್ನು ಈಡೇರಿಸಿದ ಅಧಿಕಾರಿ ವರ್ಗದವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

error: Content is protected !!